IPL 2026
ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಹಂತದ ವೇಳಾಪಟ್ಟಿ ಪ್ರಕಟವಾಗಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಮಾರ್ಚ್ 28 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದೊಂದಿಗೆ ಐಪಿಎಲ್ ಸೀಸನ್-19 ಗೆ ಚಾಲನೆ ದೊರೆಯಲಿದೆ.
IPL 2026 ಮೊದಲ ಹಂತದ ವೇಳಾಪಟ್ಟಿ:
| ಪಂದ್ಯ ಸಂಖ್ಯೆ. | ದಿನಾಂಕ | ದಿನ | ತಂಡಗಳು | ಸ್ಥಳ |
| 1 | 28/03/26 | ಶನಿವಾರ | RCB vs SRH | ಬೆಂಗಳೂರು |
| 2 | 29/03/26 | ಭಾನುವಾರ | MI vs KKR | ಮುಂಬೈ |
| 3 | 30/03/26 | ಸೋಮವಾರ | RR vs CSK | ಗುವಾಹಟಿ |
| 4 | 31/03/26 | ಮಂಗಳವಾರ | PBKS vs GT | ಮುಲ್ಲನ್ಪುರ |
| 5 | 01/04/26 | ಬುಧವಾರ | LSG vs DC | ಲಕ್ನೋ |
| 6 | 02/04/26 | ಗುರುವಾರ | KKR vs SRH | ಕೋಲ್ಕತ್ತಾ |
| 7 | 03/04/26 | ಶುಕ್ರವಾರ | CSK vs PBKS | ಚೆನ್ನೈ |
| 8 | 04/04/26 | ಶನಿವಾರ | DC vs MI | ದೆಹಲಿ |
| 9 | 04/04/26 | ಶನಿವಾರ | GT vs RR | ಅಹಮದಾಬಾದ್ |
| 10 | 05/04/26 | ಭಾನುವಾರ | SRH vs LSG | ಹೈದರಾಬಾದ್ |
| 11 | 05/04/26 | ಭಾನುವಾರ | RCB vs CSK | ಬೆಂಗಳೂರು |
| 12 | 06/04/26 | ಸೋಮವಾರ | KKR vs PBKS | ಕೋಲ್ಕತ್ತಾ |
| 13 | 07/04/26 | ಮಂಗಳವಾರ | RR vs MI | ಗುವಾಹಟಿ |
| 14 | 08/04/26 | ಬುಧವಾರ | DC vs GT | ದೆಹಲಿ |
| 15 | 09/04/26 | ಗುರುವಾರ | KKR vs LSG | ಕೋಲ್ಕತ್ತಾ |
| 16 | 10/04/26 | ಶುಕ್ರವಾರ | RR vs RCB | ಗುವಾಹಟಿ |
| 17 | 11/04/26 | ಶನಿವಾರ | PBKS vs SRH | ಮುಲ್ಲನ್ಪುರ |
| 18 | 11/04/26 | ಶನಿವಾರ | CSK vs DC | ಚೆನ್ನೈ |
| 19 | 12/04/26 | ಭಾನುವಾರ | LSG vs GT | ಲಕ್ನೋ |
| 20 | 12/04/26 | ಭಾನುವಾರ | MI vs RCB | ಮುಂಬೈ |
ಅರ್ಧ ವೇಳಾಪಟ್ಟಿ ಯಾಕೆ?
ಭಾರತದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳ ದಿನಾಂಕಗಳೊಂದಿಗೆ ಐಪಿಎಲ್ ಘರ್ಷಣೆಯಾಗಬಾರದು ಎಂಬ ಕಾರಣಕ್ಕೆ ಬಿಬಿಸಿಐ ಎಚ್ಚರಿಕೆ ವಹಿಸಿದೆ. ಇದೇ ಕಾರಣದಿಂದಾಗಿ ಮೊದಲ 20 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ.
ಇದನ್ನೂ ಓದಿ: ಕರ್ನಾಟಕದ್ದು ‘ಹಲಾಲ್’ ಬಜೆಟಾ? ಇಲ್ಲಿದೆ ನಿಜಾಂಶ
ಚುನಾವಣೆ ಮತ್ತು ಪಂದ್ಯಗಳಿಗೆ ಏಕಕಾಲದಲ್ಲಿ ಭದ್ರತೆ ಒದಗಿಸುವುದು ಕಷ್ಟವಾಗುವುದರಿಂದ, ಎರಡೂ ವೇಳಾಪಟ್ಟಿಗಳನ್ನು ಗಮನಿಸಿ ಮುಂದಿನ ಹಂತದ ಪಂದ್ಯಗಳನ್ನು ಘೋಷಿಸಲಾಗುತ್ತದೆ. ಹೀಗಾಗಿ ಚುನಾವಣಾ ಆಯೋಗವು ದಿನಾಂಕಗಳನ್ನು ಘೋಷಿಸಿದ ತಕ್ಷಣ, ಉಳಿದ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿಯನ್ನು ನಿರೀಕ್ಷಿಸಬಹುದು.