Skip to content

Jio Kannada News

Kannada News

banner-promo-full-green
Primary Menu
  • HOME
  • ಕ್ರಿಕೆಟ್
  • ರಾಜ್ಯ
  • ದೇಶ
  • ಆರೋಗ್ಯ
  • ಸಿನಿಮಾ
  • ಉದ್ಯೋಗ
  • ಕ್ರೈಮ್
  • ಆಟೋಮೊಬೈಲ್
  • ಟೆಕ್
  • Contact Us
Light/Dark Button
Wtach Live
  • Home
  • ಕ್ರಿಕೆಟ್
  • ದಾಖಲೆಗಳ ಮೇಲೆ ವಿಶ್ವ ದಾಖಲೆ ಬರೆದ ವೈಭವ್ ಸೂರ್ಯವಂಶಿ
  • ಕ್ರಿಕೆಟ್

ದಾಖಲೆಗಳ ಮೇಲೆ ವಿಶ್ವ ದಾಖಲೆ ಬರೆದ ವೈಭವ್ ಸೂರ್ಯವಂಶಿ

Jiokannadanews Posted on 4 months ago 1 minute read
vaibhav suryavanshi

vaibhav suryavanshi

ಟೀಮ್ ಇಂಡಿಯಾದ ಯಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Suryavanshi) ಸ್ಫೋಟಕ ಸೆಂಚುರಿ ಸಿಡಿಸಿದ್ದಾರೆ. ಈ ಶತಕದೊಂದಿಗೆ ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ತನ್ನ 14ನೇ ವಯಸ್ಸಿನಲ್ಲಿ ಎಂಬುದು ವಿಶೇಷ. ಹರಾರೆಯಲ್ಲಿ ನಡೆದ ಅಂಡರ್-19 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಬ್ಯಾಟಿಂಗ್​ನೊಂದಿಗೆ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆ ದಾಖಲೆಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

 

  1. ಅತೀ ವೇಗದ ಶತಕ: ಅಂಡರ್-19 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಅತೀ ವೇಗದ ಶತಕ ಬಾರಿಸಿದ ವಿಶ್ವ ದಾಖಲೆ ವೈಭವ್ ಸೂರ್ಯವಂಶಿ ಪಾಲಾಗಿದೆ. ಕೇವಲ 55 ಎಸೆತಗಳಲ್ಲಿ ಸೆಂಚುರಿ ಪೂರೈಸಿ ಯುವ ದಾಂಡಿಗ ಈ ದಾಖಲೆ ನಿರ್ಮಿಸಿದ್ದಾರೆ.
  2. ಅತ್ಯಧಿಕ ಸ್ಕೋರ್: ಅಂಡರ್​-19 ವಿಶ್ವಕಪ್ ಫೈನಲ್ ಮ್ಯಾಚ್​ನಲ್ಲಿ ಅತ್ಯಧಿಕ  ವೈಯಕ್ತಿಕ ಸ್ಕೋರ್ ಗಳಿಸಿದ ದಾಖಲೆ ಕೂಡ ವೈಭವ್ ಪಾಲಾಗಿದೆ. ಈ ಪಂದ್ಯದಲ್ಲಿ 80 ಎಸೆತಗಳಲ್ಲಿ 175 ರನ್ ಬಾರಿಸಿ ವೈಭವ್ ಸೂರ್ಯವಂಶಿ ಈ ಭರ್ಜರಿ ದಾಖಲೆ ನಿರ್ಮಿಸಿದ್ದಾರೆ.
  3. ಅತ್ಯಧಿಕ ಸಿಕ್ಸ್: ಅಂಡರ್-19 ವಿಶ್ವಕಪ್ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವ ದಾಖಲೆ ಕೂಡ ವೈಭವ್ ಸೂರ್ಯವಂಶಿ ಹೆಸರಿಗೆ ಸೇರ್ಪಡೆಯಾಗಿದೆ. ಈ ಪಂದ್ಯದಲ್ಲಿ ಬರೋಬ್ಬರಿ 15 ಸಿಕ್ಸರ್‌ ಸಿಡಿಸಿ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
  4. ಗರಿಷ್ಠ ಸ್ಕೋರ್: ಐಸಿಸಿ ಟೂರ್ನಿಯ ಅಂತಿಮ ಪಂದ್ಯದಲ್ಲಿ ಗರಿಷ್ಠ ಸ್ಕೋರ್​ಗಳಿಸಿದ ವಿಶ್ವ ದಾಖಲೆ ಕೂಡ ವೈಭವ್ ಸೂರ್ಯವಂಶಿ ಪಾಲಾಗಿದೆ. ಫೈನಲ್ ಪಂದ್ಯದಲ್ಲಿ 175 ರನ್ ಸಿಡಿಸುವ ಮೂಲಕ ವೈಭವ್, ಆಸ್ಟ್ರೇಲಿಯಾ ಆಟಗಾರ್ತಿ ಅಲಿಸ್ಸಾ ಹೀಲಿ ಹೆಸರಿನಲ್ಲಿದ್ದ 170 ರನ್​ಗಳ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
  5. 150 ಪ್ಲಸ್ ಸ್ಕೋರ್: ಅಂಡರ್​-19 ವಿಶ್ವಕಪ್ ಫೈನಲ್‌ನಲ್ಲಿ 150 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಹಿರಿಮೆಗೂ ವೈಭವ್ ಸೂರ್ಯವಂಶಿ ಪಾತ್ರರಾಗಿದ್ದಾರೆ.
  6. ಭರ್ಜರಿ ಬೌಂಡರಿ: ಐಸಿಸಿ ಫೈನಲ್​ ಪಂದ್ಯದಲ್ಲಿ ಅತ್ಯಧಿಕ ಬೌಂಡರಿಗಳನ್ನು ಬಾರಿಸಿದ ವಿಶ್ವ ದಾಖಲೆ ಕೂಡ ವೈಭವ್ ಸೂರ್ಯವಂಶಿ ಪಾಲಾಗಿದೆ. ಈ ಪಂದ್ಯದಲ್ಲಿ ಯುವ ಎಡಗೈ ದಾಂಡಿಗ 15 ಫೋರ್ ಹಾಗೂ 15 ಸಿಕ್ಸರ್​ಗಳನ್ನು ಸಿಡಿಸಿ ಈ ದಾಖಲೆ ನಿರ್ಮಿಸಿದ್ದಾರೆ.
  7. ಬೌಂಡಿಗಳಿಂದ ಗರಿಷ್ಠ ಸ್ಕೋರ್: ಐಸಿಸಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೇವಲ ಫೋರ್​-ಸಿಕ್ಸ್​ಗಳೊಂದಿಗೆ 150 ರನ್​ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಕೂಡ ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ.
  8. ಅತಿ ವೇಗದ 150 : ಐಸಿಸಿ ಟೂರ್ನಿಯಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 150 ರನ್​ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಕೂಡ ವೈಭವ್ ಪಾಲಾಗಿದೆ. ಈ ಪಂದ್ಯದಲ್ಲಿ ಕೇವಲ 71 ಎಸೆತಗಳಲ್ಲಿ ವೈಭವ್ 150 ರನ್​ಗಳನ್ನು ಪೂರೈಸಿದ್ದರು.
  9. ಸಿಕ್ಸರ್ ಸರದಾರ: ಅಂಡರ್-19 ವಿಶ್ವಕಪ್ ಟೂರ್ನಿಯ ಆವೃತ್ತಿಯೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ವಿಶ್ವ ದಾಖಲೆಯನ್ನು ಕೂಡ ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. ವೈಭವ್ ಈ ಬಾರಿ ಬರೋಬ್ಬರಿ 30 ಸಿಕ್ಸ್ ಸಿಡಿಸಿ ಅಬ್ಬರಿಸಿದ್ದಾರೆ.
  10. ಅತ್ಯಂತ ಕಿರಿಯ ಬ್ಯಾಟರ್: ಐಸಿಸಿ ಟೂರ್ನಿಯ ಫೈನಲ್​ನಲ್ಲಿ ಶತಕ ಸಿಡಿಸಿದ, ಗರಿಷ್ಠ ರನ್​ ಕಲೆಹಾಕಿದ, ಅತ್ಯಧಿಕ ಸಿಕ್ಸ್ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. ವೈಭವ್ ಈ ಎಲ್ಲಾ ಸಾಧನೆ ಮಾಡಿರುವುದು 14ನೇ ವಯಸ್ಸಿನಲ್ಲಿ ಎಂಬುದು ವಿಶೇಷ.

ಇದನ್ನೂ ಓದಿ: RCB ತಂಡದ್ದು ಗೆಲುವಲ್ಲ, ವಿಶ್ವ ದಾಖಲೆಯ ‘ವಿಜಯ’

ಈ 10 ಭರ್ಜರಿ ದಾಖಲೆಯೊಂದಿಗೆ ವೈಭವ್ ಸೂರ್ಯವಂಶಿ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಪುಟವನ್ನು ತೆರೆದಿದ್ಟಾರೆ. ಇದೇ ಆರ್ಭಟ ಮುಂಬರುವ ಐಪಿಎಲ್​ನಲ್ಲೂ ಮುಂದುವರೆದರೆ ವೈಭವ್ ಸೂರ್ಯವಂಶಿಗೆ ಟೀಮ್ ಇಂಡಿಯಾ ಬಾಗಿಲು ತೆರೆಯುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಶೀಘ್ರದಲ್ಲೇ ಯುವ ದಾಂಡಿಗನನ್ನು ಭಾರತ ತಂಡದಲ್ಲಿ ನೋಡಬಹುದು.

 

About the Author

Jiokannadanews

Administrator

jiokannadanews.com

Visit Website View All Posts
Tags: Team India Vaibhav suryavanshi

Post navigation

Previous: ಸಹಕಾರಿ ಬ್ಯಾಂಕ್​ನಲ್ಲಿ ಡೈವರ್​ಗಳಿಗೆ ಉದ್ಯೋಗಾವಕಾಶ
Next: ಕೊನೆ ಕ್ಷಣದ ಬದಲಾವಣೆ… ಟೀಮ್ ಇಂಡಿಯಾಗೆ ಸಿರಾಜ್ ಎಂಟ್ರಿ

Related Stories

vaibhav-sooryavanshi-3
  • ಕ್ರಿಕೆಟ್

IPL 2026: ‘ಸೂರ್ಯವಂಶಿ’ ಎಂಬ ಸುನಾಮಿ

Jiokannadanews Posted on 1 month ago
SHOCKING: SRH Vice-Captain Abhishek Sharma Fined 25% Match Fee
  • ಕ್ರಿಕೆಟ್

IPL 2026: ಅಭಿಷೇಕ್ ಶರ್ಮಾಗೆ 25 ಲಕ್ಷ ರೂ. ದಂಡ..!

Jiokannadanews Posted on 2 months ago
IMG-20260324-WA0024
  • ಕ್ರಿಕೆಟ್

16.7 ಸಾವಿರ ಕೋಟಿಗೆ RCB ಮಾರಾಟ..!

Jiokannadanews Posted on 2 months ago

Trending News

ಸಿಎಂ ಡಿಕೆಶಿ ಜೊತೆ 13 ಶಾಸಕರಿಗೆ ಸಚಿವ ಸ್ಥಾನ! DK Shivakumar Takes Charge: 13 MLAs to Swear In as Ministers 1
  • ರಾಜ್ಯ

ಸಿಎಂ ಡಿಕೆಶಿ ಜೊತೆ 13 ಶಾಸಕರಿಗೆ ಸಚಿವ ಸ್ಥಾನ!

Posted on 6 hours ago
ಬೆಂಗಳೂರಿನಲ್ಲಿ ಘೋರ ದುರಂತ: ಭಾರೀ ಮಳೆಗೆ ಕಾಂಪೌಂಡ್ ಕುಸಿದು 7 ಮಂದಿ ಸಾವು! 1777475804134 2
  • ರಾಜ್ಯ

ಬೆಂಗಳೂರಿನಲ್ಲಿ ಘೋರ ದುರಂತ: ಭಾರೀ ಮಳೆಗೆ ಕಾಂಪೌಂಡ್ ಕುಸಿದು 7 ಮಂದಿ ಸಾವು!

Posted on 1 month ago
IPL 2026: ‘ಸೂರ್ಯವಂಶಿ’ ಎಂಬ ಸುನಾಮಿ vaibhav-sooryavanshi-3 3
  • ಕ್ರಿಕೆಟ್

IPL 2026: ‘ಸೂರ್ಯವಂಶಿ’ ಎಂಬ ಸುನಾಮಿ

Posted on 1 month ago
ನಲಪಾಡ್ ಇಡಿ ದಾಳಿ ಹಿಂದಿದೆ ಪೋರ್ಷೆ ಕಾರಿನ ರಹಸ್ಯ! Porsche Mystery Behind ED Raids on Nalapad! 4
  • ರಾಜ್ಯ

ನಲಪಾಡ್ ಇಡಿ ದಾಳಿ ಹಿಂದಿದೆ ಪೋರ್ಷೆ ಕಾರಿನ ರಹಸ್ಯ!

Posted on 1 month ago
ಕೃಷ್ಣನ ಮುಂದೆ ಚಿಕನ್ ಮಂದಿ: ಹೋಟೆಲ್ ಮಾಲೀಕ ಅರೆಸ್ಟ್ Vishu Poster Row: Restaurant Owner Jailed for Offensive Ad 5
  • ರಾಜ್ಯ

ಕೃಷ್ಣನ ಮುಂದೆ ಚಿಕನ್ ಮಂದಿ: ಹೋಟೆಲ್ ಮಾಲೀಕ ಅರೆಸ್ಟ್

Posted on 2 months ago

You may have missed

DK Shivakumar Takes Charge: 13 MLAs to Swear In as Ministers
  • ರಾಜ್ಯ

ಸಿಎಂ ಡಿಕೆಶಿ ಜೊತೆ 13 ಶಾಸಕರಿಗೆ ಸಚಿವ ಸ್ಥಾನ!

Jiokannadanews Posted on 6 hours ago
1777475804134
  • ರಾಜ್ಯ

ಬೆಂಗಳೂರಿನಲ್ಲಿ ಘೋರ ದುರಂತ: ಭಾರೀ ಮಳೆಗೆ ಕಾಂಪೌಂಡ್ ಕುಸಿದು 7 ಮಂದಿ ಸಾವು!

Jiokannadanews Posted on 1 month ago
vaibhav-sooryavanshi-3
  • ಕ್ರಿಕೆಟ್

IPL 2026: ‘ಸೂರ್ಯವಂಶಿ’ ಎಂಬ ಸುನಾಮಿ

Jiokannadanews Posted on 1 month ago
Porsche Mystery Behind ED Raids on Nalapad!
  • ರಾಜ್ಯ

ನಲಪಾಡ್ ಇಡಿ ದಾಳಿ ಹಿಂದಿದೆ ಪೋರ್ಷೆ ಕಾರಿನ ರಹಸ್ಯ!

Jiokannadanews Posted on 1 month ago

Categories

  • ಆಟೋಮೊಬೈಲ್
  • ಆರೋಗ್ಯ
  • ಉದ್ಯೋಗ
  • ಕ್ರಿಕೆಟ್
  • ಕ್ರೈಮ್
  • ಟೆಕ್
  • ದೇಶ
  • ರಾಜ್ಯ
  • ಸಿನಿಮಾ
  • Contact Us
  • About Us
  • Disclaimer
  • Terms and Conditions
  • Privacy Policy
Copyright © All rights reserved. | MoreNews by AF themes.