Skip to content

Jio Kannada News

Kannada News

banner-promo-full-green
Primary Menu
  • HOME
  • ರಾಜ್ಯ
  • ದೇಶ
  • ಉದ್ಯೋಗ
  • ಕ್ರಿಕೆಟ್
  • ಆರೋಗ್ಯ
  • ಸಿನಿಮಾ
  • ಕ್ರೈಮ್
  • ಆಟೋಮೊಬೈಲ್
  • ಟೆಕ್
  • Contact Us
Light/Dark Button
Wtach Live
  • Home
  • ರಾಜ್ಯ
  • ಕಠೋರ ಸತ್ಯ… ಬಿ.ಸಿ ನಾಗೇಶ್ ನೆನಪಿನಲ್ಲಿ ಉಳಿಯುವುದು ವಿವಾದಗಳಿಂದ!
  • ರಾಜ್ಯ

ಕಠೋರ ಸತ್ಯ… ಬಿ.ಸಿ ನಾಗೇಶ್ ನೆನಪಿನಲ್ಲಿ ಉಳಿಯುವುದು ವಿವಾದಗಳಿಂದ!

ಒಬ್ಬ ವ್ಯಕ್ತಿ ನಿಧನರಾದ ಸಂದರ್ಭದಲ್ಲಿ ಅವರ ಕೇವಲ ನಕಾರಾತ್ಮಕ ಅಂಶಗಳನ್ನು ಅಥವಾ ವಿವಾದಗಳನ್ನು ಮಾತ್ರ ಚರ್ಚಿಸುವುದು ಪತ್ರಿಕೋದ್ಯಮದ ನೈತಿಕ ದೃಷ್ಟಿಯಿಂದ ತಪ್ಪಾಗಬಹುದು. ಆದರೆ, ಈ ವಿಶ್ಲೇಷಣೆಯ ಉದ್ದೇಶ ಕೇವಲ ವ್ಯಕ್ತಿಗತ ಟೀಕೆಯಲ್ಲ. ಸಾರ್ವಜನಿಕ ಜೀವನದಲ್ಲಿ ಮತ್ತು ಉನ್ನತ ಅಧಿಕಾರದಲ್ಲಿ ಇರುವ ಪ್ರಸ್ತುತ ಸಚಿವರುಗಳಿಗೆ ಇದು ಒಂದು ಎಚ್ಚರಿಕೆಯ ಪಾಠವಾಗಬೇಕಿದೆ. ನಾವು ಅಧಿಕಾರದಲ್ಲಿದ್ದಾಗ ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ಸಮಾಜದ ಮೇಲೆ ಬೀರುವ ಪ್ರಭಾವದ ಆಧಾರದ ಮೇಲೆಯೇ ಇತಿಹಾಸ ನಮ್ಮನ್ನು ನೆನಪಿನಲ್ಲಿಡುತ್ತದೆ ಎಂಬ ವಾಸ್ತವವನ್ನು ನೆನಪಿಸುವುದು ಈ ಬರಹದ ಮುಖ್ಯ ಆಶಯವಾಗಿದೆ.
Jiokannadanews Posted on 3 weeks ago 1 minute read
The Bitter Truth: BC Nagesh's Legacy Clouded by Controversies

BC Nagesh

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಸಚಿವರ ಅಧಿಕಾರಾವಧಿಯೂ ಅವರು ಜಾರಿಗೆ ತಂದ ಜನಪರ ಯೋಜನೆಗಳು, ತಂದ ಸುಧಾರಣೆಗಳು ಮತ್ತು ಭವಿಷ್ಯದ ಪೀಳಿಗೆಗೆ ನೀಡಿದ ಕೊಡುಗೆಗಳ ಆಧಾರದ ಮೇಲೆ ಮೌಲ್ಯಮಾಪನಕ್ಕೆ ಒಳಗಾಗುತ್ತದೆ. ಆದರೆ, ಕರ್ನಾಟಕದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಾಜಿ ಸಚಿವರಾದ ಬಿ.ಸಿ. ನಾಗೇಶ್ ಅವರ ಅಧಿಕಾರಾವಧಿಯನ್ನು ತಿರುಗಿ ನೋಡಿದಾಗ, ಅಲ್ಲಿ ಅಭಿವೃದ್ಧಿ ಕಾರ್ಯಗಳಿಗಿಂತ ಹೆಚ್ಚಾಗಿ ಸದ್ದಿನ ಅಲೆಗಳನ್ನು ಎಬ್ಬಿಸಿದ ಸದ್ಧಾಂತಿಕ ಸಂಘರ್ಷಗಳೇ ಮುನ್ನೆಲೆಗೆ ಬರುತ್ತವೆ. ಕರ್ನಾಟಕದ ಶೈಕ್ಷಣಿಕ ಇತಿಹಾಸವು ಬಿ.ಸಿ. ನಾಗೇಶ್ ಅವರನ್ನು ನೆನಪಿಟ್ಟುಕೊಳ್ಳುವುದು ಅವರು ತಂದ ಆಡಳಿತಾತ್ಮಕ ಬದಲಾವಣೆಗಳಿಗಾಗಿ ಅಲ್ಲ, ಬದಲಿಗೆ ಇಡೀ ರಾಜ್ಯವನ್ನೇ ದೀರ್ಘಕಾಲ ಕಾಡಿದ ಸಾಲು ಸಾಲು ತೀವ್ರ ಸ್ವರೂಪದ ವಿವಾದಗಳಿಂದ.

ಬಿ.ಸಿ. ನಾಗೇಶ್ ಅವರ ಅವಧಿಯಲ್ಲಿ ಜಾರಿಗೆ ಬಂದ ಅಥವಾ ಪ್ರಸ್ತಾಪವಾದ ಪ್ರಮುಖ ನಿರ್ಧಾರಗಳು ಕೇವಲ ಇಲಾಖೆಯ ಗೋಡೆಗಳ ಮಧ್ಯೆ ಉಳಿಯದೆ, ಸಮಾಜದಲ್ಲಿ ದೊಡ್ಡ ಮಟ್ಟದ ಧ್ರುವೀಕರಣ ಮತ್ತು ಪರ-ವಿರೋಧದ ಚರ್ಚೆಗಳನ್ನು ಹುಟ್ಟುಹಾಕಿದವು. ಇವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಪಠ್ಯಪುಸ್ತಕ ಪರಿಷ್ಕರಣೆ ವಿವಾದ.

ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯ ಮೂಲಕ ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದಾಗ, ನಾಡಿನ ಪ್ರಮುಖ ಆಸ್ಮಿತೆಗಳಾದ ಬಸವಣ್ಣ, ಕುವೆಂಪು, ನಾರಾಯಣ ಗುರು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತಾದ ಪಠ್ಯಗಳನ್ನು ತಿರುಚಲಾಗಿದೆ ಅಥವಾ ಕಡೆಗಣಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದವು.

ಇದು ಸಾಹಿತ್ಯ ವಲಯ, ಪ್ರಗತಿಪರ ಚಿಂತಕರು ಮತ್ತು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಮೂಡಿಸಿತು. ಹಲವು ಹಿರಿಯ ಸಾಹಿತಿಗಳು ಪ್ರತಿಭಟನೆಯ ರೂಪದಲ್ಲಿ ತಮ್ಮ ಕೃತಿಗಳನ್ನು ಪಠ್ಯದಿಂದ ಹಿಂಪಡೆದದ್ದು ನಾಗೇಶ್ ಅವರ ಸಚಿವಾಲಯಕ್ಕೆ ಎದುರಾದ ದೊಡ್ಡ ಸದ್ಧಾಂತಿಕ ಹಿನ್ನಡೆಯಾಗಿತ್ತು.

ಇನ್ನು ಸರ್ಕಾರಿ ಶಾಲಾ ಕೊಠಡಿಗಳ ನಿರ್ಮಾಣದ ‘ವಿವೇಕ ಯೋಜನೆ’ಯಡಿ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ಪ್ರಸ್ತಾಪ ಭಾರಿ ವಿವಾದ ಸೃಷ್ಟಿಸಿತು. ಶಿಕ್ಷಣ ಇಲಾಖೆಯಲ್ಲಿ ರಾಷ್ಟ್ರೀಯ ನಾಯಕರ ಹೆಸರಿನಲ್ಲಿ ರಾಜಕೀಯ ಬಣ್ಣ ರಾಜಕಾರಣ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂತು.

ಇದೇ ಅವಧಿಯಲ್ಲಿ ಉಡುಪಿಯ ಕಾಲೇಜೊಂದರಿಂದ ಆರಂಭವಾದ ಹಿಜಾಬ್ ವಿವಾದವು ದೇಶದ ಗಡಿಗಳನ್ನು ದಾಟಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಯಿತು. ಶಾಲಾ-ಕಾಲೇಜುಗಳಲ್ಲಿ ಕಡ್ಡಾಯ ಸಮವಸ್ತ್ರ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಚಿವರು ಮುಂದಾದಾಗ, ಅದು ಧಾರ್ಮಿಕ ಸ್ವಾತಂತ್ರ್ಯ ಮತ್ತು ಶಿಕ್ಷಣದ ಹಕ್ಕಿನ ನಡುವಿನ ಕಾನೂನು ಹೋರಾಟವಾಗಿ ಮಾರ್ಪಟ್ಟಿತು.

ಈ ನಿರ್ಧಾರವು ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ನಿಂತರೂ, ಸಾಮಾಜಿಕವಾಗಿ ವಿದ್ಯಾರ್ಥಿ ಸಮುದಾಯದ ನಡುವೆ ಸೃಷ್ಟಿಸಿದ ಕಂದಕ ಮತ್ತು ಸೌಹಾರ್ದತೆಗೆ ತಂದ ಧಕ್ಕೆ ಸಣ್ಣದೇನಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ತರುವ ಪ್ರಯತ್ನ ವಿವಾದದ ಸ್ವರೂಪ ಪಡೆದುಕೊಂಡಾಗ ಅದನ್ನು ನಿಭಾಯಿಸಿದ ರೀತಿ ವಿಮರ್ಶೆಗೆ ಒಳಪಡಬೇಕಾಗುತ್ತದೆ.

ಇದರ ಬೆನ್ನಲ್ಲೇ ಶಾಲಾ ಪಠ್ಯದಲ್ಲಿ ನೈತಿಕ ಶಿಕ್ಷಣದ ಹೆಸರಿನಲ್ಲಿ ‘ಭಗವದ್ಗೀತೆ’ಯನ್ನು ಅಳವಡಿಸುವ ಪ್ರಸ್ತಾಪ ಮತ್ತು ಮಧ್ಯಾಹ್ನದ ಉಪಾಹಾರದಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆಗೆ ಧಾರ್ಮಿಕ ಸಂಸ್ಥೆಗಳ ವಿರೋಧ ವ್ಯಕ್ತವಾದಾಗ ಸರ್ಕಾರ ಪರ್ಯಾಯ ದಾರಿ ಹುಡುಕಿದ್ದು ಕೂಡ ದೊಡ್ಡ ಮಟ್ಟದ ಚರ್ಚೆಗಳಿಗೆ ಕಾರಣವಾಯಿತು. ಶಿಕ್ಷಣ ವ್ಯವಸ್ಥೆಯನ್ನು ಕೇಸರೀಕರಣಗೊಳಿಸಲಾಗುತ್ತಿದೆ ಎಂಬ ವಿರೋಧ ಪಕ್ಷಗಳ ಮತ್ತು ಬುದ್ಧಿಜೀವಿಗಳ ಆರೋಪಕ್ಕೆ ಈ ಎಲ್ಲ ಬೆಳವಣಿಗೆಗಳು ಪುಷ್ಟಿ ನೀಡಿದವು.

ಒಂದು ವಿಶ್ಲೇಷಣಾತ್ಮಕ ದೃಷ್ಟಿಕೋನದಿಂದ ನೋಡುವುದಾದರೆ, ಬಿ.ಸಿ. ನಾಗೇಶ್ ಅವರ ಅಧಿಕಾರಾವಧಿಯು ಕೇವಲ ಆಡಳಿತಾತ್ಮಕ ನಿರ್ಧಾರಗಳ ಕಾಲವಾಗಿರಲಿಲ್ಲ. ಅದು ಒಂದು ಸಿದ್ಧಾಂತವನ್ನು ಶೈಕ್ಷಣಿಕ ವ್ಯವಸ್ಥೆಯ ಮೂಲಕ ಬಿತ್ತಲು ನಡೆದ ಸದ್ದಿಲ್ಲದ ಪ್ರಯತ್ನವಾಗಿತ್ತು.

ಶಾಲಾ ಕೊಠಡಿಗಳು ಕೇವಲ ಅಕ್ಷರ ಕಲಿಯುವ ಜಾಗಗಳಾಗದೆ ಸದ್ಧಾಂತಿಕ ಸಂಘರ್ಷದ ರಣರಂಗಗಳಾಗಿ ಬದಲಾದವು. ಸಚಿವರಾಗಿ ಅವರು ಕೈಗೊಂಡ ಕಠಿಣ ನಿಲುವುಗಳು ಅವರ ಪಕ್ಷದ ಸದ್ಧಾಂತಿಕ ಬೆಂಬಲಿಗರಿಗೆ ತೃಪ್ತಿ ತಂದಿರಬಹುದು, ಆದರೆ ಸಾರ್ವತ್ರಿಕ ಶಿಕ್ಷಣದ ಸಮಾನತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಕರ್ನಾಟಕದ ಪರಂಪರೆಗೆ ಇದು ಒಡ್ಡಿದ ಸವಾಲುಗಳು ಸಣ್ಣದೇನಲ್ಲ.

ಇದನ್ನೂ ಓದಿ: ಬಸ್ ಪ್ರಯಾಣಿಕರಿಗೆ ಶೀಘ್ರದಲ್ಲೇ ‘ದರ ಏರಿಕೆ ಭಾಗ್ಯ’

ಒಟ್ಟಾರೆಯಾಗಿ ಹೇಳುವುದಾದರೆ, ಯಾವುದೇ ಒಬ್ಬ ಶಿಕ್ಷಣ ಸಚಿವರ ಯಶಸ್ಸು ಅವರು ನಿರ್ಮಿಸಿದ ಶಾಲಾ ಕಟ್ಟಡಗಳು, ಶಿಕ್ಷಕರ ನೇಮಕಾತಿ ಮತ್ತು ವಿದ್ಯಾರ್ಥಿಗಳ ಗುಣಾತ್ಮಕ ಫಲಿತಾಂಶಗಳ ಮೇಲೆ ನಿರ್ಧಾರವಾಗಬೇಕು. ಆದರೆ, ಬಿ.ಸಿ. ನಾಗೇಶ್ ಅವರ ವಿಷಯಕ್ಕೆ ಬಂದಾಗ ಇತಿಹಾಸವು ಅವರನ್ನು ನೆನಪಿಸಿಕೊಳ್ಳುವುದು ಸೈದ್ಧಾಂತಿಕ ಹಗ್ಗಜಗ್ಗಾಟಗಳು, ರಾಜಕೀಯ ತಲ್ಲಣಗಳು ಮತ್ತು ಸಾಮಾಜಿಕ ಅಶಾಂತಿಗೆ ಕಾರಣವಾದ ವಿವಾದಗಳ ಸಚಿವರಾಗಿ ಮಾತ್ರ ಎಂಬುದು ಸದ್ಯದ ಕಟು ವಾಸ್ತವ.

ಬರಹ: ಅನನ್ಯಾ ಹೆಗಡೆ

About the Author

Jiokannadanews

Administrator

jiokannadanews.com

Visit Website View All Posts
Tags: Karnataka News

Post navigation

Previous: ಬಸ್ ಪ್ರಯಾಣಿಕರಿಗೆ ಶೀಘ್ರದಲ್ಲೇ ‘ದರ ಏರಿಕೆ ಭಾಗ್ಯ’
Next: ಕ್ರಿಮಿನಲ್ ಕೇಸ್ ‘ಸಿಎಂ’ ಪಟ್ಟಿಯಲ್ಲಿ ಡಿಕೆಶಿಗೆ 3ನೇ ಸ್ಥಾನ!

Related Stories

Missing Bengaluru Girls Found After 8 Months
  • ಕ್ರೈಮ್
  • ರಾಜ್ಯ

ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು 8 ತಿಂಗಳ ಬಳಿಕ ಪತ್ತೆ!

Jiokannadanews Posted on 2 days ago
St. Joseph's Madikeri
  • ರಾಜ್ಯ

ಬಾಸ್ಕೆಟ್‌ಬಾಲ್ ಪಂದ್ಯಾವಳಿ: ಪ್ರಚಂಡ ಪ್ರದರ್ಶನ ನೀಡಿದ ಸೇಂಟ್ ಜೋಸೆಫ್ಸ್

Jiokannadanews Posted on 1 week ago
Gruha Lakshmi Re-verification: What You Need to Know.
  • ರಾಜ್ಯ

‘ಗೃಹಲಕ್ಷ್ಮಿ’ ಹಣ ಬರಬೇಕಿದ್ದರೆ ಈ ದಾಖಲೆಗಳು ನೀಡಲೇಬೇಕು!

Jiokannadanews Posted on 1 week ago

Trending News

ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು 8 ತಿಂಗಳ ಬಳಿಕ ಪತ್ತೆ! Missing Bengaluru Girls Found After 8 Months 1
  • ಕ್ರೈಮ್
  • ರಾಜ್ಯ

ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು 8 ತಿಂಗಳ ಬಳಿಕ ಪತ್ತೆ!

Posted on 2 days ago
ಆಕಾಶದಲ್ಲೇ ಏರ್ ಇಂಡಿಯಾ ವಿಮಾನದ ಹೈಡ್ರಾಲಿಕ್ಸ್ ಫೇಲ್! Air India Mid-Air Terror: 3 Hydraulics Fail 2
  • ದೇಶ

ಆಕಾಶದಲ್ಲೇ ಏರ್ ಇಂಡಿಯಾ ವಿಮಾನದ ಹೈಡ್ರಾಲಿಕ್ಸ್ ಫೇಲ್!

Posted on 6 days ago
ಬಾಸ್ಕೆಟ್‌ಬಾಲ್ ಪಂದ್ಯಾವಳಿ: ಪ್ರಚಂಡ ಪ್ರದರ್ಶನ ನೀಡಿದ ಸೇಂಟ್ ಜೋಸೆಫ್ಸ್ St. Joseph's Madikeri 3
  • ರಾಜ್ಯ

ಬಾಸ್ಕೆಟ್‌ಬಾಲ್ ಪಂದ್ಯಾವಳಿ: ಪ್ರಚಂಡ ಪ್ರದರ್ಶನ ನೀಡಿದ ಸೇಂಟ್ ಜೋಸೆಫ್ಸ್

Posted on 1 week ago
ಪಾಕಿಸ್ತಾನದಲ್ಲಿ 125 ವರ್ಷಗಳ ಹಳೆಯ ಹಿಂದೂ ದೇವಾಲಯ ಧ್ವಂಸ! India Slams Pakistan Over Demolition of 125-Year-Old Hindu Temple 4
  • ದೇಶ

ಪಾಕಿಸ್ತಾನದಲ್ಲಿ 125 ವರ್ಷಗಳ ಹಳೆಯ ಹಿಂದೂ ದೇವಾಲಯ ಧ್ವಂಸ!

Posted on 1 week ago
ಗಲ್ಲು ಶಿಕ್ಷೆ ನೀಡಿ, ಪತ್ನಿಗೆ ವಿಚ್ಛೇದನ ನೀಡುತ್ತೇನೆ! Yasin Malik Seeks Death Penalty, Announces Divorce From Pak Wife 5
  • ದೇಶ

ಗಲ್ಲು ಶಿಕ್ಷೆ ನೀಡಿ, ಪತ್ನಿಗೆ ವಿಚ್ಛೇದನ ನೀಡುತ್ತೇನೆ!

Posted on 1 week ago

You may have missed

Missing Bengaluru Girls Found After 8 Months
  • ಕ್ರೈಮ್
  • ರಾಜ್ಯ

ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು 8 ತಿಂಗಳ ಬಳಿಕ ಪತ್ತೆ!

Jiokannadanews Posted on 2 days ago
Air India Mid-Air Terror: 3 Hydraulics Fail
  • ದೇಶ

ಆಕಾಶದಲ್ಲೇ ಏರ್ ಇಂಡಿಯಾ ವಿಮಾನದ ಹೈಡ್ರಾಲಿಕ್ಸ್ ಫೇಲ್!

Jiokannadanews Posted on 6 days ago
St. Joseph's Madikeri
  • ರಾಜ್ಯ

ಬಾಸ್ಕೆಟ್‌ಬಾಲ್ ಪಂದ್ಯಾವಳಿ: ಪ್ರಚಂಡ ಪ್ರದರ್ಶನ ನೀಡಿದ ಸೇಂಟ್ ಜೋಸೆಫ್ಸ್

Jiokannadanews Posted on 1 week ago
India Slams Pakistan Over Demolition of 125-Year-Old Hindu Temple
  • ದೇಶ

ಪಾಕಿಸ್ತಾನದಲ್ಲಿ 125 ವರ್ಷಗಳ ಹಳೆಯ ಹಿಂದೂ ದೇವಾಲಯ ಧ್ವಂಸ!

Jiokannadanews Posted on 1 week ago

Categories

  • Trending News
  • Uncategorized
  • ಆಟೋಮೊಬೈಲ್
  • ಆರೋಗ್ಯ
  • ಉದ್ಯೋಗ
  • ಕ್ರಿಕೆಟ್
  • ಕ್ರೈಮ್
  • ಟೆಕ್
  • ದೇಶ
  • ರಾಜ್ಯ
  • ಸಿನಿಮಾ
  • Contact Us
  • About Us
  • Disclaimer
  • Terms and Conditions
  • Privacy Policy
Copyright © All rights reserved. | MoreNews by AF themes.