Skip to content

Jio Kannada News

Kannada News

banner-promo-full-green
Primary Menu
  • HOME
  • ಕ್ರಿಕೆಟ್
  • ರಾಜ್ಯ
  • ದೇಶ
  • ಆರೋಗ್ಯ
  • ಸಿನಿಮಾ
  • ಉದ್ಯೋಗ
  • ಕ್ರೈಮ್
  • ಆಟೋಮೊಬೈಲ್
  • ಟೆಕ್
  • Contact Us
Light/Dark Button
Wtach Live
  • Home
  • ಆರೋಗ್ಯ
  • ನೀವು ಮಕ್ಕಳಿಗೆ ಜೆಮ್ಸ್​ ನೀಡುತ್ತಿದ್ದೀರಾ? ಹಾಗಿದ್ರೆ ಈ ಬಗ್ಗೆ ಗೊತ್ತಿರಲಿ
  • ಆರೋಗ್ಯ

ನೀವು ಮಕ್ಕಳಿಗೆ ಜೆಮ್ಸ್​ ನೀಡುತ್ತಿದ್ದೀರಾ? ಹಾಗಿದ್ರೆ ಈ ಬಗ್ಗೆ ಗೊತ್ತಿರಲಿ

Jiokannadanews Posted on 4 weeks ago 1 minute read
Gems

ಮಕ್ಕಳ ಫೇವರೇಟ್ ಚೊಕೊಲೇಟ್​ಗಳಲ್ಲಿ ಜೆಮ್ಸ್ ಕೂಡ ಒಂದು. ಆಕರ್ಷಕ ಬಣ್ಣಗಳಿಂದ ಕೂಡಿರುವ ಈ ಚೊಕೊಲೇಟ್ ಕಳೆದ ದಶಕದಿಂದ ಭಾರತೀ ಮಾರುಕಟ್ಟೆಯಲ್ಲಿದೆ. ಭಾರತೀಯ ಮಕ್ಕಳ ನೆಚ್ಚಿನ ಚಾಕೊಲೇಟ್​ನಲ್ಲಿ ಗುರುತಿಸಿಕೊಂಡಿರುವ ಜೆಮ್ಸ್​ನ ಅತಿಯಾದ ಸೇವನೆಯು ಆರೋಗ್ಯದ ಮೇಲೆ ಕೆಲವು ಅಡ್ಡಪರಿಣಾಮಗಳನ್ನು ಬೀರಬಹುದು. ಏಕೆಂದರೆ ಇದರಲ್ಲಿ ಬಳಸಲಾಗುತ್ತಿರುವುದು ಕೃತಕ ಬಣ್ಣಗಳು.

ಈ ಬಣ್ಣಗಳ ಬಗ್ಗೆ ಜೆಮ್ಸ್​ ಪಾಕೆಟ್​ ಮೇಲೆಯೇ ಎಚ್ಚರಿಕೆ ನೀಡಲಾಗಿದೆ. ಆದರೆ ಇಲ್ಲಿ ಬಣ್ಣಗಳ ಕೋಡ್​ಗಳನ್ನು ಬಳಸಿರುವುದರಿಂದ ಅನೇಕರಿಗೆ ಇದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹಾಗಿದ್ರೆ ಜೆಮ್ಸ್​ನಲ್ಲಿ ಬಳಸಲಾಗುವ ಬಣ್ಣಗಳಾವುವು ಅಂದರಿಂದಾಗುವ ಅಡ್ಡ ಪರಿಣಾಮಗಳೇನು ಎಂದು ತಿಳಿಯೋಣ…

  • ಟೈಟಾನಿಯಂ ಡೈಆಕ್ಸೈಡ್ (INS 171): ಇದನ್ನು ಬಿಳಿ ಬಣ್ಣಕ್ಕಾಗಿ ಬಳಸಲಾಗುತ್ತದೆ. ಸಿಂಥೆಟಿಕ್ ಬಣ್ಣವು DNA ಹಾನಿ ಮಾಡಬಹುದು ಎಂಬ ಕಾರಣಕ್ಕೆ ಆಸ್ಟ್ರಿಯಾ, ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೇನ್ ಮತ್ತು ಪೋಲೆಂಡ್ ಸೇರಿದಂತೆ ಯುರೋಪಿಯನ್ ಒಕ್ಕೂಟ (EU) ದೇಶಗಳಲ್ಲಿ ಇದನ್ನು ನಿಷೇಧಿಸಲಾಗಿದೆ.
  • ಟಾರ್ಟ್ರಾಜಿನ್ (INS 102): ಇದು ಹಳದಿ ಬಣ್ಣವನ್ನು ನೀಡುತ್ತದೆ. ಮಕ್ಕಳಲ್ಲಿ ಇದು ಅತಿಸುಟುಕುತನ (Hyperactivity) ಮತ್ತು ಆಸ್ತಮಾ ಸಮಸ್ಯೆಯನ್ನು ಪ್ರಚೋದಿಸಬಹುದು. ಹೀಗಾಗಿಯೇ ಇದನ್ನು ಸಹ ಕೆಲ ದೇಶಗಳಲ್ಲಿ ಮಕ್ಕಳಿಗೆ ನೀಡುವುದನ್ನು ನಿಷೇಧಿಸಲಾಗಿದೆ..
  • ಸನ್‌ಸೆಟ್ ಯೆಲ್ಲೋ (INS 110): ಕಿತ್ತಳೆ-ಹಳದಿ ಬಣ್ಣದ ಈ ರಾಸಾಯನಿಕವು ಅಲರ್ಜಿ ಮತ್ತು ಮಕ್ಕಳ ವರ್ತನೆಯಲ್ಲಿ ಬದಲಾವಣೆ ತರಬಹುದು.
  • ಬ್ರಿಲಿಯಂಟ್ ಬ್ಲೂ (INS 133):  ಜೆಮ್ಸ್​ನಲ್ಲಿ ಬಳಸಲಾಗುವ ನೀಲಿ ಬಣ್ಣವು ಮಕ್ಕಳಲ್ಲಿ ಅಲರ್ಜಿ ಉಂಟುಮಾಡಬಹುದು.
  • ಪೊನ್ಸಿಯು 4R (INS 124) ಮತ್ತು ಕಾರ್ಮೋಸಿನ್ (INS 122): ಜೆಮ್ಸ್​ನಲ್ಲಿರುವ ಕೆಂಪು ಬಣ್ಣವು ಮಕ್ಕಳ ಏಕಾಗ್ರತೆಯ ಮೇಲೆ ಪರಿಣಾಮ ಬೀರಬಹುದು.

ಆರೋಗ್ಯ ಸಮಸ್ಯೆಗಳು

ಕೇವಲ ಬಣ್ಣಗಳಷ್ಟೇ ಅಲ್ಲದೆ, ಜೆಮ್ಸ್‌ನಲ್ಲಿರುವ ಇತರ ಅಂಶಗಳೂ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಹೀಗೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಅಂಶಗಳಾವುವು ಎಂದು ನೋಡುವುದಾದರೆ…

  • ಹೆಚ್ಚಿನ ಸಕ್ಕರೆ ಅಂಶ: ಜೆಮ್ಸ್‌ ಚೊಕೊಲೇಟ್​ನ ತೂಕದ ಸುಮಾರು 60% ರಿಂದ 70% ಭಾಗ ಸಕ್ಕರೆಯೇ ಆಗಿರುತ್ತದೆ. ಇದು ಮಕ್ಕಳಲ್ಲಿ ಹಲ್ಲು ಹುಟ್ಟುವುದು (Tooth Decay), ಬೊಜ್ಜು ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
  • ಹೈಡ್ರೋಜನೇಟೆಡ್ ಕೊಬ್ಬು: ಇವುಗಳಲ್ಲಿರುವ ಟ್ರಾನ್ಸ್-ಫ್ಯಾಟ್ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ.

ಕರ್ನಾಟಕ ಸರ್ಕಾರದ ಎಚ್ಚರಿಕೆ

ಇತ್ತೀಚೆಗೆ ಕರ್ನಾಟಕ ಆಹಾರ ಇಲಾಖೆಯು ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್‌ನಂತಹ ಆಹಾರಗಳಲ್ಲಿ ಬಳಸುವ ಅಪಾಯಕಾರಿ ಕೃತಕ ಬಣ್ಣಗಳ ಮೇಲೆ ನಿರ್ಬಂಧ ಹೇರಿತ್ತು. ಇಂತಹ ಬಣ್ಣಗಳು ಕ್ಯಾನ್ಸರ್ ಕಾರಕವಾಗುವ ಸಾಧ್ಯತೆಯೂ ಇರುತ್ತದೆ. ಇದಾಗ್ಯೂ ರಾಜ್ಯ ಸರ್ಕಾರ ಜೆಮ್ಸ್​ನಲ್ಲಿರುವ ಬಣ್ಣಗಳಿಗೆ ಯಾವುದೇ ನಿರ್ಬಂಧ ಹೇರಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.

ಇದನ್ನೂ ಓದಿ: 2028ರ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿಗೆ ಕ್ಷೇತ್ರ ಫಿಕ್ಸ್​..!

ಇಲ್ಲಿ ನಿರ್ಬಂಧ ಹೇರದಿರಲು ಮುಖ್ಯ ಕಾರಣ ಭಾರತದಲ್ಲಿ ಜೇಮ್ಸ್​ನಲ್ಲಿ ಬಳಸಲಾಗುವ ಬಣ್ಣಗಳನ್ನು ನಿಯಮಿತ ಪ್ರಮಾಣದಲ್ಲಿ ಬಳಸಲು FSSAI ಅನುಮತಿ ನೀಡಿರುವುದು. ಈ ಅನುಮತಿಯ ಹೊರತಾಗಿಯೂ ದೈನಂದಿನ ಅಥವಾ ಅತಿಯಾದ ಸೇವನೆಯು ಆರೋಗ್ಯಕ್ಕೆ ಸೂಕ್ತವಲ್ಲ. ಮಕ್ಕಳಿಗೆ ಇವುಗಳ ಬದಲಿಗೆ ನೈಸರ್ಗಿಕ ಬಣ್ಣವಿರುವ ಹಣ್ಣುಗಳನ್ನು ನೀಡುವುದು ಉತ್ತಮ.

 

About the Author

Jiokannadanews

Administrator

jiokannadanews.com

Visit Website View All Posts
Tags: Health Tips

Post navigation

Previous: ಅಲ್ಲಾನ ಕಂಪನಿಯಿಂದ ಬಿಜೆಪಿಗೆ 30 ಕೋಟಿ ರೂ. ದೇಣಿಗೆ!
Next: ಭಾರತದಲ್ಲಿ ಅತೀ ಹೆಚ್ಚು ಮೈಲೇಜ್ ನೀಡುವ ಸ್ಕೂಟರ್ ಯಾವುದು ಗೊತ್ತಾ?

Related Stories

Health Tips
  • ಆರೋಗ್ಯ

ಈ ಸಮಸ್ಯೆಗಳಿಗೆ ಇದುವೇ ‘ಮನೆಮದ್ದು’

Jiokannadanews Posted on 3 weeks ago

Trending News

16.7 ಸಾವಿರ ಕೋಟಿಗೆ RCB ಮಾರಾಟ..! IMG-20260324-WA0024 1
  • ಕ್ರಿಕೆಟ್

16.7 ಸಾವಿರ ಕೋಟಿಗೆ RCB ಮಾರಾಟ..!

Posted on 15 hours ago
IPL 2026: RCB ತಂಡದ ಪ್ರಮುಖ ಆಟಗಾರ ಔಟ್..! IPL 2026: RCB's Yash Dayal won't be playing this season 2
  • ಕ್ರಿಕೆಟ್

IPL 2026: RCB ತಂಡದ ಪ್ರಮುಖ ಆಟಗಾರ ಔಟ್..!

Posted on 18 hours ago
IPL 2026: 15,300 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ಮಾರಾಟ ipl 2026: rajasthan royals new owner 3
  • ಕ್ರಿಕೆಟ್

IPL 2026: 15,300 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ಮಾರಾಟ

Posted on 18 hours ago
IPL 2026: 11 ಸೀಟ್ ಖಾಲಿ, ಎಲ್ಲರಿಗೂ 11 ನಂಬರ್​ನ ಜೆರ್ಸಿ..! IPL 2026: RCB keep 11 empty seats to honour stampede victims 4
  • ಕ್ರಿಕೆಟ್

IPL 2026: 11 ಸೀಟ್ ಖಾಲಿ, ಎಲ್ಲರಿಗೂ 11 ನಂಬರ್​ನ ಜೆರ್ಸಿ..!

Posted on 18 hours ago
ಐಫೋನ್-18 ಬಿಡುಗಡೆ ಯಾವಾಗ? ಇದರ ವಿಶೇಷತೆಗಳೇನು? iphone 18 release date 5
  • ಟೆಕ್

ಐಫೋನ್-18 ಬಿಡುಗಡೆ ಯಾವಾಗ? ಇದರ ವಿಶೇಷತೆಗಳೇನು?

Posted on 2 days ago

You may have missed

IMG-20260324-WA0024
  • ಕ್ರಿಕೆಟ್

16.7 ಸಾವಿರ ಕೋಟಿಗೆ RCB ಮಾರಾಟ..!

Jiokannadanews Posted on 15 hours ago
IPL 2026: RCB's Yash Dayal won't be playing this season
  • ಕ್ರಿಕೆಟ್

IPL 2026: RCB ತಂಡದ ಪ್ರಮುಖ ಆಟಗಾರ ಔಟ್..!

Jiokannadanews Posted on 18 hours ago
ipl 2026: rajasthan royals new owner
  • ಕ್ರಿಕೆಟ್

IPL 2026: 15,300 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ಮಾರಾಟ

Jiokannadanews Posted on 18 hours ago
IPL 2026: RCB keep 11 empty seats to honour stampede victims
  • ಕ್ರಿಕೆಟ್

IPL 2026: 11 ಸೀಟ್ ಖಾಲಿ, ಎಲ್ಲರಿಗೂ 11 ನಂಬರ್​ನ ಜೆರ್ಸಿ..!

Jiokannadanews Posted on 18 hours ago

Categories

  • ಆಟೋಮೊಬೈಲ್
  • ಆರೋಗ್ಯ
  • ಉದ್ಯೋಗ
  • ಕ್ರಿಕೆಟ್
  • ಕ್ರೈಮ್
  • ಟೆಕ್
  • ದೇಶ
  • ರಾಜ್ಯ
  • ಸಿನಿಮಾ
  • Contact Us
  • About Us
  • Disclaimer
  • Terms and Conditions
  • Privacy Policy
Copyright © All rights reserved. | MoreNews by AF themes.