Skip to content

Jio Kannada News

Kannada News

banner-promo-full-green
Primary Menu
  • HOME
  • ಕ್ರಿಕೆಟ್
  • ರಾಜ್ಯ
  • ದೇಶ
  • ಆರೋಗ್ಯ
  • ಸಿನಿಮಾ
  • ಉದ್ಯೋಗ
  • ಕ್ರೈಮ್
  • ಆಟೋಮೊಬೈಲ್
  • ಟೆಕ್
  • Contact Us
Light/Dark Button
Wtach Live
  • Home
  • ಕ್ರಿಕೆಟ್
  • IPL 2026: ಐಪಿಎಲ್​ ಆರಂಭಕ್ಕೆ ಡೇಟ್ ಫಿಕ್ಸ್​
  • ಕ್ರಿಕೆಟ್

IPL 2026: ಐಪಿಎಲ್​ ಆರಂಭಕ್ಕೆ ಡೇಟ್ ಫಿಕ್ಸ್​

Jiokannadanews Posted on 5 months ago 1 minute read
IPL 2026 StArt Date

IPL 2026

ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಡೇಟ್ ಫಿಕ್ಸ್ ಆಗಿದೆ. ಅದರಂತೆ ಐಪಿಎಲ್ ಸೀಸನ್-19 ಮಾರ್ಚ್ 28 ರಿಂದ ಶುರುವಾಗಲಿದೆ. ಇನ್ನು ಫೈನಲ್ ಪಂದ್ಯವು ಮೇ 31 ರಂದು ನಡೆಯಲಿದೆ. ಟಿ20 ವಿಶ್ವಕಪ್​ ಮುಕ್ತಾಯದ ಬಳಿಕ ಟೀಮ್ ಇಂಡಿಯಾ ಆಟಗಾರರಿಗೆ ಕೆಲ ದಿನಗಳ ವಿಶ್ರಾಂತಿ ಸಿಗಲಿದ್ದು, ಇದಾದ ಬಳಿಕ ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಇದಾಗ್ಯೂ ಐಪಿಎಲ್​ನ ವೇಳಾಪಟ್ಟಿ ಇನ್ನೂ ಕೂಡ ಸಿದ್ಧವಾಗಿಲ್ಲ ಎಂದು ತಿಳಿದು ಬಂದಿದೆ. ಇದಕ್ಕೆ ಮುಖ್ಯ ಕಾರಣ ಕೆಲ ರಾಜ್ಯಗಳಲ್ಲಿನ ಮುಂಬರುವ ಚುನಾವಣೆ.

ವಿಳಂಬಕ್ಕೆ ಕಾರಣ:

ಐಪಿಎಲ್ ವೇಳಾಪಟ್ಟಿ ಬಿಡುಗಡೆಯ ವಿಳಂಬಕ್ಕೆ ಮುಖ್ಯ ಕಾರಣ ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಅಸ್ಸಾಂ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು. ಈ ಚುನಾವಣೆಯ ದಿನಾಂಕ ನಿಗದಿಯಾದ ಬಳಿಕ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲು ಬಿಸಿಸಿಐ ನಿರ್ಧರಿಸಿದೆ.

ಒಂದು ವೇಳೆ ಚುನಾವಣೆ ದಿನಾಂಕ ಪ್ರಕಟಣೆಯು ವಿಳಂಬವಾದರೆ ಐಪಿಎಲ್​ ವೇಳಾಪಟ್ಟಿಯನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡಲು ಕೂಡ ಚರ್ಚಿಸಲಾಗಿದೆ. ಅಂದರೆ ಮೊದಲ ಸುತ್ತಿನ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿ ಟೂರ್ನಿ ಆರಂಭಿಸಲಿದ್ದಾರೆ.

ಐಪಿಎಲ್ ದಿನಾಂಕಗಳು:

  • ಪ್ರಾರಂಭ: ಮಾರ್ಚ್ 28, 2026 (ಶನಿವಾರ).
  • ಫೈನಲ್ ಪಂದ್ಯ: ಮೇ 31, 2026 (ಭಾನುವಾರ).
  • ಸಮಯ: ಮಧ್ಯಾಹ್ನ 3:30 IST ಮತ್ತು ಸಂಜೆ 7:30 IST.

84 ಪಂದ್ಯಗಳು:

ಈ ಬಾರಿಯ ಐಪಿಎಲ್​ನಲ್ಲಿ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಅಂದರೆ ಕಳೆದ ಬಾರಿ 74 ಪಂದ್ಯಗಳನ್ನು ಆಡಲಾಗಿತ್ತು. ಈ ಬಾರಿ ಅದನ್ನು 84 ಕ್ಕೇರಿಸಲು ಕೂಡ ಚಿಂತಿಸಲಾಗಿದೆ.

ಲೀಗ್ ಸ್ವರೂಪ:

ಈ ಬಾರಿ ಕೂಡ ಪ್ರತಿ ತಂಡಗಳು ಲೀಗ್ ಹಂತದಲ್ಲಿ 14 ಪಂದ್ಯಗಳನ್ನು (7 ಹೋಮ್ ಮತ್ತು 7 ಅವೇ) ಆಡಲಿದೆ. ನಂತರ ಕ್ವಾಲಿಫೈಯರ್ 1, ಎಲಿಮಿನೇಟರ್, ಕ್ವಾಲಿಫೈಯರ್ 2 ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ.

ಕ್ರೀಡಾಂಗಣದ ಮಾಹಿತಿ:

  • ಬೆಂಗಳೂರು (RCB): ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುವುದು ಇನ್ನೂ ಅಂತಿಮಗೊಂಡಿಲ್ಲ. ಪರ್ಯಾಯವಾಗಿ ನವಿ ಮುಂಬೈ ಅಥವಾ ರಾಯ್‌ಪುರವನ್ನು ಪರಿಗಣಿಸಲಾಗುತ್ತಿದೆ.
  • ಜೈಪುರ (RR): ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಆಂತರಿಕ ಸಮಸ್ಯೆಗಳಿಂದಾಗಿ ರಾಜಸ್ಥಾನ ರಾಯಲ್ಸ್ ತನ್ನ ಪಂದ್ಯಗಳನ್ನು ಪುಣೆಯ ಎಂಸಿಎ (MCA) ಕ್ರೀಡಾಂಗಣದಲ್ಲಿ ಆಡುವ ಸಾಧ್ಯತೆಯಿದೆ.

ಇದನ್ನೂ ಓದಿ: ನೀವು ಮಕ್ಕಳಿಗೆ ಜೆಮ್ಸ್​ ನೀಡುತ್ತಿದ್ದೀರಾ? ಹಾಗಿದ್ರೆ ಈ ಬಗ್ಗೆ ಗೊತ್ತಿರಲಿ

ಉದ್ಘಾಟನಾ ಪಂದ್ಯ:

ಪ್ರಸ್ತುತ ಮಾಹಿತಿ ಪ್ರಕಾರ ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಆದರೆ ಇತ್ತ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಆಯೋಜಿಸಲು ಇನ್ನೂ ಸಹ ಗ್ರೀನ್ ಸಿಗ್ನಲ್ ಸಿಗದಿರುವ ಕಾರಣ ಉದ್ಘಾಟನಾ ಪಂದ್ಯ ನಡೆಯುವುದೆಲ್ಲಿ ಎಂಬುದು ನಿರ್ಧಾರವಾಗಿಲ್ಲ.

 

About the Author

Jiokannadanews

Administrator

jiokannadanews.com

Visit Website View All Posts
Tags: IPL

Post navigation

Previous: ಇರಾನ್‌ನ ಪರಮೋಚ್ಚ ನಾಯಕ ಖಮೇನಿ ಹತ್ಯೆ..!
Next: ಖಮೇನಿ ಸಾವಿಗೆ ಭಾರತೀಯ ಮುಸ್ಲಿಮರು ಶೋಕಾಚರಣೆ ಮಾಡಿದ್ದೇಕೆ?

Related Stories

Sadagoppan Ramesh Slams Selectors for Dropping RCB Players
  • ಕ್ರಿಕೆಟ್

ಬೇರೆಯವರಿಗೆ ನ್ಯಾಯ, RCB ಆಟಗಾರರಿಗೆ ಅನ್ಯಾಯ..!

Jiokannadanews Posted on 4 days ago
vaibhav-sooryavanshi-3
  • ಕ್ರಿಕೆಟ್

IPL 2026: ‘ಸೂರ್ಯವಂಶಿ’ ಎಂಬ ಸುನಾಮಿ

Jiokannadanews Posted on 3 months ago
SHOCKING: SRH Vice-Captain Abhishek Sharma Fined 25% Match Fee
  • ಕ್ರಿಕೆಟ್

IPL 2026: ಅಭಿಷೇಕ್ ಶರ್ಮಾಗೆ 25 ಲಕ್ಷ ರೂ. ದಂಡ..!

Jiokannadanews Posted on 4 months ago

Trending News

ಕಾಕ್ರೋಚ್​ಗಳಿಗೆ ಗೆಲುವು: ಧರ್ಮೇಂದ್ರ ಪ್ರಧಾನ್ ರಾಜೀನಾಮೆ! Dharmendra Pradhan Resigns Over NEET-UG 2026 Paper Leak Row 1
  • ದೇಶ

ಕಾಕ್ರೋಚ್​ಗಳಿಗೆ ಗೆಲುವು: ಧರ್ಮೇಂದ್ರ ಪ್ರಧಾನ್ ರಾಜೀನಾಮೆ!

Posted on 2 days ago
ಕೇಂದ್ರ ಸರ್ಕಾರದ ಮುಂದೆ 3 ಬೇಡಿಕೆಯಿಟ್ಟ CJP Picsart_26-07-24_17-52-02-956 2
  • ದೇಶ

ಕೇಂದ್ರ ಸರ್ಕಾರದ ಮುಂದೆ 3 ಬೇಡಿಕೆಯಿಟ್ಟ CJP

Posted on 3 days ago
ಧರ್ಮೇಂದ್ರ ಪ್ರಧಾನ್ ಯಾಕೆ ರಾಜೀನಾಮೆ ನೀಡುತ್ತಿಲ್ಲ ಗೊತ್ತಾ? Why Dharmendra Pradhan Won't Resign? 3
  • ದೇಶ

ಧರ್ಮೇಂದ್ರ ಪ್ರಧಾನ್ ಯಾಕೆ ರಾಜೀನಾಮೆ ನೀಡುತ್ತಿಲ್ಲ ಗೊತ್ತಾ?

Posted on 3 days ago
ಸೋನಮ್ ವಾಂಗ್ಚುಕ್ ಉಪವಾಸ ಅಂತ್ಯ: ಮುಂದಿನ ಹಾದಿಯೇನು? Sonam Wangchuk Ends 26-Day Fast After Govt Assurances 4
  • ದೇಶ

ಸೋನಮ್ ವಾಂಗ್ಚುಕ್ ಉಪವಾಸ ಅಂತ್ಯ: ಮುಂದಿನ ಹಾದಿಯೇನು?

Posted on 3 days ago
ಬೇರೆಯವರಿಗೆ ನ್ಯಾಯ, RCB ಆಟಗಾರರಿಗೆ ಅನ್ಯಾಯ..! Sadagoppan Ramesh Slams Selectors for Dropping RCB Players 5
  • ಕ್ರಿಕೆಟ್

ಬೇರೆಯವರಿಗೆ ನ್ಯಾಯ, RCB ಆಟಗಾರರಿಗೆ ಅನ್ಯಾಯ..!

Posted on 4 days ago

You may have missed

Dharmendra Pradhan Resigns Over NEET-UG 2026 Paper Leak Row
  • ದೇಶ

ಕಾಕ್ರೋಚ್​ಗಳಿಗೆ ಗೆಲುವು: ಧರ್ಮೇಂದ್ರ ಪ್ರಧಾನ್ ರಾಜೀನಾಮೆ!

Jiokannadanews Posted on 2 days ago
Picsart_26-07-24_17-52-02-956
  • ದೇಶ

ಕೇಂದ್ರ ಸರ್ಕಾರದ ಮುಂದೆ 3 ಬೇಡಿಕೆಯಿಟ್ಟ CJP

Jiokannadanews Posted on 3 days ago
Why Dharmendra Pradhan Won't Resign?
  • ದೇಶ

ಧರ್ಮೇಂದ್ರ ಪ್ರಧಾನ್ ಯಾಕೆ ರಾಜೀನಾಮೆ ನೀಡುತ್ತಿಲ್ಲ ಗೊತ್ತಾ?

Jiokannadanews Posted on 3 days ago
Sonam Wangchuk Ends 26-Day Fast After Govt Assurances
  • ದೇಶ

ಸೋನಮ್ ವಾಂಗ್ಚುಕ್ ಉಪವಾಸ ಅಂತ್ಯ: ಮುಂದಿನ ಹಾದಿಯೇನು?

Jiokannadanews Posted on 3 days ago

Categories

  • Uncategorized
  • ಆಟೋಮೊಬೈಲ್
  • ಆರೋಗ್ಯ
  • ಉದ್ಯೋಗ
  • ಕ್ರಿಕೆಟ್
  • ಕ್ರೈಮ್
  • ಟೆಕ್
  • ದೇಶ
  • ರಾಜ್ಯ
  • ಸಿನಿಮಾ
  • Contact Us
  • About Us
  • Disclaimer
  • Terms and Conditions
  • Privacy Policy
Copyright © All rights reserved. | MoreNews by AF themes.