ಸೇಂಟ್ ಜೋಸೆಫ್ಸ್ ತಂಡ
ಕೊಡಗು ವಿದ್ಯಾಲಯ ಶಾಲೆಯ ಕ್ರೀಡಾಂಗಣದಲ್ಲಿ ನಡೆದ ಮಡಿಕೇರಿ ತಾಲೂಕು ಮಟ್ಟದ ಶಾಲಾ ಕ್ರೀಡಾಕೂಟದ ಅಂಡರ್-17 ಬಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ಸೇಂಟ್ ಮೈಕಲ್ಸ್ ತಂಡ ರೋಚಕ ಜಯ ಸಾಧಿಸಿದೆ. ರಣರೋಚಕ ಪಂದ್ಯದಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಸೇಂಟ್ ಜೋಸೆಫ್ಸ್ ತಂಡವು ಕೇವಲ ಒಂದು ಅಂಕಗಳ ಅಂತರದಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿದೆ.
ರೋಚಕ ಫೈನಲ್ ಹಣಾಹಣಿ:
ಸೇಂಟ್ ಮೈಕಲ್ಸ್ ಮತ್ತು ಸೇಂಟ್ ಜೋಸೆಫ್ಸ್ ತಂಡಗಳ ನಡುವೆ ನಡೆದ ಅಂತಿಮ ಪಂದ್ಯವು ಅತ್ಯಂತ ರೋಮಾಂಚನಕಾರಿಯಾಗಿತ್ತು. ಪಂದ್ಯದ ಆರಂಭದಿಂದ ಕೊನೆಯವರೆಗೂ ಉಭಯ ತಂಡಗಳು ಸಮಬಲದ ಹೋರಾಟ ನಡೆಸಿದವು. ಅಂತಿಮವಾಗಿ ಸ್ಥಿರತೆ ಕಾಯ್ದುಕೊಂಡ ಸೇಂಟ್ ಮೈಕಲ್ಸ್ ತಂಡವು 9-8 ಪಾಯಿಂಟ್‌ಗಳ ಅಲ್ಪ ಅಂತರದಿಂದ ಜಯಭೇರಿ ಬಾರಿಸಿತು.
ಅತ್ಯುತ್ತಮ ಹೋರಾಟ ನೀಡಿದ ಸೇಂಟ್ ಜೋಸೆಫ್ಸ್ ತಂಡವು ರನ್ನರ್-ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಪಂದ್ಯದ ಆರಂಭದಿಂದಲೇ ಸಾಂಘಿಕ ಪ್ರದರ್ಶನ ನೀಡಿದ ಸೇಂಟ್ ಜೋಸೆಫ್ಸ್ ತಂಡದ ನಾಯಕ ತರುಣ್, ಶಾಹಿಝ್, ನಿರನ್, ರೆಹಾನ್, ಹರ್ಷಲ್, ದಿಪಿಲ್, ಅನ್ಸನ್, ರಕ್ಷಿತ್ ಮತ್ತು ಸುಫಿಯಾನ್ ಆಟಕ್ಕೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು.
ಇನ್ನು ವಿರೋಚಿತವಾಗಿ ಸೋಲೊಪ್ಪಿಕೊಂಡ ಸೇಂಟ್ ಜೋಸೆಫ್ಸ್ ತಂಡದ ಯುವ ಆಟಗಾರರನ್ನು, ತರಬೇತುದಾರರನ್ನು ಶಾಲಾ ಮಂಡಳಿಯು ಅಭಿನಂದಿಸಿದ್ದು, ಕಿರಿಯರ ಪ್ರದರ್ಶನಕ್ಕೆ ತುಂಬು ಹೃದಯದ ಶ್ಲಾಘನೆ ವ್ಯಕ್ತಪಡಿಸಿದೆ. ಅಲ್ಲದೆ ಅವರ ಮುಂದಿನ ಪಂದ್ಯಗಳಿಗೆ ಶುಭ ಹಾರೈಸಿದ್ದಾರೆ.
ಸೇಂಟ್ ಜೋಸೆಫ್ಸ್ ಬಾಸ್ಕೆಟ್ ಬಾಲ್ ತಂಡ (U17): ತರುಣ್ (ನಾಯಕ), ಶಾಹಿಝ್, ದಿಪಿಲ್, ರಕ್ಷಿತ್, ನಿರನ್, ಅನ್ಸನ್, ರೆಹಾನ್, ಹರ್ಷಲ್ ಮತ್ತು ಸುಫಿಯಾನ್.