Skip to content

Jio Kannada News

Kannada News

banner-promo-full-green
Primary Menu
  • HOME
  • ಕ್ರಿಕೆಟ್
  • ರಾಜ್ಯ
  • ದೇಶ
  • ಆರೋಗ್ಯ
  • ಸಿನಿಮಾ
  • ಉದ್ಯೋಗ
  • ಕ್ರೈಮ್
  • ಆಟೋಮೊಬೈಲ್
  • ಟೆಕ್
  • Contact Us
Light/Dark Button
Wtach Live
  • Home
  • ಟೆಕ್
  • ಕೇವಲ 10 ನಿಮಿಷಗಳಲ್ಲಿ ಡೆಲಿವರಿ: ಬೆಂಗಳೂರಿನಲ್ಲಿ ಡ್ರೋನ್ ಸೇವೆ!
  • ಟೆಕ್

ಕೇವಲ 10 ನಿಮಿಷಗಳಲ್ಲಿ ಡೆಲಿವರಿ: ಬೆಂಗಳೂರಿನಲ್ಲಿ ಡ್ರೋನ್ ಸೇವೆ!

Jiokannadanews Posted on 6 days ago 1 minute read
drone delivery in bangalore

Drone Delivery

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಮೀರಿ ವೇಗವಾಗಿ ವಸ್ತುಗಳನ್ನು ತಲುಪಿಸಲು ಸ್ಕೈ ಏರ್​ ಮೊಬಿಲಿಟಿ (Skye Air Mobility) ಸಂಸ್ಥೆಯು ವಾಣಿಜ್ಯಿಕ ಡ್ರೋನ್ ಸೇವೆಯನ್ನು ಅಧಿಕೃತವಾಗಿ ಆರಂಭಿಸಿದೆ. ಅಂದರೆ ಇನ್ಮುಂದೆ ಬೆಂಗಳೂರು ನಗರದಲ್ಲಿ ಡ್ರೋನ್​ಗಳ ಮೂಲಕವೇ ವಸ್ತುಗಳ ಡೆಲಿವರಿ ಮಾಡಲಿದೆ.

ಸ್ಕೈ ಏರ್​ ಮೊಬಿಲಿಟಿ ಸಂಸ್ಥೆಯು ಬೆಂಗಳೂರಿನಲ್ಲಿ ಡ್ರೋನ್ ನೆಟ್‌ವರ್ಕ್ ಅನ್ನು ಆರಂಭಿಸಿದ್ದು, ಈ ಮೂಲಕ
ದಕ್ಷಿಣ ಬೆಂಗಳೂರಿನ ಕೋಣನಕುಂಟೆ ಮತ್ತು ಕನಕಪುರ ರಸ್ತೆ ಪ್ರದೇಶಗಳಲ್ಲಿ ಡ್ರೋನ್ ಡೆಲಿವರಿ ಸೇವೆಗಳನ್ನು ನೀಡಲಾರಂಭಿಸಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಬನ್ನೇರುಘಟ್ಟ ರಸ್ತೆ, ಜಯನಗರ ಮತ್ತು ಎಲೆಕ್ಟ್ರಾನಿಕ್ ಸಿಟಿಗೆ ವಿಸ್ತರಿಸುವ ಯೋಜನೆಯಿದೆ.

ಕುತೂಹಲಕಾರಿ ವಿಷಯ ಎಂದರೆ, 4 ಕಿ.ಮೀ ದೂರವರೆಗಿನ ಡೆಲಿವರಿಯನ್ನು ಸ್ಕೈ ಏರ್​ ಮೊಬಿಲಿಟಿ ಸಂಸ್ಥೆಯು ಕೇವಲ 10 ನಿಮಿಷಗಳಲ್ಲಿ ತಲುಪಿಸುತ್ತಿದ್ದಾರೆ. ಹೀಗಾಗಿಯೇ ಮುಂಬರುವ ದಿನಗಳಲ್ಲಿ ದೇಶದ ಪ್ರಮುಖ ನಗರಗಳಲ್ಲಿನ ಡೆಲಿವರಿ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಯಾಗುವುದು ಖಚಿತ.

ಫ್ಲೈಯಿಂಗ್ ಡೆಲಿವರಿ:​

ಬಿಗ್ ಬಾಸ್ಕೆಟ್​ ಕಂಪೆನಿ ಕೂಡ ಬಿಬಿಫ್ಲೈ (BBfly) ಹೆಸರಿನಲ್ಲಿ ವಸತಿ ಸಂಕೀರ್ಣಗಳಿಗೆ ದಿನಸಿ ತಲುಪಿಸುವ  ಸೇವೆಗೆ ಚಾಲನೆ ನೀಡಿದೆ.

ಕನಕಪುರ ರಸ್ತೆಯಲ್ಲಿರುವ ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಬಿಗ್‌ಬಾಸ್ಕೆಟ್ ತನ್ನ ಮೊದಲ ಡ್ರೋನ್ ಡೆಲಿವರಿ ಪ್ರಯೋಗವನ್ನು ಯಶಸ್ವಿಯಾಗಿ ಆರಂಭಿಸಿದೆ.

ಇನ್ನು ನಾರಾಯಣ ಹೆಲ್ತ್ ಮತ್ತು ಏರ್‌ಬೌಂಡ್, ಚಂದಾಪುರ ಮತ್ತು ಎಲೆಕ್ಟ್ರಾನಿಕ್ ಸಿಟಿ ನಡುವೆ ವೈದ್ಯಕೀಯ ಸ್ಯಾಂಪಲ್‌ಗಳನ್ನು ಕೇವಲ 10 ನಿಮಿಷಗಳಲ್ಲಿ ಸಾಗಿಸುವ ಪೈಲಟ್ ಯೋಜನೆಗೆ ಚಾಲನೆ ನೀಡಿದ್ದಾರೆ.

ಡ್ರೋನ್ ಸೇವೆ ವಿವರಗಳು:

  • ಹೊರೆ ಸಾಮರ್ಥ್ಯ: ಒಂದು ಬಾರಿ ಗರಿಷ್ಠ 10 ಕೆಜಿ ತೂಕದ ವಸ್ತುಗಳನ್ನು ಸಾಗಿಸಬಹುದು.
  • ಹಾರಾಟದ ಎತ್ತರ: ನೆಲದಿಂದ ಸುಮಾರು 120 ಮೀಟರ್ ಎತ್ತರದಲ್ಲಿ ಇವು ಹಾರುತ್ತವೆ.
  • ವಸ್ತುಗಳು: ಔಷಧಿಗಳು, ದಿನಸಿ ಪದಾರ್ಥಗಳು, ಲಘು ಆಹಾರ ಮತ್ತು ಸಣ್ಣ ಎಲೆಕ್ಟ್ರಾನಿಕ್ ವಸ್ತುಗಳನ್ನು ತಲುಪಿಸಲಾಗುತ್ತದೆ.
  • ಕಾರ್ಯನಿರ್ವಹಿಸುವ ಸಮಯ: ಸಾಮಾನ್ಯವಾಗಿ ಬೆಳಿಗ್ಗೆ 7:00 ರಿಂದ ರಾತ್ರಿ 8:30 ರವರೆಗೆ ಈ ಸೇವೆ ಲಭ್ಯವಿರುತ್ತದೆ.

ಡ್ರೋನ್ ಡೆಲಿವರಿ ಬೆಸ್ಟ್ ಯಾಕೆ?

  • ಪರಿಸರ ಸ್ನೇಹಿ: ರಸ್ತೆ ಸಂಚಾರಕ್ಕೆ ಹೋಲಿಸಿದರೆ ಪ್ರತಿ ಡೆಲಿವರಿಯಿಂದ ಸುಮಾರು 520 ಗ್ರಾಂ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗುತ್ತದೆ.
  • ಖಾಸಗಿತನ: ಭದ್ರತೆ ಮತ್ತು ಖಾಸಗಿತನದ ದೃಷ್ಟಿಯಿಂದ ಈ ಡ್ರೋನ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸದೆ ಕೇವಲ GPS ಮೂಲಕ ನಿರ್ವಹಿಸಲಾಗುತ್ತದೆ.
  • ಸೇವಾ ಶುಲ್ಕ: ಪ್ರಸ್ತುತ ಪ್ರಯೋಗಾತ್ಮಕ ಹಂತದಲ್ಲಿ ಇರುವುದರಿಂದ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತಿಲ್ಲ.
  • ಪ್ರಸ್ತುತ ಉಚಿತ: ಸದ್ಯಕ್ಕೆ ಬೆಂಗಳೂರಿನಲ್ಲಿ ಡ್ರೋನ್ ಡೆಲಿವರಿ ಸೇವೆಗಳು (ಉದಾಹರಣೆಗೆ Skye Air ಅಥವಾ BigBasket) ಇನ್ನೂ ಪ್ರಾಯೋಗಿಕ ಹಂತದಲ್ಲಿರುವುದರಿಂದ (Pilot Phase), ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಡೆಲಿವರಿ ಚಾರ್ಜ್ ವಿಧಿಸುತ್ತಿಲ್ಲ. ಸಾಮಾನ್ಯ ರಸ್ತೆ ಡೆಲಿವರಿಗೆ ಎಷ್ಟು ಹಣ ಇರುತ್ತದೆಯೋ ಅಷ್ಟೇ ಇರುತ್ತದೆ ಅಥವಾ ಕೆಲವು ಕಡೆ ಪೂರ್ಣ ಉಚಿತವಾಗಿರುತ್ತದೆ.
  • ಭವಿಷ್ಯದ ಅಂದಾಜು: ಮುಂದಿನ ದಿನಗಳಲ್ಲಿ ಈ ಸೇವೆ ಪೂರ್ಣಪ್ರಮಾಣದಲ್ಲಿ ಜಾರಿಯಾದಾಗ, ರಸ್ತೆ ಸಂಚಾರದ ಮೂಲಕ ಮಾಡುವ ಡೆಲಿವರಿಗಿಂತ ಕಡಿಮೆ ಇರಲಿದೆ ಎಂದು ಕಂಪನಿಗಳು ತಿಳಿಸಿವೆ. ಏಕೆಂದರೆ ಡ್ರೋನ್ ಡೆಲಿವರಿಯು ಇಂಧನ ಮತ್ತು ಸಮಯವನ್ನು ಉಳಿಸುತ್ತದೆ.
  • ಕನಿಷ್ಠ ಆರ್ಡರ್ ಮೌಲ್ಯ: ಕೆಲವು ಆಪ್‌ಗಳಲ್ಲಿ ಡೆಲಿವರಿ ಉಚಿತವಾಗಿರಲು ಒಂದು ನಿರ್ದಿಷ್ಟ ಮೊತ್ತದ (ಉದಾಹರಣೆಗೆ ₹500 ಕ್ಕಿಂತ ಹೆಚ್ಚು) ಆರ್ಡರ್ ಮಾಡಬೇಕಾಗಬಹುದು.

ಇದನ್ನೂ ಓದಿ: ಈ ಸಮಸ್ಯೆಗಳಿಗೆ ಇದುವೇ ‘ಮನೆಮದ್ದು’

ಒಟ್ಟಿನಲ್ಲಿ ಬೆಂಗಳೂರು ನಗರಗಳಲ್ಲಿ ಟ್ರಾಫಿಕ್​ನಲ್ಲೇ ಸಿಲುಕುವ ಡೆಲಿವರಿಗಳು ಇನ್ಮುಂದೆ ಗಂಟೆಗಳ ಅವಧಿಯಲ್ಲಿ ಮನೆ ಸೇರಲಿದೆ. ಅಷ್ಟೇ ಅಲ್ಲದೆ ಆರ್ಡರ್ ಡೆಲಿವರಿ ಸಮಯಗಳಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ. ಹೀಗಾಗಿ ದಿನಸಿ ಸೇರಿದಂತೆ ಎಲ್ಲಾ ವಸ್ತುಗಳು ಮುಂಬರುವ ದಿನಗಳಲ್ಲಿ ಕ್ಷಣಾರ್ಧದಲ್ಲಿ ಮನೆ ಸೇರುವುದನ್ನು ನಿರೀಕ್ಷಿಸಬಹುದು.

 

About the Author

Jiokannadanews

Administrator

jiokannadanews.com

Visit Website View All Posts
Tags: Tech News

Post navigation

Previous: ಈ ಸುದ್ದಿ ‘ಮದರ್​ಲ್ಯಾಂಡ್-ಫಾದರ್​ಲ್ಯಾಂಡ್’ ವಿಡಿಯೋ ನಂಬಿದವರಿಗೆ..!
Next: ಹೈಕೋರ್ಟ್​ನಲ್ಲಿ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ

Related Stories

iphone 18 release date
  • ಟೆಕ್

ಐಫೋನ್-18 ಬಿಡುಗಡೆ ಯಾವಾಗ? ಇದರ ವಿಶೇಷತೆಗಳೇನು?

Jiokannadanews Posted on 2 days ago
New Customs Rules 2026 in India
  • ಟೆಕ್
  • ದೇಶ

ವಿದೇಶದಿಂದ ಚಿನ್ನ, ಐಫೋನ್ ತರುತ್ತೀರಾ? ಹೊಸ ನಿಯಮ ಜಾರಿ

Jiokannadanews Posted on 1 month ago
Tesla
  • ಟೆಕ್

ಟೆಸ್ಲಾ ಮೊಬೈಲ್ ಫೋನ್ ಬಿಡುಗಡೆ

Jiokannadanews Posted on 2 months ago

Trending News

16.7 ಸಾವಿರ ಕೋಟಿಗೆ RCB ಮಾರಾಟ..! IMG-20260324-WA0024 1
  • ಕ್ರಿಕೆಟ್

16.7 ಸಾವಿರ ಕೋಟಿಗೆ RCB ಮಾರಾಟ..!

Posted on 14 hours ago
IPL 2026: RCB ತಂಡದ ಪ್ರಮುಖ ಆಟಗಾರ ಔಟ್..! IPL 2026: RCB's Yash Dayal won't be playing this season 2
  • ಕ್ರಿಕೆಟ್

IPL 2026: RCB ತಂಡದ ಪ್ರಮುಖ ಆಟಗಾರ ಔಟ್..!

Posted on 17 hours ago
IPL 2026: 15,300 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ಮಾರಾಟ ipl 2026: rajasthan royals new owner 3
  • ಕ್ರಿಕೆಟ್

IPL 2026: 15,300 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ಮಾರಾಟ

Posted on 17 hours ago
IPL 2026: 11 ಸೀಟ್ ಖಾಲಿ, ಎಲ್ಲರಿಗೂ 11 ನಂಬರ್​ನ ಜೆರ್ಸಿ..! IPL 2026: RCB keep 11 empty seats to honour stampede victims 4
  • ಕ್ರಿಕೆಟ್

IPL 2026: 11 ಸೀಟ್ ಖಾಲಿ, ಎಲ್ಲರಿಗೂ 11 ನಂಬರ್​ನ ಜೆರ್ಸಿ..!

Posted on 17 hours ago
ಐಫೋನ್-18 ಬಿಡುಗಡೆ ಯಾವಾಗ? ಇದರ ವಿಶೇಷತೆಗಳೇನು? iphone 18 release date 5
  • ಟೆಕ್

ಐಫೋನ್-18 ಬಿಡುಗಡೆ ಯಾವಾಗ? ಇದರ ವಿಶೇಷತೆಗಳೇನು?

Posted on 2 days ago

You may have missed

IMG-20260324-WA0024
  • ಕ್ರಿಕೆಟ್

16.7 ಸಾವಿರ ಕೋಟಿಗೆ RCB ಮಾರಾಟ..!

Jiokannadanews Posted on 14 hours ago
IPL 2026: RCB's Yash Dayal won't be playing this season
  • ಕ್ರಿಕೆಟ್

IPL 2026: RCB ತಂಡದ ಪ್ರಮುಖ ಆಟಗಾರ ಔಟ್..!

Jiokannadanews Posted on 17 hours ago
ipl 2026: rajasthan royals new owner
  • ಕ್ರಿಕೆಟ್

IPL 2026: 15,300 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ಮಾರಾಟ

Jiokannadanews Posted on 17 hours ago
IPL 2026: RCB keep 11 empty seats to honour stampede victims
  • ಕ್ರಿಕೆಟ್

IPL 2026: 11 ಸೀಟ್ ಖಾಲಿ, ಎಲ್ಲರಿಗೂ 11 ನಂಬರ್​ನ ಜೆರ್ಸಿ..!

Jiokannadanews Posted on 17 hours ago

Categories

  • ಆಟೋಮೊಬೈಲ್
  • ಆರೋಗ್ಯ
  • ಉದ್ಯೋಗ
  • ಕ್ರಿಕೆಟ್
  • ಕ್ರೈಮ್
  • ಟೆಕ್
  • ದೇಶ
  • ರಾಜ್ಯ
  • ಸಿನಿಮಾ
  • Contact Us
  • About Us
  • Disclaimer
  • Terms and Conditions
  • Privacy Policy
Copyright © All rights reserved. | MoreNews by AF themes.