Skip to content

Jio Kannada News

Kannada News

banner-promo-full-green
Primary Menu
  • HOME
  • ಕ್ರಿಕೆಟ್
  • ರಾಜ್ಯ
  • ದೇಶ
  • ಆರೋಗ್ಯ
  • ಸಿನಿಮಾ
  • ಉದ್ಯೋಗ
  • ಕ್ರೈಮ್
  • ಆಟೋಮೊಬೈಲ್
  • ಟೆಕ್
  • Contact Us
Light/Dark Button
Wtach Live
  • Home
  • ದೇಶ
  • ಕೇರಳಕ್ಕೂ ಕಾಲಿಟ್ಟ ‘ಕಾಂಗ್ರೆಸ್ ಗ್ಯಾರೆಂಟಿ’
  • ದೇಶ

ಕೇರಳಕ್ಕೂ ಕಾಲಿಟ್ಟ ‘ಕಾಂಗ್ರೆಸ್ ಗ್ಯಾರೆಂಟಿ’

Jiokannadanews Posted on 3 months ago 1 minute read
congress guarantee scheme in kerala

Rahul Gandhi

ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಕೇರಳದಲ್ಲಿ 5 ಗ್ಯಾರೆಂಟಿಗಳನ್ನು ಸೋಷಿಸಿದೆ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಅಧಿಕಾರಕ್ಕೆ ಬಂದರೆ ಉಚಿತ ಬಸ್ ಪ್ರಯಾಣ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಅಂದರೆ ಈ ಹಿಂದೆ ಕರ್ನಾಟಕದಲ್ಲಿ ಸಿದ್ಧರಾಮಯ್ಯ ಸರ್ಕಾರ ಜಾರಿ ಮಾಡಿದಂತೆ ಕೇರಳದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿದಂತೆ ಹಲವು ಗ್ಯಾರೆಂಟಿಗಳನ್ನು ಜಾರಿಗೊಳಿಸುವುದಾಗಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟ ಹೇಳಿಕೊಂಡಿದೆ.

ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್​ ಮೈತ್ರಿಕೂಟ ರೂಪಿಸಿರುವ 5 ಗ್ಯಾರೆಂಟಿ  ಯೋಜನೆಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

  1. ಉಚಿತ ಬಸ್ ಪ್ರಯಾಣ: ರಾಜ್ಯದ ಎಲ್ಲಾ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ.
  2. ವಿದ್ಯಾರ್ಥಿನಿಯರಿಗೆ ಧನಸಹಾಯ: ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ₹1,000 ಆರ್ಥಿಕ ನೆರವು.
  3. ಹೆಚ್ಚುವರಿ ಕಲ್ಯಾಣ ಪೆನ್ಷನ್: ಸಮಾಜದ ಅಂಚಿನಲ್ಲಿರುವ ವರ್ಗದವರಿಗೆ ನೀಡಲಾಗುವ ಮಾಸಿಕ ಪೆನ್ಷನ್ ಮೊತ್ತವನ್ನು ₹3,000 ಕ್ಕೆ ಏರಿಕೆ ಮಾಡುವುದು.
  4. ಉಮ್ಮನ್ ಚಾಂಡಿ ಆರೋಗ್ಯ ವಿಮೆ: ಮಾಜಿ ಮುಖ್ಯಮಂತ್ರಿಗಳ ಹೆಸರಿನಲ್ಲಿ ಪ್ರತಿ ಕುಟುಂಬಕ್ಕೆ ₹25 ಲಕ್ಷ ವರೆಗಿನ ಉಚಿತ ಆರೋಗ್ಯ ವಿಮೆ ಒದಗಿಸುವುದು.
  5. ಯುವ ಉದ್ಯಮಿಗಳಿಗೆ ನೆರವು: ಹೊಸ ಉದ್ಯಮ ಆರಂಭಿಸಲು ಬಯಸುವ ಯುವಕ-ಯುವತಿಯರಿಗೆ ₹5 ಲಕ್ಷ ವರೆಗೆ ಬಡ್ಡಿ ರಹಿತ ಸಾಲ ನೀಡಿಕೆ.

ಇದರ ಜೊತೆಗೆ, ಹಿರಿಯ ನಾಗರಿಕರ ಸಮಸ್ಯೆಗಳನ್ನು ಆಲಿಸಲು ಪ್ರತ್ಯೇಕ ಇಲಾಖೆ ಅಥವಾ ಸಚಿವರನ್ನು ನೇಮಿಸುವುದಾಗಿಯೂ ಕಾಂಗ್ರೆಸ್ ನೇತೃತ್ವದ ಯುಡಿಎಫ್​ ಮೈತ್ರಿಕೂಟ ಭರವಸೆ ನೀಡಿದೆ.

ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಮುಖ್ಯ ಗ್ಯಾರಂಟಿ ಯೋಜನೆಗಳು ಈ ಕೆಳಗಿನಂತಿವೆ:

  1. ಶಕ್ತಿ ಯೋಜನೆ: ರಾಜ್ಯದ ಎಲ್ಲಾ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC/BMTC) ಸಾಮಾನ್ಯ ಬಸ್‌ಗಳಲ್ಲಿ ಉಚಿತ ಪ್ರಯಾಣ.
  2. ಗೃಹ ಜ್ಯೋತಿ: ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಸೌಲಭ್ಯ.
  3. ಗೃಹ ಲಕ್ಷ್ಮಿ: ಮನೆಯ ಯಜಮಾನಿಗೆ ಪ್ರತಿ ತಿಂಗಳು ₹2,000 ನಗದು ಸಹಾಯಧನ.
  4. ಅನ್ನ ಭಾಗ್ಯ: ಬಿಪಿಎಲ್ (BPL) ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ ತಿಂಗಳಿಗೆ 10 ಕೆಜಿ ಅಕ್ಕಿ (ಪ್ರಸ್ತುತ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿಗೆ ಬದಲಾಗಿ ನಗದು ನೀಡಲಾಗುತ್ತಿದೆ).
  5. ಯುವ ನಿಧಿ: ಪದವಿ ಮುಗಿಸಿ ನಿರುದ್ಯೋಗಿಗಳಾಗಿರುವ ಯುವಕರಿಗೆ ಪ್ರತಿ ತಿಂಗಳು ₹3,000 ಮತ್ತು ಡಿಪ್ಲೊಮಾ ಪದವೀಧರರಿಗೆ ₹1,500 ನಿರುದ್ಯೋಗ ಭತ್ಯೆ (ಗರಿಷ್ಠ 2 ವರ್ಷಗಳವರೆಗೆ).

ಕರ್ನಾಟಕದಲ್ಲಿನ ಶಕ್ತಿ ಯೋಜನೆಯನ್ನು ಕೇರಳದಲ್ಲೂ ಪರಿಚಯಿಸಲು ಕಾಂಗ್ರೆಸ್ ಮೈತ್ರಿಕೂಟ ಮುಂದಾಗಿದೆ. ಇದಾಗ್ಯೂ ಗೃಹ ಜ್ಯೋತಿ ಯೋಜನೆಯ ಭರವಸೆ ನೀಡಲಾಗಿಲ್ಲ. ಬದಲಾಗಿ ಕೇರಳದಲ್ಲಿ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ₹1,000 ಆರ್ಥಿಕ ನೆರವು ನೀಡುವುದಾಗಿ ತಿಳಿಸಲಾಗಿದೆ.

ಇನ್ನು ಕರ್ನಾಟಕದ ಗೃಹಲಕ್ಷ್ಮಿ ಯೋಜನೆ ಬದಲಾಗಿ ಮಾಜಿ ಮುಖ್ಯಮಂತ್ರಿಗಳ ಹೆಸರಿನಲ್ಲಿ ಪ್ರತಿ ಕುಟುಂಬಕ್ಕೆ ₹25 ಲಕ್ಷ ವರೆಗಿನ ಉಚಿತ ಆರೋಗ್ಯ ವಿಮೆ ಒದಗಿಸಲಾಗುವುದು ಎಂದು ತಿಳಿಸಲಾಗಿದೆ.

ಹಾಗೆಯೇ ಅನ್ನ ಭಾಗ್ಯದ ಯೋಜನೆ ಬದಲಿಗೆ ಸಮಾಜದ ಅಂಚಿನಲ್ಲಿರುವ ವರ್ಗದವರಿಗೆ ನೀಡಲಾಗುವ ಮಾಸಿಕ ಪೆನ್ಷನ್ ಮೊತ್ತವನ್ನು ₹3,000 ಕ್ಕೆ ಏರಿಕೆ ಮಾಡುವುದಾಗಿ ಕೇರಳ ಕಾಂಗ್ರೆಸ್ ಭರವಸೆ ನೀಡಿದೆ.

ಇದನ್ನೂ ಓದಿ: ಕರ್ನಾಟಕದ್ದು ‘ಹಲಾಲ್’ ಬಜೆಟಾ? ಇಲ್ಲಿದೆ ನಿಜಾಂಶ

ಇನ್ನು ಕರ್ನಾಟಕದಲ್ಲಿ ಪರಿಚಯಿಸಲಾದ ಯುವ ನಿಧಿ ಬದಲಿಗೆ ಕೇರಳದಲ್ಲಿ ಹೊಸ ಉದ್ಯಮ ಆರಂಭಿಸಲು ಬಯಸುವ ಯುವಕ-ಯುವತಿಯರಿಗೆ ₹5 ಲಕ್ಷ ವರೆಗೆ ಬಡ್ಡಿ ರಹಿತ ಸಾಲ ನೀಡುವುದಾಗಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟ ಹೇಳಿಕೊಂಡಿದೆ.

About the Author

Jiokannadanews

Administrator

jiokannadanews.com

Visit Website View All Posts
Tags: National News

Post navigation

Previous: IPL 2026: ಐಪಿಎಲ್ ವೇಳಾಪಟ್ಟಿ ಪ್ರಕಟ
Next: ಬೆಂಜಮಿನ್ ನೆತನ್ಯಾಹುನ ಬೆನ್ನಟ್ಟಿ ಕೊಲ್ಲುತ್ತೇವೆ: ಇರಾನ್ ಶಪಥ

Related Stories

Delimitation
  • ದೇಶ

ಕ್ಷೇತ್ರ ಪುನರ್ ವಿಂಗಡಣೆ ಆಗಲಿದೆಯಾ? ಎಷ್ಟು ಮತ ಬೇಕು?

Jiokannadanews Posted on 2 months ago
What is Delimitation?- explanation in kannada
  • ದೇಶ

ಏನಿದು ಕ್ಷೇತ್ರ ಪುನರ್ ವಿಂಗಡಣೆ?

Jiokannadanews Posted on 2 months ago
subramanian swamy about amit shah 2026
  • ದೇಶ

ಅಮಿತ್ ಶಾ ‘ಗೂಂಡಾ’ ಅಷ್ಟೇ… ಬಿಜೆಪಿ ನಾಯಕನ ವಾಗ್ದಾಳಿ..!

Jiokannadanews Posted on 2 months ago

Trending News

ಸಿಎಂ ಡಿಕೆಶಿ ಜೊತೆ 13 ಶಾಸಕರಿಗೆ ಸಚಿವ ಸ್ಥಾನ! DK Shivakumar Takes Charge: 13 MLAs to Swear In as Ministers 1
  • ರಾಜ್ಯ

ಸಿಎಂ ಡಿಕೆಶಿ ಜೊತೆ 13 ಶಾಸಕರಿಗೆ ಸಚಿವ ಸ್ಥಾನ!

Posted on 6 hours ago
ಬೆಂಗಳೂರಿನಲ್ಲಿ ಘೋರ ದುರಂತ: ಭಾರೀ ಮಳೆಗೆ ಕಾಂಪೌಂಡ್ ಕುಸಿದು 7 ಮಂದಿ ಸಾವು! 1777475804134 2
  • ರಾಜ್ಯ

ಬೆಂಗಳೂರಿನಲ್ಲಿ ಘೋರ ದುರಂತ: ಭಾರೀ ಮಳೆಗೆ ಕಾಂಪೌಂಡ್ ಕುಸಿದು 7 ಮಂದಿ ಸಾವು!

Posted on 1 month ago
IPL 2026: ‘ಸೂರ್ಯವಂಶಿ’ ಎಂಬ ಸುನಾಮಿ vaibhav-sooryavanshi-3 3
  • ಕ್ರಿಕೆಟ್

IPL 2026: ‘ಸೂರ್ಯವಂಶಿ’ ಎಂಬ ಸುನಾಮಿ

Posted on 1 month ago
ನಲಪಾಡ್ ಇಡಿ ದಾಳಿ ಹಿಂದಿದೆ ಪೋರ್ಷೆ ಕಾರಿನ ರಹಸ್ಯ! Porsche Mystery Behind ED Raids on Nalapad! 4
  • ರಾಜ್ಯ

ನಲಪಾಡ್ ಇಡಿ ದಾಳಿ ಹಿಂದಿದೆ ಪೋರ್ಷೆ ಕಾರಿನ ರಹಸ್ಯ!

Posted on 1 month ago
ಕೃಷ್ಣನ ಮುಂದೆ ಚಿಕನ್ ಮಂದಿ: ಹೋಟೆಲ್ ಮಾಲೀಕ ಅರೆಸ್ಟ್ Vishu Poster Row: Restaurant Owner Jailed for Offensive Ad 5
  • ರಾಜ್ಯ

ಕೃಷ್ಣನ ಮುಂದೆ ಚಿಕನ್ ಮಂದಿ: ಹೋಟೆಲ್ ಮಾಲೀಕ ಅರೆಸ್ಟ್

Posted on 2 months ago

You may have missed

DK Shivakumar Takes Charge: 13 MLAs to Swear In as Ministers
  • ರಾಜ್ಯ

ಸಿಎಂ ಡಿಕೆಶಿ ಜೊತೆ 13 ಶಾಸಕರಿಗೆ ಸಚಿವ ಸ್ಥಾನ!

Jiokannadanews Posted on 6 hours ago
1777475804134
  • ರಾಜ್ಯ

ಬೆಂಗಳೂರಿನಲ್ಲಿ ಘೋರ ದುರಂತ: ಭಾರೀ ಮಳೆಗೆ ಕಾಂಪೌಂಡ್ ಕುಸಿದು 7 ಮಂದಿ ಸಾವು!

Jiokannadanews Posted on 1 month ago
vaibhav-sooryavanshi-3
  • ಕ್ರಿಕೆಟ್

IPL 2026: ‘ಸೂರ್ಯವಂಶಿ’ ಎಂಬ ಸುನಾಮಿ

Jiokannadanews Posted on 1 month ago
Porsche Mystery Behind ED Raids on Nalapad!
  • ರಾಜ್ಯ

ನಲಪಾಡ್ ಇಡಿ ದಾಳಿ ಹಿಂದಿದೆ ಪೋರ್ಷೆ ಕಾರಿನ ರಹಸ್ಯ!

Jiokannadanews Posted on 1 month ago

Categories

  • ಆಟೋಮೊಬೈಲ್
  • ಆರೋಗ್ಯ
  • ಉದ್ಯೋಗ
  • ಕ್ರಿಕೆಟ್
  • ಕ್ರೈಮ್
  • ಟೆಕ್
  • ದೇಶ
  • ರಾಜ್ಯ
  • ಸಿನಿಮಾ
  • Contact Us
  • About Us
  • Disclaimer
  • Terms and Conditions
  • Privacy Policy
Copyright © All rights reserved. | MoreNews by AF themes.