Skip to content

Jio Kannada News

Kannada News

banner-promo-full-green
Primary Menu
  • HOME
  • ಕ್ರಿಕೆಟ್
  • ರಾಜ್ಯ
  • ದೇಶ
  • ಆರೋಗ್ಯ
  • ಸಿನಿಮಾ
  • ಉದ್ಯೋಗ
  • ಕ್ರೈಮ್
  • ಆಟೋಮೊಬೈಲ್
  • ಟೆಕ್
  • Contact Us
Light/Dark Button
Wtach Live
  • Home
  • ಕ್ರಿಕೆಟ್
  • ಕೊನೆ ಕ್ಷಣದ ಬದಲಾವಣೆ… ಟೀಮ್ ಇಂಡಿಯಾಗೆ ಸಿರಾಜ್ ಎಂಟ್ರಿ
  • ಕ್ರಿಕೆಟ್

ಕೊನೆ ಕ್ಷಣದ ಬದಲಾವಣೆ… ಟೀಮ್ ಇಂಡಿಯಾಗೆ ಸಿರಾಜ್ ಎಂಟ್ರಿ

Jiokannadanews Posted on 6 months ago 1 minute read
Mohammed Siraj to replace injured Harshit Rana in T20 World Cup 2026 Squad

Mohammed Siraj

ಟಿ20 ವಿಶ್ವಕಪ್​ (T20 World Cup 2026) ಆರಂಭಕ್ಕೂ ಮುನ್ನ ಭಾರತ ತಂಡದಲ್ಲಿ ಮಹತ್ವದ ಬದಲಾವಣೆಯಾಗಿದೆ. ತಂಡದಲ್ಲಿದ್ದ ಪ್ರಮುಖ ವೇಗಿ ಹರ್ಷಿತ್ ರಾಣಾ (Harshit Rana) ಗಾಯಗೊಂಡು ಹೊರಬಿದ್ದಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಹರ್ಷಿತ್ ಅವರ ಕೈಗೆ ಗಾಯವಾಗಿತ್ತು. ಹೀಗಾಗಿ ಅವರು ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಇತ್ತ ಹರ್ಷಿತ್ ರಾಣಾ ಬದಲಿಗೆ ಟೀಮ್ ಇಂಡಿಯಾಗೆ ಮೊಹಮ್ಮದ್ ಸಿರಾಜ್ (Mohammed Siraj) ಎಂಟ್ರಿ ಕೊಟ್ಟಿದ್ದಾರೆ.

ಈ ಬಾರಿಯ ವಿಶ್ವಕಪ್ ತಂಡದಲ್ಲಿ ಮೊಹಮ್ಮದ್ ಸಿರಾಜ್​ಗೆ ಸ್ಥಾನ ಲಭಿಸಿರಲಿಲ್ಲ. ತಂಡದ ಪ್ರಮುಖ ವೇಗಿಗಳಾಗಿ ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾ ಆಯ್ಕೆಯಾಗಿದ್ದರು. ಆದರೆ ದುರಾದೃಷ್ಟ ಹರ್ಷಿತ್ ಅವರು ಗಾಯಗೊಂಡು ವಿಶ್ವಕಪ್​ ಟೂರ್ನಿಯಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.

ಇದರ ಬೆನ್ನಲ್ಲೇ ಮೊಹಮ್ಮದ್ ಸಿರಾಜ್ ಅವರಿಗೆ ಬುಲಾವ್ ನೀಡಲಾಗಿದ್ದು, ಅದರಂತೆ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಸಿರಾಜ್ ಮುಂಬೈನಲ್ಲಿ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ.

ಸಿರಾಜ್​ಗೆ ಸಿಗಲಿದೆಯಾ ಅವಕಾಶ?

ಭಾರತ ಟಿ20 ವಿಶ್ವಕಪ್ ತಂಡದಲ್ಲಿರುವುದು ಕೇವಲ ಮೂವರು ವೇಗಿಗಳು ಮಾತ್ರ. ಇಲ್ಲಿ ಜಸ್​ಪ್ರೀತ್ ಬುಮ್ರಾ ಹಾಗೂ ಅರ್ಷದೀಪ್ ಸಿಂಗ್ ಮುಖ್ಯ ಬೌಲರ್​ಗಳಾಗಿ ಕಣಕ್ಕಿಳಿಯುವುದು ಖಚಿತ. ಇದಾಗ್ಯೂ ಮೂರನೇ ವೇಗಿಯನ್ನು ಕಣಕ್ಕಿಳಿಸಲು ಬಯಸಿದರೆ ಮೊಹಮ್ಮದ್ ಸಿರಾಜ್​ಗೆ ಅವಕಾಶ ಸಿಗಲಿದೆ.

ಅದರಲ್ಲೂ ಬುಮ್ರಾಗೆ ಹೆಚ್ಚಿನ ವಿಶ್ರಾಂತಿ ನೀಡಲು ಮುಂದಾದರೆ ಮೊಹಮ್ಮದ್ ಸಿರಾಜ್​ಗೆ ಅವಕಾಶ ದೊರೆಯಲಿದೆ. ಏಕೆಂದರೆ ಅತ್ತ ಹೆಚ್ಚುವರಿ ವೇಗಿಯಾಗಿ ಹಾರ್ದಿಕ್ ಪಾಂಡ್ಯ ಕೂಡ ತಂಡದಲ್ಲಿದ್ದು, ಪಾಂಡ್ಯ ಜೊತೆಗೆ ಶಿವಂ ದುಬೆ ಕೂಡ ಕೆಲ ಓವರ್​ಗಳನ್ನು ಎಸೆಯಬಲ್ಲರು.

ಹೀಗಾಗಿ ದುರ್ಬಲ ತಂಡಗಳ ವಿರುದ್ಧದ ಪಂದ್ಯಗಳ ವೇಳೆ ಬುಮ್ರಾಗೆ ವಿಶ್ರಾಂತಿ ನೀಡಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನಿರ್ಧರಿಸಿದರೆ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯುವುದು ಖಚಿತ ಎಂದೇ ಹೇಳಬಹುದು.

ಟೀಮ್ ಇಂಡಿಯಾದ ಮೊದಲ ಪಂದ್ಯ ಯಾವಾಗ?

ಭಾರತ ತಂಡವು ಶನಿವಾರ (ಫೆ.7) ಅಮೆರಿಕ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಇದಾದ ಬಳಿಕ ಫೆಬ್ರವರಿ 12 ರಂದು ನಮೀಬಿಯಾ ಹಾಗೂ ಫೆಬ್ರವರಿ 15 ರಂದು ಪಾಕಿಸ್ತಾನ್ ತಂಡವನ್ನು ಎದುರಿಸಬೇಕಿದೆ. ಹಾಗೆಯೇ ಮೊದಲ ಸುತ್ತಿನ ತನ್ನ ಕೊನೆಯ ಪಂದ್ಯದಲ್ಲಿ ಭಾರತ  ನೆದರ್​ಲೆಂಡ್ಸ್ ವಿರುದ್ಧ ಕಣಕ್ಕಿಳಿಯಲಿದೆ.

ಇದನ್ನೂ ಓದಿ: ಸಹಕಾರಿ ಬ್ಯಾಂಕ್​ನಲ್ಲಿ ಡೈವರ್​ಗಳಿಗೆ ಉದ್ಯೋಗಾವಕಾಶ

ಭಾರತ ಟಿ20 ವಿಶ್ವಕಪ್ ತಂಡ:

ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, , ರಿಂಕು ಸಿಂಗ್, ಮೊಹಮ್ಮದ್ ಸಿರಾಜ್.

 

About the Author

Jiokannadanews

Administrator

jiokannadanews.com

Visit Website View All Posts
Tags: Mohammed Siraj T20 World Cup Team India

Post navigation

Previous: ದಾಖಲೆಗಳ ಮೇಲೆ ವಿಶ್ವ ದಾಖಲೆ ಬರೆದ ವೈಭವ್ ಸೂರ್ಯವಂಶಿ
Next: ಕರ್ನಾಟಕದಲ್ಲಿ ಪೊಲೀಸರಿಗಿಂತ ಕಳ್ಳರದ್ದೇ ‘ಮೇಲುಗೈ’

Related Stories

Sadagoppan Ramesh Slams Selectors for Dropping RCB Players
  • ಕ್ರಿಕೆಟ್

ಬೇರೆಯವರಿಗೆ ನ್ಯಾಯ, RCB ಆಟಗಾರರಿಗೆ ಅನ್ಯಾಯ..!

Jiokannadanews Posted on 3 days ago
vaibhav-sooryavanshi-3
  • ಕ್ರಿಕೆಟ್

IPL 2026: ‘ಸೂರ್ಯವಂಶಿ’ ಎಂಬ ಸುನಾಮಿ

Jiokannadanews Posted on 3 months ago
SHOCKING: SRH Vice-Captain Abhishek Sharma Fined 25% Match Fee
  • ಕ್ರಿಕೆಟ್

IPL 2026: ಅಭಿಷೇಕ್ ಶರ್ಮಾಗೆ 25 ಲಕ್ಷ ರೂ. ದಂಡ..!

Jiokannadanews Posted on 4 months ago

Trending News

ಕಾಕ್ರೋಚ್​ಗಳಿಗೆ ಗೆಲುವು: ಧರ್ಮೇಂದ್ರ ಪ್ರಧಾನ್ ರಾಜೀನಾಮೆ! Dharmendra Pradhan Resigns Over NEET-UG 2026 Paper Leak Row 1
  • ದೇಶ

ಕಾಕ್ರೋಚ್​ಗಳಿಗೆ ಗೆಲುವು: ಧರ್ಮೇಂದ್ರ ಪ್ರಧಾನ್ ರಾಜೀನಾಮೆ!

Posted on 21 hours ago
ಕೇಂದ್ರ ಸರ್ಕಾರದ ಮುಂದೆ 3 ಬೇಡಿಕೆಯಿಟ್ಟ CJP Picsart_26-07-24_17-52-02-956 2
  • ದೇಶ

ಕೇಂದ್ರ ಸರ್ಕಾರದ ಮುಂದೆ 3 ಬೇಡಿಕೆಯಿಟ್ಟ CJP

Posted on 2 days ago
ಧರ್ಮೇಂದ್ರ ಪ್ರಧಾನ್ ಯಾಕೆ ರಾಜೀನಾಮೆ ನೀಡುತ್ತಿಲ್ಲ ಗೊತ್ತಾ? Why Dharmendra Pradhan Won't Resign? 3
  • ದೇಶ

ಧರ್ಮೇಂದ್ರ ಪ್ರಧಾನ್ ಯಾಕೆ ರಾಜೀನಾಮೆ ನೀಡುತ್ತಿಲ್ಲ ಗೊತ್ತಾ?

Posted on 2 days ago
ಸೋನಮ್ ವಾಂಗ್ಚುಕ್ ಉಪವಾಸ ಅಂತ್ಯ: ಮುಂದಿನ ಹಾದಿಯೇನು? Sonam Wangchuk Ends 26-Day Fast After Govt Assurances 4
  • ದೇಶ

ಸೋನಮ್ ವಾಂಗ್ಚುಕ್ ಉಪವಾಸ ಅಂತ್ಯ: ಮುಂದಿನ ಹಾದಿಯೇನು?

Posted on 2 days ago
ಬೇರೆಯವರಿಗೆ ನ್ಯಾಯ, RCB ಆಟಗಾರರಿಗೆ ಅನ್ಯಾಯ..! Sadagoppan Ramesh Slams Selectors for Dropping RCB Players 5
  • ಕ್ರಿಕೆಟ್

ಬೇರೆಯವರಿಗೆ ನ್ಯಾಯ, RCB ಆಟಗಾರರಿಗೆ ಅನ್ಯಾಯ..!

Posted on 3 days ago

You may have missed

Dharmendra Pradhan Resigns Over NEET-UG 2026 Paper Leak Row
  • ದೇಶ

ಕಾಕ್ರೋಚ್​ಗಳಿಗೆ ಗೆಲುವು: ಧರ್ಮೇಂದ್ರ ಪ್ರಧಾನ್ ರಾಜೀನಾಮೆ!

Jiokannadanews Posted on 21 hours ago
Picsart_26-07-24_17-52-02-956
  • ದೇಶ

ಕೇಂದ್ರ ಸರ್ಕಾರದ ಮುಂದೆ 3 ಬೇಡಿಕೆಯಿಟ್ಟ CJP

Jiokannadanews Posted on 2 days ago
Why Dharmendra Pradhan Won't Resign?
  • ದೇಶ

ಧರ್ಮೇಂದ್ರ ಪ್ರಧಾನ್ ಯಾಕೆ ರಾಜೀನಾಮೆ ನೀಡುತ್ತಿಲ್ಲ ಗೊತ್ತಾ?

Jiokannadanews Posted on 2 days ago
Sonam Wangchuk Ends 26-Day Fast After Govt Assurances
  • ದೇಶ

ಸೋನಮ್ ವಾಂಗ್ಚುಕ್ ಉಪವಾಸ ಅಂತ್ಯ: ಮುಂದಿನ ಹಾದಿಯೇನು?

Jiokannadanews Posted on 2 days ago

Categories

  • Uncategorized
  • ಆಟೋಮೊಬೈಲ್
  • ಆರೋಗ್ಯ
  • ಉದ್ಯೋಗ
  • ಕ್ರಿಕೆಟ್
  • ಕ್ರೈಮ್
  • ಟೆಕ್
  • ದೇಶ
  • ರಾಜ್ಯ
  • ಸಿನಿಮಾ
  • Contact Us
  • About Us
  • Disclaimer
  • Terms and Conditions
  • Privacy Policy
Copyright © All rights reserved. | MoreNews by AF themes.