Skip to content

Jio Kannada News

Kannada News

banner-promo-full-green
Primary Menu
  • HOME
  • ಕ್ರಿಕೆಟ್
  • ರಾಜ್ಯ
  • ದೇಶ
  • ಆರೋಗ್ಯ
  • ಸಿನಿಮಾ
  • ಉದ್ಯೋಗ
  • ಕ್ರೈಮ್
  • ಆಟೋಮೊಬೈಲ್
  • ಟೆಕ್
  • Contact Us
Light/Dark Button
Wtach Live
  • Home
  • ರಾಜ್ಯ
  • 2028ರ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿಗೆ ಕ್ಷೇತ್ರ ಫಿಕ್ಸ್​..!
  • ರಾಜ್ಯ

2028ರ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿಗೆ ಕ್ಷೇತ್ರ ಫಿಕ್ಸ್​..!

Jiokannadanews Posted on 1 month ago 1 minute read
Nikhil Kumaraswamy

ಜಾತ್ಯತೀತ ಜನತಾ ದಳದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರ ಮುಂದಿನ ಕ್ಷೇತ್ರ ಯಾವುದು? ಈ ಪ್ರಶ್ನೆಗೆ ಕಳೆದ ತಿಂಗಳವರೆಗೆ ಚಾಮರಾಜನಗರ ವಿಧಾನಸಭಾ ಕ್ಷೇತ್ರ ಎಂಬ ಉತ್ತರ ಬರುತ್ತಿತ್ತು. ಆದರೆ ಯುವ ದಳಪತಿ ಸೋತಲ್ಲಿಂದಲೇ ಗೆಲ್ಲಲು ಪ್ಲ್ಯಾನ್ ರೂಪಿಸಿದ್ದಾರೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಅಂದರೆ ನಿಖಿಲ್ ಕುಮಾರಸ್ವಾಮಿ ಎಲ್ಲಿ ಸೋತರೋ ಅಲ್ಲಿಂದಲೇ ರಾಜಕೀಯ ಜೀವನ ಕಟ್ಟಿಕೊಳ್ಳಲು ಯೋಜನೆ ರೂಪಿಸುತ್ತಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದು 2019 ರಲ್ಲಿ. ಮೊದಲಿಗೆ ಲೋಕಸಭೆಗೆ ಸ್ಪರ್ಧಿಸಿದ್ದ ನಿಖಿಲ್ ಆ ಬಳಿಕ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡಲು ಮುಂದಾಗಿದ್ದರು. ಆದರೆ ಮೂರು ಬಾರಿ ಕೂಡ ಅವರಿಗೆ ಅದೃಷ್ಟ ಕೈ ಕೊಟ್ಟಿತ್ತು.

  • 2019 ರಲ್ಲಿ ನಡೆದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಅವರು ಸುಮಲತಾ ಅಂಬರೀಷ್ ವಿರುದ್ಧ ಸೋಲನುಭವಿಸಿದ್ದರು.
  • 2023 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಿದ್ದ ನಿಖಿಲ್, ಕಾಂಗ್ರೆಸ್​​ನ ಇಕ್ಬಾಲ್ ಅನ್ಸಾರಿ ವಿರುದ್ಧ ಪರಾಜಯಗೊಂಡಿದ್ದರು.
  • 2024 ರಲ್ಲಿ ನಡೆದ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್​​ನ ಸಿಪಿ ಯೋಗೇಶ್ವರ್ ವಿರುದ್ಧ ಸ್ಪರ್ಧಿಸಿ ನಿಖಿಲ್ ಕುಮಾರಸ್ವಾಮಿ ಮೂರನೇ ಬಾರಿ ಸೋಲುಂಡಿದ್ದರು.

ಮುಂದಿನ ಕ್ಷೇತ್ರ ಯಾವುದು?

ಜನರ ತೀರ್ಪಿನಲ್ಲಿ ಮೂರು ಬಾರಿ ಸೋತಿರುವ ನಿಖಿಲ್ ಕುಮಾರಸ್ವಾಮಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯುವುದು ಖಚಿತವಾಗಿದೆ. ಅದು ಸಹ 2028ರ ವಿಧಾನಸಭಾ ಚುನಾವಣೆಯಲ್ಲಿ. ಇದಕ್ಕಾಗಿ ಅವರು ಈಗಾಗಲೇ ರಾಮನಗರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಜಾತ್ಯತೀತ ಜನತಾದಳ ಪಕ್ಷವನ್ನು ನಂಬಿರುವ ಕಾರ್ಯಕರ್ತರಿಗೆ ನಾನು ಯಾವಾಗಲೂ ಗೌರವ ಕೊಡುತ್ತೇನೆ. ಅದರಲ್ಲೂ ನನ್ನ ತಾತ ದೇವೇಗೌಡರಿಗೆ ರಾಜಕೀಯ ಮರುಜನ್ಮ ನೀಡಿದ ಮಣ್ಣನ್ನು ಹಾಗೂ ನನ್ನ ತಂದೆ ಕುಮಾರಸ್ವಾಮಿ ಅವರ ಕರ್ಮಭೂಮಿಯನ್ನು ನಾನು ಎಂದಿಗೂ ಬಿಟ್ಟು ಹೋಗುವುದಿಲ್ಲ.

ಅದರಂತೆ ಮುಂದಿನ ಚುನಾವಣೆಯಲ್ಲಿ ನಾನು ರಾಮನಗರದಲ್ಲೇ ಸ್ಪರ್ಧಿಸುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ರಾಮನಗರದಿಂದಲೇ ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆ ಮಾಡಲಿದ್ದೇನೆ ಎಂಬುದನ್ನು ಯುವ ದಳಪತಿ ಘೋಷಿಸಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಗೆ ರಾಮನಗರ ನಿಖಿಲ್ ಕುಮಾರಸ್ವಾಮಿಗೆ ಫಿಕ್ಸ್ ಎಂದೇ ಹೇಳಬಹುದು.

ನಿಖಿಲ್ ಕುಮಾರಸ್ವಾಮಿ ಅವರ ಸೋಲುಗಳ ಸಂಕ್ಷಿಪ್ತ ಮಾಹಿತಿ:

  • 2019: ಮಂಡ್ಯ ಲೋಕಸಭಾ ಕ್ಷೇತ್ರ- 128,876 ಮತಗಳ ಅಂತರದ ಸೋಲು
  • 2023- ರಾಮನಗರ ವಿಧಾನಸಭಾ ಕ್ಷೇತ್ರ- 10,715 ಮತಗಳ ಅಂತರದ ಸೋಲು
  • 2024- ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ- 25,413 ಮತಗಳ ಅಂತರದ ಸೋಲು

2028 ರಲ್ಲಿ ರಾಮನಗರದಿಂದ ಮತ್ತೆ ಸ್ಪರ್ಧಿಸಲಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ವಿಜಯಲಕ್ಷ್ಮಿ ಒಲಿಯಲಿದೆಯಾ ಕಾದು ನೋಡಬೇಕಿದೆ.

 

About the Author

Jiokannadanews

Administrator

jiokannadanews.com

Visit Website View All Posts
Tags: Nikhil Kumaraswamy

Post navigation

Previous: ಕರ್ನಾಟಕದಲ್ಲಿ ಪೊಲೀಸರಿಗಿಂತ ಕಳ್ಳರದ್ದೇ ‘ಮೇಲುಗೈ’
Next: ‘ಗೃಹಲಕ್ಷ್ಮಿ’ ಹಣ ಪಡೆಯಲು ಹೊಸ ರೂಲ್ಸ್​

Related Stories

Karnataka budget 2026 labeled a "Halal Budget" by the BJP
  • ರಾಜ್ಯ

ಕರ್ನಾಟಕದ್ದು ‘ಹಲಾಲ್’ ಬಜೆಟಾ? ಇಲ್ಲಿದೆ ನಿಜಾಂಶ

Jiokannadanews Posted on 3 weeks ago
SIR or Special Intensive Revision Details in Kannada
  • ದೇಶ
  • ರಾಜ್ಯ

SIR ಕುರಿತಾದ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

Jiokannadanews Posted on 1 month ago
Candy
  • ಕ್ರೈಮ್
  • ರಾಜ್ಯ

ಬೆಂಗಳೂರಿಗೆ ಬರುತ್ತಿದೆ ‘ಬ್ಯಾಂಕಾಕ್ ಕ್ಯಾಂಡಿ ಡ್ರಗ್ಸ್​’

Jiokannadanews Posted on 1 month ago

Trending News

16.7 ಸಾವಿರ ಕೋಟಿಗೆ RCB ಮಾರಾಟ..! IMG-20260324-WA0024 1
  • ಕ್ರಿಕೆಟ್

16.7 ಸಾವಿರ ಕೋಟಿಗೆ RCB ಮಾರಾಟ..!

Posted on 15 hours ago
IPL 2026: RCB ತಂಡದ ಪ್ರಮುಖ ಆಟಗಾರ ಔಟ್..! IPL 2026: RCB's Yash Dayal won't be playing this season 2
  • ಕ್ರಿಕೆಟ್

IPL 2026: RCB ತಂಡದ ಪ್ರಮುಖ ಆಟಗಾರ ಔಟ್..!

Posted on 18 hours ago
IPL 2026: 15,300 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ಮಾರಾಟ ipl 2026: rajasthan royals new owner 3
  • ಕ್ರಿಕೆಟ್

IPL 2026: 15,300 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ಮಾರಾಟ

Posted on 19 hours ago
IPL 2026: 11 ಸೀಟ್ ಖಾಲಿ, ಎಲ್ಲರಿಗೂ 11 ನಂಬರ್​ನ ಜೆರ್ಸಿ..! IPL 2026: RCB keep 11 empty seats to honour stampede victims 4
  • ಕ್ರಿಕೆಟ್

IPL 2026: 11 ಸೀಟ್ ಖಾಲಿ, ಎಲ್ಲರಿಗೂ 11 ನಂಬರ್​ನ ಜೆರ್ಸಿ..!

Posted on 19 hours ago
ಐಫೋನ್-18 ಬಿಡುಗಡೆ ಯಾವಾಗ? ಇದರ ವಿಶೇಷತೆಗಳೇನು? iphone 18 release date 5
  • ಟೆಕ್

ಐಫೋನ್-18 ಬಿಡುಗಡೆ ಯಾವಾಗ? ಇದರ ವಿಶೇಷತೆಗಳೇನು?

Posted on 2 days ago

You may have missed

IMG-20260324-WA0024
  • ಕ್ರಿಕೆಟ್

16.7 ಸಾವಿರ ಕೋಟಿಗೆ RCB ಮಾರಾಟ..!

Jiokannadanews Posted on 15 hours ago
IPL 2026: RCB's Yash Dayal won't be playing this season
  • ಕ್ರಿಕೆಟ್

IPL 2026: RCB ತಂಡದ ಪ್ರಮುಖ ಆಟಗಾರ ಔಟ್..!

Jiokannadanews Posted on 18 hours ago
ipl 2026: rajasthan royals new owner
  • ಕ್ರಿಕೆಟ್

IPL 2026: 15,300 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ಮಾರಾಟ

Jiokannadanews Posted on 19 hours ago
IPL 2026: RCB keep 11 empty seats to honour stampede victims
  • ಕ್ರಿಕೆಟ್

IPL 2026: 11 ಸೀಟ್ ಖಾಲಿ, ಎಲ್ಲರಿಗೂ 11 ನಂಬರ್​ನ ಜೆರ್ಸಿ..!

Jiokannadanews Posted on 19 hours ago

Categories

  • ಆಟೋಮೊಬೈಲ್
  • ಆರೋಗ್ಯ
  • ಉದ್ಯೋಗ
  • ಕ್ರಿಕೆಟ್
  • ಕ್ರೈಮ್
  • ಟೆಕ್
  • ದೇಶ
  • ರಾಜ್ಯ
  • ಸಿನಿಮಾ
  • Contact Us
  • About Us
  • Disclaimer
  • Terms and Conditions
  • Privacy Policy
Copyright © All rights reserved. | MoreNews by AF themes.