Skip to content

Jio Kannada News

Kannada News

banner-promo-full-green
Primary Menu
  • HOME
  • ಕ್ರಿಕೆಟ್
  • ರಾಜ್ಯ
  • ದೇಶ
  • ಆರೋಗ್ಯ
  • ಸಿನಿಮಾ
  • ಉದ್ಯೋಗ
  • ಕ್ರೈಮ್
  • ಆಟೋಮೊಬೈಲ್
  • ಟೆಕ್
  • Contact Us
Light/Dark Button
Wtach Live
  • Home
  • ಕ್ರಿಕೆಟ್
  • RCB ತಂಡದ್ದು ಗೆಲುವಲ್ಲ, ವಿಶ್ವ ದಾಖಲೆಯ ‘ವಿಜಯ’
  • ಕ್ರಿಕೆಟ್

RCB ತಂಡದ್ದು ಗೆಲುವಲ್ಲ, ವಿಶ್ವ ದಾಖಲೆಯ ‘ವಿಜಯ’

Jiokannadanews Posted on 4 months ago 1 minute read
RCB Creates New History

RCB

ವುಮೆನ್ಸ್ ಪ್ರೀಮಿಯರ್ ಲೀಗ್ (WPL 2026) ಸೀಸನ್-4 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ನಡೆದ WPL ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಜಯ ಸಾಧಿಸಿ ಆರ್​ಸಿಬಿ 2ನೇ ಬಾರಿ ಟ್ರೋಫಿ ಎತ್ತಿ ಹಿಡಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಜೆಮಿಮಾ ರೊಡ್ರಿಗಸ್ 37 ಎಸೆತಗಳಲ್ಲಿ 8 ಫೋರ್​ಗಳೊಂದಿಗೆ 57 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 203 ರನ್​ ಕಲೆಹಾಕಿದ್ದರು. ಈ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಫೈನಲ್​ನಲ್ಲಿ ಅತ್ಯಧಿಕ ಸ್ಕೋರ್ ದಾಖಲಿಸಿದ ದಾಖಲೆಯನ್ನು ಡೆಲ್ಲಿ ಕ್ಯಾಪಿಟಲ್ಸ್ ನಿರ್ಮಿಸಿದ್ದರು.

ಈ ದಾಖಲೆಯ ಮೊತ್ತವನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕಳಾಗಿ ಕಣಕ್ಕಿಳಿದ ಗ್ರೇಸ್ ಹ್ಯಾರಿಸ್ ಕೇವಲ 9 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದರು. ಈ ಹಂತದಲ್ಲಿ ಜೊತೆಗೂಡಿ ಸ್ಮೃತಿ ಮಂಧಾನ ಹಾಗೂ ಜಾರ್ಜಿಯಾ ವೊಲ್ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದರು.

ಡೆಲ್ಲಿ ಕ್ಯಾಪಿಟಲ್ಸ್ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ ಸ್ಮೃತಿ ಮಂಧಾನ ಕೇವಲ 41 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 12 ಫೋರ್​ಗಳೊಂದಿಗೆ 87 ರನ್ ಬಾರಿಸಿದರು.

ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್​ನೊಂದಿಗೆ ಗಮನ ಸೆಳೆದ ಜಾರ್ಜಿಯಾ ವೋಲ್ 54 ಎಸೆತಗಳಲ್ಲಿ 14 ಫೋರ್​ಗಳೊಂದಿಗೆ 79 ರನ್​ ಬಾರಿಸಿದರು. ಇದಾಗ್ಯೂ ಆರ್​ಸಿಬಿ ತಂಡಕ್ಕೆ ಗೆಲ್ಲಲು ಕೊನೆಯ ಓವರ್​ನಲ್ಲಿ 10 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಬ್ಯಾಟ್ ಬೀಸಿದ ರಾಧಾ ಯಾದವ್ ಬ್ಯಾಕ್ ಟು ಬ್ಯಾಕ್ 2 ಫೋರ್ ಬಾರಿಸಿ ಆರ್​ಸಿಬಿ ತಂಡಕ್ಕೆ 6 ವಿಕೆಟ್​ಗಳ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ.

ವಿಶ್ವ ದಾಖಲೆಯ ವಿಜಯ:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವು ಅಂತಿಂಥ ಗೆಲುವಲ್ಲ. ಬದಲಾಗಿ ವಿಶ್ವ ದಾಖಲೆಯ ವಿಜಯ. ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಫೈನಲ್​ ಮ್ಯಾಚ್​ನಲ್ಲಿ 200+ ಸ್ಕೋರ್ ಬೆನ್ನತ್ತಿ ಗೆದ್ದಿರುವುದು ಕೇವಲ 3 ತಂಡಗಳು ಮಾತ್ರ. ಈ ಸಾಧನೆ ಮಾಡಿದ ಮೊದಲ ತಂಡ ಕೊಲ್ಕತ್ತಾ ನೈಟ್ ರೈಡರ್ಸ್. ಇದಾದ ಬಳಿಕ ಲಾಹೋರ್ ಖಲಂದರ್ಸ್ ಕೂಡ ಭರ್ಜರಿ ಚೇಸಿಂಗ್​ನೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ 200+ ಸ್ಕೋರ್​ ಬೆನ್ನತ್ತಿ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದೆ.

  • 2014 ರಲ್ಲಿ ನಡೆದ ಐಪಿಎಲ್​ ಫೈನಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್​) ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 200 ರನ್​ಗಳನ್ನು ಬೆನ್ನತ್ತಿದ 3 ವಿಕೆಟ್​ಗಳ ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.
  • 2024 ರಲ್ಲಿ ನಡೆದ ಪಾಕಿಸ್ತಾನ್ ಸೂಪರ್ ಲೀಗ್ ಫೈನಲ್ ಪಂದ್ಯದಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧ ಲಾಹೋರ್ ಖಲಂದರ್ಸ್ ತಂಡವು 19.5 ಓವರ್​ಗಳಲ್ಲಿ 204 ರನ್​ಗಳನ್ನು ಬೆನ್ನತ್ತಿ ಚಾಂಪಿಯನ್ ಪಟ್ಟಕ್ಕೇರಿದಿದ್ದರು.
  • 2026ರ ವುಮೆನ್ಸ್ ಪ್ರೀಮಿಯರ್ ಲೀಗ್​ನ ಫೈನಲ್​​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 204 ರನ್​ಗಳ ಗುರಿಯನ್ನು ಕೇವಲ 19.4 ಓವರ್​ಗಳಲ್ಲಿ ಚೇಸ್ ಮಾಡಿ ಹೊಸ ಇತಿಹಾಸ ನಿರ್ಮಿಸಿದೆ

ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಫೈನಲ್ ಪಂದ್ಯದಲ್ಲಿ 200+ ರನ್ ಚೇಸ್ ಮಾಡಿ ಗೆದ್ದ ಮೊದಲ ಮಹಿಳಾ ತಂಡ ಎಂಬ ವಿಶ್ವ ದಾಖಲೆಯನ್ನು ಆರ್​ಸಿಬಿ ತಂಡ ತನ್ನದಾಗಿಸಿಕೊಂಡಿದೆ.

ಅಷ್ಟೇ ಅಲ್ಲದೆ  ಫೈನಲ್ ಮ್ಯಾಚ್​ನಲ್ಲಿತೀ ಕಡಿಮೆ ಎಸೆತಗಳಲ್ಲಿ 200+ ಸ್ಕೋರ್​ ಬೆನ್ನತ್ತಿದ ಗೆದ್ದ ತಂಡವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಅಂದರೆ ಈ ಹಿಂದೆ ಲಾಹೋರ್ ಖಲಂದರ್ಸ್ ತಂಡವು 19.5 ಓವರ್​ಗಳಲ್ಲಿ (119 ಎಸೆತಗಳು) 204 ರನ್ ಬಾರಿಸಿ ಇತಿಹಾಸ ನಿರ್ಮಿಸಿದ್ದರು.

ಇದೀಗ ರಾಯಲ್ ಚಾಲೆಂಜರ್ಸ್ ಮಹಿಳಾ ತಂಡವು 19.4 ಓವರ್​ಗಳಲ್ಲಿ 204 ರನ್​ಗಳ ಗುರಿಯನ್ನು ಬೆನ್ನತ್ತಿ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಹೀಗಾಗಿಯೇ ಆರ್​ಸಿಬಿ ತಂಡದ ಗೆಲುವು ಅಂತಿಂಥ ಗೆಲುವಲ್ಲ. ಇದು ವಿಶ್ವ ದಾಖಲೆಯ ವಿಜಯವಾಗಿದೆ.

 

About the Author

Jiokannadanews

Administrator

jiokannadanews.com

Visit Website View All Posts
Tags: IPL RCB WPL

Post navigation

Previous: ಟಿ20 ವಿಶ್ವಕಪ್ ಆರಂಭಕ್ಕೆ ದಿನಗಣನೆ
Next: ಸಹಕಾರಿ ಬ್ಯಾಂಕ್​ನಲ್ಲಿ ಡೈವರ್​ಗಳಿಗೆ ಉದ್ಯೋಗಾವಕಾಶ

Related Stories

vaibhav-sooryavanshi-3
  • ಕ್ರಿಕೆಟ್

IPL 2026: ‘ಸೂರ್ಯವಂಶಿ’ ಎಂಬ ಸುನಾಮಿ

Jiokannadanews Posted on 1 month ago
SHOCKING: SRH Vice-Captain Abhishek Sharma Fined 25% Match Fee
  • ಕ್ರಿಕೆಟ್

IPL 2026: ಅಭಿಷೇಕ್ ಶರ್ಮಾಗೆ 25 ಲಕ್ಷ ರೂ. ದಂಡ..!

Jiokannadanews Posted on 2 months ago
IMG-20260324-WA0024
  • ಕ್ರಿಕೆಟ್

16.7 ಸಾವಿರ ಕೋಟಿಗೆ RCB ಮಾರಾಟ..!

Jiokannadanews Posted on 2 months ago

Trending News

ಸಿಎಂ ಡಿಕೆಶಿ ಜೊತೆ 13 ಶಾಸಕರಿಗೆ ಸಚಿವ ಸ್ಥಾನ! DK Shivakumar Takes Charge: 13 MLAs to Swear In as Ministers 1
  • ರಾಜ್ಯ

ಸಿಎಂ ಡಿಕೆಶಿ ಜೊತೆ 13 ಶಾಸಕರಿಗೆ ಸಚಿವ ಸ್ಥಾನ!

Posted on 6 hours ago
ಬೆಂಗಳೂರಿನಲ್ಲಿ ಘೋರ ದುರಂತ: ಭಾರೀ ಮಳೆಗೆ ಕಾಂಪೌಂಡ್ ಕುಸಿದು 7 ಮಂದಿ ಸಾವು! 1777475804134 2
  • ರಾಜ್ಯ

ಬೆಂಗಳೂರಿನಲ್ಲಿ ಘೋರ ದುರಂತ: ಭಾರೀ ಮಳೆಗೆ ಕಾಂಪೌಂಡ್ ಕುಸಿದು 7 ಮಂದಿ ಸಾವು!

Posted on 1 month ago
IPL 2026: ‘ಸೂರ್ಯವಂಶಿ’ ಎಂಬ ಸುನಾಮಿ vaibhav-sooryavanshi-3 3
  • ಕ್ರಿಕೆಟ್

IPL 2026: ‘ಸೂರ್ಯವಂಶಿ’ ಎಂಬ ಸುನಾಮಿ

Posted on 1 month ago
ನಲಪಾಡ್ ಇಡಿ ದಾಳಿ ಹಿಂದಿದೆ ಪೋರ್ಷೆ ಕಾರಿನ ರಹಸ್ಯ! Porsche Mystery Behind ED Raids on Nalapad! 4
  • ರಾಜ್ಯ

ನಲಪಾಡ್ ಇಡಿ ದಾಳಿ ಹಿಂದಿದೆ ಪೋರ್ಷೆ ಕಾರಿನ ರಹಸ್ಯ!

Posted on 1 month ago
ಕೃಷ್ಣನ ಮುಂದೆ ಚಿಕನ್ ಮಂದಿ: ಹೋಟೆಲ್ ಮಾಲೀಕ ಅರೆಸ್ಟ್ Vishu Poster Row: Restaurant Owner Jailed for Offensive Ad 5
  • ರಾಜ್ಯ

ಕೃಷ್ಣನ ಮುಂದೆ ಚಿಕನ್ ಮಂದಿ: ಹೋಟೆಲ್ ಮಾಲೀಕ ಅರೆಸ್ಟ್

Posted on 2 months ago

You may have missed

DK Shivakumar Takes Charge: 13 MLAs to Swear In as Ministers
  • ರಾಜ್ಯ

ಸಿಎಂ ಡಿಕೆಶಿ ಜೊತೆ 13 ಶಾಸಕರಿಗೆ ಸಚಿವ ಸ್ಥಾನ!

Jiokannadanews Posted on 6 hours ago
1777475804134
  • ರಾಜ್ಯ

ಬೆಂಗಳೂರಿನಲ್ಲಿ ಘೋರ ದುರಂತ: ಭಾರೀ ಮಳೆಗೆ ಕಾಂಪೌಂಡ್ ಕುಸಿದು 7 ಮಂದಿ ಸಾವು!

Jiokannadanews Posted on 1 month ago
vaibhav-sooryavanshi-3
  • ಕ್ರಿಕೆಟ್

IPL 2026: ‘ಸೂರ್ಯವಂಶಿ’ ಎಂಬ ಸುನಾಮಿ

Jiokannadanews Posted on 1 month ago
Porsche Mystery Behind ED Raids on Nalapad!
  • ರಾಜ್ಯ

ನಲಪಾಡ್ ಇಡಿ ದಾಳಿ ಹಿಂದಿದೆ ಪೋರ್ಷೆ ಕಾರಿನ ರಹಸ್ಯ!

Jiokannadanews Posted on 1 month ago

Categories

  • ಆಟೋಮೊಬೈಲ್
  • ಆರೋಗ್ಯ
  • ಉದ್ಯೋಗ
  • ಕ್ರಿಕೆಟ್
  • ಕ್ರೈಮ್
  • ಟೆಕ್
  • ದೇಶ
  • ರಾಜ್ಯ
  • ಸಿನಿಮಾ
  • Contact Us
  • About Us
  • Disclaimer
  • Terms and Conditions
  • Privacy Policy
Copyright © All rights reserved. | MoreNews by AF themes.