Skip to content

Jio Kannada News

Kannada News

banner-promo-full-green
Primary Menu
  • HOME
  • ಕ್ರಿಕೆಟ್
  • ರಾಜ್ಯ
  • ದೇಶ
  • ಆರೋಗ್ಯ
  • ಸಿನಿಮಾ
  • ಉದ್ಯೋಗ
  • ಕ್ರೈಮ್
  • ಆಟೋಮೊಬೈಲ್
  • ಟೆಕ್
  • Contact Us
Light/Dark Button
Wtach Live
  • Home
  • ಆಟೋಮೊಬೈಲ್
  • ಭಾರತದಲ್ಲಿ ಅತೀ ಹೆಚ್ಚು ಮೈಲೇಜ್ ನೀಡುವ ಸ್ಕೂಟರ್ ಯಾವುದು ಗೊತ್ತಾ?
  • ಆಟೋಮೊಬೈಲ್

ಭಾರತದಲ್ಲಿ ಅತೀ ಹೆಚ್ಚು ಮೈಲೇಜ್ ನೀಡುವ ಸ್ಕೂಟರ್ ಯಾವುದು ಗೊತ್ತಾ?

Jiokannadanews Posted on 4 weeks ago 1 minute read
top mileage ev scooter in india

ev scooters

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಳಕೆ ಮತ್ತು ಮಾರಾಟ ಗಣನೀಯವಾಗಿ ಹೆಚ್ಚಾಗಿದೆ. 2025-26ರ ಅಂಕಿಅಂಶಗಳ ಪ್ರಕಾರ, ಭಾರತವು ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯಲ್ಲಿ ಹೊಸ ಮೈಲಿಗಲ್ಲುಗಳನ್ನು ತಲುಪುತ್ತಿದೆ. 2025ರಲ್ಲಿ ಭಾರತದಲ್ಲಿ ಒಟ್ಟು 22.7 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿವೆ. ಇದರಲ್ಲಿ ಶೇಕಡಾ 56ಕ್ಕಿಂತ ಹೆಚ್ಚು ಪಾಲನ್ನು ಅಂದರೆ ಸುಮಾರು 12.8 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್‌ಗಳೇ ಹೊಂದಿವೆ.

ಭಾರತದಲ್ಲಿ ಮಾರಾಟವಾಗುವ ಒಟ್ಟು ದ್ವಿಚಕ್ರ ವಾಹನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಪಾಲು 2024ರಲ್ಲಿ ಶೇ. 6.07 ಇದ್ದದ್ದು, 2025ರ ವೇಳೆಗೆ ಶೇ. 6.30ಕ್ಕೆ ಏರಿಕೆಯಾಗಿದೆ. ಟಿವಿಎಸ್ (TVS), ಬಜಾಜ್ (Bajaj) ಮತ್ತು ಓಲಾ (Ola) ಅಂತಹ ಕಂಪನಿಗಳು ಹೆಚ್ಚಿನ ರೇಂಜ್ ಮತ್ತು ಉತ್ತಮ ತಂತ್ರಜ್ಞಾನದ ಸ್ಕೂಟರ್‌ಗಳನ್ನು ಪರಿಚಯಿಸುತ್ತಿರುವುದು ಗ್ರಾಹಕರನ್ನು ಆಕರ್ಷಿಸುತ್ತಿದೆ. ಭಾರತದಲ್ಲಿ ಪ್ರಸ್ತುತ ಲಭ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್​ಗಳಲ್ಲಿ ಅತಿ ಹೆಚ್ಚು ಮೈಲೇಜ್ (ರೇಂಜ್) ನೀಡುವ ಪ್ರಮುಖ ಇವಿ ಸ್ಕೂಟರ್‌ಗಳ ವಿವರ ಈ ಕೆಳಗಿನಂತಿದೆ…

Ola S1 Pro Gen 3 (ಓಲಾ S1 ಪ್ರೊ):

  • ರೇಂಜ್: ಇದು ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 320 ಕಿ.ಮೀ ವರೆಗೆ ಚಲಿಸುತ್ತದೆ.
  • ವೇಗ: ಗಂಟೆಗೆ ಗರಿಷ್ಠ 130 ಕಿ.ಮೀ ವೇಗದಲ್ಲಿ ಚಲಿಸಬಲ್ಲದು.
  • ವಿಶೇಷತೆ: ಕ್ರೂಸ್ ಕಂಟ್ರೋಲ್ ಮತ್ತು ಅಡ್ವಾನ್ಸ್ಡ್ ಡಿಸ್ಪ್ಲೇ ಫೀಚರ್‌ಗಳನ್ನು ಹೊಂದಿದೆ.

Simple One Gen 2 (ಸಿಂಪಲ್ ಒನ್):

  • ರೇಂಜ್: ಇದು ಸರಿ ಸುಮಾರು 265 ಕಿ.ಮೀ ಚಲಿಸುವ ಸಾಮರ್ಥ್ಯ ಹೊಂದಿದೆ.
  • ಬ್ಯಾಟರಿ: 5.0 kWh ಸಾಮರ್ಥ್ಯದ ಬ್ಯಾಟರಿ ಹೊಂದಿದೆ
  • ವಿಶೇಷತೆ: ಕೇವಲ 2.87 ಸೆಕೆಂಡುಗಳಲ್ಲಿ 0-40 ಕಿ.ಮೀ ವೇಗ ಪಡೆಯುತ್ತದೆ.

TVS iQube ST (ಟಿವಿಎಸ್ ಐಕ್ಯೂಬ್ ST):

  • ರೇಂಜ್: ಈ ಸ್ಕೂಟರ್ 212 ಕಿ.ಮೀ ರೇಂಜ್ ನೀಡುತ್ತದೆ. ಅಲ್ಲದೆ ಕಿ.ಮೀ 115 ಕಿ.ಮೀ/ಗಂ
  • ಸ್ಟೋರೇಜ್: 32 ಲೀಟರ್‌ನ ದೊಡ್ಡ ಸ್ಟೋರೇಜ್ ಮತ್ತು ಟಚ್‌ಸ್ಕ್ರೀನ್ ಡಿಸ್ಪ್ಲೇ ಈ ಸ್ಕೂಟರ್​ನಲ್ಲಿದೆ.
  • ವಿಶೇಷತೆ: ಕುಟುಂಬಕ್ಕೆ ಸೂಕ್ತವಾದ ಸ್ಕೂಟರ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

Ola S1 X (4 kWh variant):

  • ರೇಂಜ್: ಇದು ಸುಮಾರು 242 ಕಿ.ಮೀ ಮೈಲೇಜ್ ನೀಡುತ್ತದೆ.
  • ಬೆಲೆ: ಹೆಚ್ಚು ರೇಂಜ್ ಬೇಕು ಆದರೆ ಬಜೆಟ್ ಕಡಿಮೆ ಇರಬೇಕು ಎನ್ನುವವರಿಗೆ ಇದು ಉತ್ತಮ ಆಯ್ಕೆ.

ರೇಂಜ್ (ಕಿ.ಮೀ) ಮತ್ತು ಗರಿಷ್ಠ ವೇಗ

  • Ola S1 Pro Gen3 320 ಕಿ.ಮೀ ರೇಂಜ್, 130 ಕಿ.ಮೀ/ಗಂಟೆಗೆ
  • Simple One Gen 2 265 ಕಿ.ಮೀ ರೇಂಜ್, 115 ಕಿ.ಮೀ/ಗಂಟೆಗೆ
  • Ola S1 X (4 kWh) 242 ಕಿ.ಮೀ ರೇಂಜ್, 123 ಕಿ.ಮೀ/ಗಂಟೆಗೆ
  • TVS iQube ST 212 ಕಿ.ಮೀ ರೇಂಜ್, 82 ಕಿ.ಮೀ/ಗಂಟೆಗೆ
  • Ather 450X 161 ಕಿ.ಮೀ ರೇಂಜ್​,  90 ಕಿ.ಮೀ/ಗಂಟೆಗೆ

ಸೂಚನೆ: ಈ ಮೇಲೆ ತಿಳಿಸಲಾದ ರೇಂಜ್‌ಗಳು ‘ಸರ್ಟಿಫೈಡ್ ರೇಂಜ್’ ಆಗಿರುತ್ತವೆ. ರಸ್ತೆಯ ಪರಿಸ್ಥಿತಿ ಮತ್ತು ಚಾಲನಾ ವಿಧಾನದ ಮೇಲೆ ನೈಜ ರೇಂಜ್ (True Range) ಸ್ವಲ್ಪ ವ್ಯತ್ಯಾಸವಾಗಬಹುದು.

ಎಲೆಕ್ಟ್ರಿಕ್ ಸ್ಕೂಟರ್ ಬೆಲೆ:

  • Ola S1 Pro Gen 3 (ಓಲಾ S1 ಪ್ರೊ): 
    ಬೆಲೆ: ಇದರ ಆನ್-ರೋಡ್ ಬೆಲೆ ಸರಿಸುಮಾರು ₹1.38 ಲಕ್ಷದಿಂದ ₹1.92 ಲಕ್ಷದವರೆಗೆ ಇರುತ್ತದೆ.
    ವಿವರ: ಟಾಪ್ ಎಂಡ್ ಮಾಡೆಲ್ (5.2 kWh) ಬೆಲೆ ಸುಮಾರು ₹1.84 ಲಕ್ಷದಿಂದ ₹1.99 ಲಕ್ಷದವರೆಗೂ ಹೋಗಬಹುದು.

 

  • Simple One Gen 2 (ಸಿಂಪಲ್ ಒನ್)
    ಬೆಲೆ: ಇದರ ಎಕ್ಸ್ ಶೋರೂಮ್ ಬೆಲೆ ಸುಮಾರು ₹1.69 ಲಕ್ಷದಿಂದ ₹1.78 ಲಕ್ಷದವರೆಗೆ ಇರುತ್ತದೆ.
    ಬೆಂಗಳೂರು ಆನ್-ರೋಡ್ ಬೆಲೆ: ಸರಿಸುಮಾರು ₹1.74 ಲಕ್ಷ (4.5 kWh ವೇರಿಯಂಟ್).

 

  • TVS iQube ST (ಟಿವಿಎಸ್ ಐಕ್ಯೂಬ್ ST)
    ಬೆಲೆ: ಈ ಸ್ಕೂಟರ್‌ನ (5.3 kWh ವೇರಿಯಂಟ್) ಆನ್-ರೋಡ್ ಬೆಲೆ ಬೆಂಗಳೂರಿನಲ್ಲಿ ಸರಿಸುಮಾರು ₹1.70 ಲಕ್ಷ ಆಗಿರುತ್ತದೆ.
    ಆಯ್ಕೆಗಳು: ಬೇರೆ ಕಡಿಮೆ ರೇಂಜ್ ಹೊಂದಿರುವ ಐಕ್ಯೂಬ್ ಮಾಡೆಲ್‌ಗಳು ₹1.24 ಲಕ್ಷದಿಂದ ಆರಂಭವಾಗುತ್ತವೆ.

 

  • Ola S1 X (4 kWh variant)
    ಬೆಲೆ: ಇದು ಹೆಚ್ಚು ರೇಂಜ್ ನೀಡುವ ಕೈಗೆಟುಕುವ ಸ್ಕೂಟರ್ ಆಗಿದೆ. ಇದರ ಆನ್-ರೋಡ್ ಬೆಲೆ ಸುಮಾರು ₹1.06 ಲಕ್ಷದಿಂದ ₹1.28 ಲಕ್ಷದವರೆಗೆ ಇರುತ್ತದೆ.

ಇದನ್ನೂ ಓದಿ:ಕರ್ನಾಟಕದಲ್ಲಿ ಪೊಲೀಸರಿಗಿಂತ ಕಳ್ಳರದ್ದೇ ‘ಮೇಲುಗೈ’

ಸೂಚನೆ: ಈಮೇಲೆ ನೀಡಲಾದ ಬೆಲೆಗಳು ನಿಮ್ಮ ನಗರ, ಡೀಲರ್ ಶಿಪ್ ಮತ್ತು ವಿಮಾ (Insurance) ಆಯ್ಕೆಗಳ ಮೇಲೆ ಸ್ವಲ್ಪ ವ್ಯತ್ಯಾಸವಾಗಬಹುದು. ನಿಖರವಾದ ಬೆಲೆಗಾಗಿ ನಿಮ್ಮ ಹತ್ತಿರದ ಶೋರೂಮ್ ಅನ್ನು ಸಂಪರ್ಕಿಸುವುದು ಉತ್ತಮ.

 

About the Author

Jiokannadanews

Administrator

jiokannadanews.com

Visit Website View All Posts

Post navigation

Previous: ನೀವು ಮಕ್ಕಳಿಗೆ ಜೆಮ್ಸ್​ ನೀಡುತ್ತಿದ್ದೀರಾ? ಹಾಗಿದ್ರೆ ಈ ಬಗ್ಗೆ ಗೊತ್ತಿರಲಿ
Next: ಇರಾನ್ vs ಇಸ್ರೇಲ್/ಅಮೆರಿಕ ಯುದ್ದ ಶುರು!

Trending News

16.7 ಸಾವಿರ ಕೋಟಿಗೆ RCB ಮಾರಾಟ..! IMG-20260324-WA0024 1
  • ಕ್ರಿಕೆಟ್

16.7 ಸಾವಿರ ಕೋಟಿಗೆ RCB ಮಾರಾಟ..!

Posted on 17 hours ago
IPL 2026: RCB ತಂಡದ ಪ್ರಮುಖ ಆಟಗಾರ ಔಟ್..! IPL 2026: RCB's Yash Dayal won't be playing this season 2
  • ಕ್ರಿಕೆಟ್

IPL 2026: RCB ತಂಡದ ಪ್ರಮುಖ ಆಟಗಾರ ಔಟ್..!

Posted on 20 hours ago
IPL 2026: 15,300 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ಮಾರಾಟ ipl 2026: rajasthan royals new owner 3
  • ಕ್ರಿಕೆಟ್

IPL 2026: 15,300 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ಮಾರಾಟ

Posted on 21 hours ago
IPL 2026: 11 ಸೀಟ್ ಖಾಲಿ, ಎಲ್ಲರಿಗೂ 11 ನಂಬರ್​ನ ಜೆರ್ಸಿ..! IPL 2026: RCB keep 11 empty seats to honour stampede victims 4
  • ಕ್ರಿಕೆಟ್

IPL 2026: 11 ಸೀಟ್ ಖಾಲಿ, ಎಲ್ಲರಿಗೂ 11 ನಂಬರ್​ನ ಜೆರ್ಸಿ..!

Posted on 21 hours ago
ಐಫೋನ್-18 ಬಿಡುಗಡೆ ಯಾವಾಗ? ಇದರ ವಿಶೇಷತೆಗಳೇನು? iphone 18 release date 5
  • ಟೆಕ್

ಐಫೋನ್-18 ಬಿಡುಗಡೆ ಯಾವಾಗ? ಇದರ ವಿಶೇಷತೆಗಳೇನು?

Posted on 2 days ago

You may have missed

IMG-20260324-WA0024
  • ಕ್ರಿಕೆಟ್

16.7 ಸಾವಿರ ಕೋಟಿಗೆ RCB ಮಾರಾಟ..!

Jiokannadanews Posted on 17 hours ago
IPL 2026: RCB's Yash Dayal won't be playing this season
  • ಕ್ರಿಕೆಟ್

IPL 2026: RCB ತಂಡದ ಪ್ರಮುಖ ಆಟಗಾರ ಔಟ್..!

Jiokannadanews Posted on 20 hours ago
ipl 2026: rajasthan royals new owner
  • ಕ್ರಿಕೆಟ್

IPL 2026: 15,300 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ಮಾರಾಟ

Jiokannadanews Posted on 21 hours ago
IPL 2026: RCB keep 11 empty seats to honour stampede victims
  • ಕ್ರಿಕೆಟ್

IPL 2026: 11 ಸೀಟ್ ಖಾಲಿ, ಎಲ್ಲರಿಗೂ 11 ನಂಬರ್​ನ ಜೆರ್ಸಿ..!

Jiokannadanews Posted on 21 hours ago

Categories

  • ಆಟೋಮೊಬೈಲ್
  • ಆರೋಗ್ಯ
  • ಉದ್ಯೋಗ
  • ಕ್ರಿಕೆಟ್
  • ಕ್ರೈಮ್
  • ಟೆಕ್
  • ದೇಶ
  • ರಾಜ್ಯ
  • ಸಿನಿಮಾ
  • Contact Us
  • About Us
  • Disclaimer
  • Terms and Conditions
  • Privacy Policy
Copyright © All rights reserved. | MoreNews by AF themes.