Skip to content

Jio Kannada News

Kannada News

banner-promo-full-green
Primary Menu
  • HOME
  • ರಾಜ್ಯ
  • ದೇಶ
  • ಉದ್ಯೋಗ
  • ಕ್ರಿಕೆಟ್
  • ಆರೋಗ್ಯ
  • ಸಿನಿಮಾ
  • ಕ್ರೈಮ್
  • ಆಟೋಮೊಬೈಲ್
  • ಟೆಕ್
  • Contact Us
Light/Dark Button
Wtach Live
  • Home
  • ದೇಶ
  • ಆಗಸ್ಟ್ 11 ಸ್ವಾತಂತ್ರ್ಯ ದಿನ: ಪಾಕಿಸ್ತಾನ್ ಇಬ್ಭಾಗ?
  • ದೇಶ

ಆಗಸ್ಟ್ 11 ಸ್ವಾತಂತ್ರ್ಯ ದಿನ: ಪಾಕಿಸ್ತಾನ್ ಇಬ್ಭಾಗ?

Jiokannadanews Posted on 1 month ago 1 minute read
August 11 Threat: Will Pakistan Split Again

Pakistan

ಪಾಕಿಸ್ತಾನ್ ಮತ್ತೊಮ್ಮೆ ಇಬ್ಭಾಗವಾಗಲಿದೆಯೇ? ಇಂತಹದೊಂದು ಗಂಭೀರ ಪ್ರಶ್ನೆ ಪ್ರಸ್ತುತ ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಮುಖ್ಯ ಕಾರಣ ಸ್ವಯಂ ಘೋಷಿತ ‘ರಿಪಬ್ಲಿಕ್ ಆಫ್ ಬಲೂಚಿಸ್ತಾನ್’ (ಬಲೂಚಿಸ್ತಾನ್ ಗಣರಾಜ್ಯ) ಆಗಸ್ಟ್ 11 ಅನ್ನು ತನ್ನ ಅಧಿಕೃತ ಸ್ವಾತಂತ್ರ್ಯ ದಿನ ಎಂದು ಘೋಷಿಸಿರುವುದು.

ಪಾಕಿಸ್ತಾನದ ಒಟ್ಟು ಭೂಭಾಗದ ಶೇಕಡಾ 44 ರಷ್ಟಿರುವ ಅತ್ಯಂತ ದೊಡ್ಡ ಪ್ರಾಂತ್ಯವಾದ ಬಲೂಚಿಸ್ತಾನವು ಈ ಬಾರಿ ಪ್ರತ್ಯೇಕವಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸುವುದಾಗಿ ತಿಳಿಸಿದೆ. ಅದರಂತೆ ಆಗಸ್ಟ್ 11 ರಂದು ಸ್ವಾತಂತ್ಯ ದಿನಾಚರಣೆಯ ಭಾಗವಾಗಿ ಬಲೂಚಿಸ್ತಾನ್ ಧ್ವಜವನ್ನು ಹಾರಿಸುವುದಾಗಿ ಬಲೂಚ್ ಪ್ರತ್ಯೇಕತಾವಾದಿಗಳು ಘೋಷಿಸಿಕೊಂಡಿದ್ದಾರೆ.

ಆಗಸ್ಟ್ 11 ಕ್ಕೆ ಯಾಕೆ ಸ್ವಾತಂತ್ಯ ದಿನಾಚರಣೆ?

ಬಲೂಚ್ ಪ್ರತ್ಯೇಕತಾವಾದಿಗಳ ಪ್ರಕಾರ, ಬ್ರಿಟಿಷರು ಭಾರತವನ್ನು ತೊರೆಯುವ ಮೂರು ದಿನಗಳ ಮುನ್ನ, ಅಂದರೆ 11 ಆಗಸ್ಟ್ 1947 ರಂದೇ ‘ಕಲಾತ್ ರಾಜಪ್ರಭುತ್ವ’ (ಬಲೂಚಿಸ್ತಾನ್ ಪ್ರಾಂತ್ಯ) ಸ್ವತಂತ್ರವಾಗಿ ಹೊರಹೊಮ್ಮಿತ್ತು.  ಅಂದು ನ್ಯೂಯಾರ್ಕ್ ಟೈಮ್ಸ್ ಸೇರಿದಂತೆ ಜಾಗತಿಕ ಮಾಧ್ಯಮಗಳು ಇದನ್ನು ವರದಿ ಮಾಡಿದ್ದವು.

ಆರಂಭದಲ್ಲಿ ಜಿನ್ನಾ ನೇತೃತ್ವದ ಪಾಕಿಸ್ತಾನ ಕೂಡ ಇದನ್ನು ಸಾರ್ವಭೌಮ ರಾಷ್ಟ್ರವೆಂದು ಒಪ್ಪಂದದ ಮೂಲಕ ಮಾನ್ಯ ಮಾಡಿತ್ತು. ಆದರೆ, 27 ಮಾರ್ಚ್ 1948 ರಂದು ಪಾಕಿಸ್ತಾನಿ ಸೇನೆಯು ಬಲವಂತವಾಗಿ ಕಲಾತ್ ಅನ್ನು ಆಕ್ರಮಿಸಿ, ತನ್ನೊಂದಿಗೆ ವಿಲೀನಗೊಳಿಸಿಕೊಂಡಿತು. ಈ ಐತಿಹಾಸಿಕ ವಂಚನೆಯ ವಿರುದ್ಧವೇ ಇಂದಿಗೂ ಹೋರಾಟ ನಡೆಯುತ್ತಿದೆ.

ಪಾಕ್​ನ ಆರ್ಥಿಕ ಶೋಷಣೆ..!

ಬಲೂಚಿಸ್ತಾನ್ ನೈಸರ್ಗಿಕ ಅನಿಲ, ಚಿನ್ನ ಮತ್ತು ತಾಮ್ರದಂತಹ ಅಪಾರ ಖನಿಜ ಸಂಪತ್ತನ್ನು ಹೊಂದಿದ್ದರೂ, ಅಲ್ಲಿನ ಜನತೆ ಪಾಕಿಸ್ತಾನದಲ್ಲೇ ಅತ್ಯಂತ ಬಡತನದಲ್ಲಿದ್ದಾರೆ.

ಸ್ಥಳೀಯ ಸಂಪನ್ಮೂಲಗಳ ಲಾಭವನ್ನು ಇಸ್ಲಾಮಾಬಾದ್ ಮತ್ತು ಪಂಜಾಬ್ ಪ್ರಾಂತ್ಯದ ಆಡಳಿತಗಾರರು ಮಾತ್ರ ಪಡೆಯುತ್ತಿದ್ದಾರೆ ಎಂಬುದು ಬಲೂಚ್​ನ ಸ್ಥಳೀಯರ ಆಕ್ರೋಶ.

ಇದೀಗ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಯಡಿಯಲ್ಲಿ ಬಿಲಿಯನ್ ಗಟ್ಟಲೆ ಡಾಲರ್ ಹೂಡಿಕೆ ಮಾಡಿ ಗ್ವಾದರ್ ಬಂದರನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಇದರ ಸಂಪೂರ್ಣ ನಿಯಂತ್ರಣ ಚೀನಾ ಹಾಗೂ ಪಾಕ್ ಸೇನೆಯ ಕೈಯಲ್ಲಿದೆ.

ಇದರಿಂದಾಗಿ ಸ್ಥಳೀಯ ಮೀನುಗಾರರು ಮತ್ತು ಜನರಿಗೆ ಉದ್ಯೋಗ ಅಥವಾ ಮೂಲಸೌಕರ್ಯ ಸಿಗುತ್ತಿಲ್ಲ. ಇದು ಬಲೂಚ್ ಲಿಬರೇಷನ್ ಆರ್ಮಿ (BLA) ನಂತಹ ಸಶಸ್ತ್ರ ಗುಂಪುಗಳು ಚೀನೀ ಪ್ರಜೆಗಳ ಮೇಲೆ ದಾಳಿ ನಡೆಸಲು ಪ್ರಮುಖ ಕಾರಣವಾಗಿದೆ.

ಮಾನವ ಹಕ್ಕುಗಳ ಉಲ್ಲಂಘನೆ!

ಕಳೆದ ಎರಡು ದಶಕಗಳಲ್ಲಿ ಬಲೂಚ್ ಹೋರಾಟವು ಕೇವಲ ಬುಡಕಟ್ಟು ನಾಯಕರ ಸಶಸ್ತ್ರ ದಂಗೆಯಾಗಿ ಉಳಿದಿಲ್ಲ. ಬದಲಾಗಿ, ಇದು ಸುಶಿಕ್ಷಿತ ಯುವಕರು ಮತ್ತು ಮಹಿಳೆಯರನ್ನೊಳಗೊಂಡ ಮಧ್ಯಮ ವರ್ಗದ ಸಾಮಾಜಿಕ ಆಂದೋಲನವಾಗಿ ರೂಪಾಂತರಗೊಂಡಿದೆ.

ಪಾಕಿಸ್ತಾನಿ ಸೇನೆ ಮತ್ತು ಗುಪ್ತಚರ ಸಂಸ್ಥೆಗಳು (ISI) ಬಲೂಚ್ ಧ್ವನಿಗಳನ್ನು ಅಡಗಿಸಲು ಸಾವಿರಾರು ಯುವಕರನ್ನು ಕಾನೂನುಬಾಹಿರವಾಗಿ ಬಂಧಿಸಿ ಕಣ್ಮರೆಗೊಳಿಸುತ್ತಿವೆ. ಹ್ಯೂಮನ್ ರೈಟ್ಸ್ ವಾಚ್ ನಂತಹ ಜಾಗತಿಕ ಸಂಸ್ಥೆಗಳು ಪಾಕ್ ಸೇನೆಯ ಈ ಕ್ರೂರ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಕಾನೂನುಬಾಹಿರ ಕೊಲೆಗಳನ್ನು ಕಠಿಣವಾಗಿ ಖಂಡಿಸಿವೆ.

ಡಿಜಿಟಲ್ ಆಂದೋಲನ:

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ‘Republic of Balochistan’ ಮತ್ತು #FreeBalochistan ಹ್ಯಾಶ್‌ಟ್ಯಾಗ್‌ಗಳು ಜಾಗತಿಕವಾಗಿ ಮುಂಚೂಣಿಗೆ ಬಂದಿವೆ. ಆಕ್ಟಿವಿಸ್ಟ್ ಮೀರ್ ಯಾರ್ ಬಲೂಚ್ ನೇತೃತ್ವದಲ್ಲಿ ಇಡೀ ವಿಶ್ವದಾದ್ಯಂತ ಇರುವ ಬಲೂಚ್ ಸಮುದಾಯಗಳು ತಮ್ಮ ಮನೆಗಳ ಮೇಲೆ ಬಲೂಚ್ ಧ್ವಜ ಹಾರಿಸಲು ಸಜ್ಜಾಗುತ್ತಿದ್ದಾರೆ.

ಭಾರತಕ್ಕೆ ಮುಕ್ತ ಮನವಿ:

ಬಲೂಚಿಸ್ತಾನ್ ನಾಯಕರು ಈಗಾಗಲೇ ಭಾರತ ಸರ್ಕಾರಕ್ಕೆ ದೆಹಲಿಯಲ್ಲಿ ತಮ್ಮ ರಾಯಭಾರ ಕಚೇರಿ ಸ್ಥಾಪಿಸಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದಾರೆ. ಹಾಗೆಯೇ ಮುಂಬೈನಲ್ಲಿರುವ ಜಿನ್ನಾ ಹೌಸ್ ಅನ್ನು ‘ಬಲೂಚಿಸ್ತಾನ್ ಹೌಸ್’ ಎಂದು ಮರುನಾಮಕರಣ ಮಾಡಬೇಕೆಂದು ಬಹಿರಂಗವಾಗಿ ಆಗ್ರಹಿಸಿದ್ದಾರೆ.

ಬಲೂಚಿಸ್ತಾನದ ಜನತೆ ತಮಗಾಗಿ ಪ್ರತ್ಯೇಕ ದೇಶವನ್ನು ಘೋಷಿಸಿಕೊಳ್ಳಲು ಸನ್ನದ್ಧರಾಗಿದ್ದು, ಇದೇ ಕಾರಣಕ್ಕಾಗಿ ಅವರು ಭಾರತದ ಬೆಂಬಲ ಮತ್ತು ರಾಜತಾಂತ್ರಿಕ ನೆರವನ್ನು ಕೋರುತ್ತಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಲೂಚಿಸ್ತಾನದ ಸ್ವಾತಂತ್ರ್ಯ ಎಂಬುದು ಕೇವಲ ಒಂದು ಪ್ರಾಂತ್ಯದ ಬಿಡುಗಡೆಯಲ್ಲ. ಬದಲಾಗಿ ಅದು ಪಾಕಿಸ್ತಾನದ ಭೌಗೋಳಿಕ, ಆರ್ಥಿಕ ಮತ್ತು ರಾಜಕೀಯ ಅಸ್ತಿತ್ವಕ್ಕೆ ಬೀಳುವ ಅಂತಿಮ ಮರಣಪೆಟ್ಟು.

ಏಕೆಂದರೆ ಶೇಕಡಾ 44 ರಷ್ಟು ಭೂಭಾಗ, ಬಿಲಿಯನ್ ಡಾಲರ್ ಮೌಲ್ಯದ ನೈಸರ್ಗಿಕ ಸಂಪನ್ಮೂಲಗಳು ಮತ್ತು ವ್ಯೂಹಾತ್ಮಕ ಗ್ವಾದರ್ ಬಂದರನ್ನು ಕಳೆದುಕೊಳ್ಳುವ ಪಾಕಿಸ್ತಾನವು ಕೇವಲ ಇಬ್ಭಾಗವಾಗುವುದಿಲ್ಲ, ಬದಲಿಗೆ ಸಂಪೂರ್ಣವಾಗಿ ಧೂಳೀಪಟವಾಗುತ್ತದೆ.

ಇದನ್ನೂ ಓದಿ: ಕಿವಿಯ ಚಿಕಿತ್ಸೆಗೆ ಹೋಗಿ ಕೈಯನ್ನೇ ಕಳೆದುಕೊಂಡ ಯುವತಿ!

1971 ರಲ್ಲಿ ಬಾಂಗ್ಲಾದೇಶ್ ಉದಯವಾದಾಗ ಪಾಕಿಸ್ತಾನ್ ತನ್ನ ಒಂದು ಕೈಯನ್ನು ಕಳೆದುಕೊಂಡಂತಾಗಿದ್ದರೆ, ಬಲೂಚಿಸ್ತಾನ್ ಬೇರ್ಪಟ್ಟರೆ ಅದರ ಹೃದಯವೇ ಸ್ತಬ್ಧವಾದಂತಾಗುತ್ತದೆ. ಹೀಗಾಗಿಯೇ, ಆಗಸ್ಟ್ 11 ರ ಬಲೂಚಿಸ್ತಾನ್ ಸ್ವಾತಂತ್ರ್ಯ ದಿನಾಚರಣೆಯ ಸವಾಲನ್ನು ಪಾಕಿಸ್ತಾನವು ಹೇಗೆ ಎದುರಿಸಲಿದೆ ಎಂಬುದನ್ನು ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿದೆ.

ಜಿಯೋ ಕನ್ನಡ ನ್ಯೂಸ್​ನ ವಾಟ್ಸ್​ಆ್ಯಪ್ ಗ್ರೂಪ್​ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

About the Author

Jiokannadanews

Administrator

jiokannadanews.com

Visit Website View All Posts

Post navigation

Previous: ಯುಪಿಐ ಪೇಮೆಂಟ್​ಗೂ ತೆರಿಗೆ: ಗ್ರಾಹಕರಿಗೆ ಕಾದಿದೆ ಬಿಗ್ ಶಾಕ್!
Next: ಎಚ್ಚರ ಎಚ್ಚರ ಎಚ್ಚರ… ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದೆ ‘ಚಡ್ಡಿ ಗ್ಯಾಂಗ್’!

Related Stories

Air India Mid-Air Terror: 3 Hydraulics Fail
  • ದೇಶ

ಆಕಾಶದಲ್ಲೇ ಏರ್ ಇಂಡಿಯಾ ವಿಮಾನದ ಹೈಡ್ರಾಲಿಕ್ಸ್ ಫೇಲ್!

Jiokannadanews Posted on 5 days ago
India Slams Pakistan Over Demolition of 125-Year-Old Hindu Temple
  • ದೇಶ

ಪಾಕಿಸ್ತಾನದಲ್ಲಿ 125 ವರ್ಷಗಳ ಹಳೆಯ ಹಿಂದೂ ದೇವಾಲಯ ಧ್ವಂಸ!

Jiokannadanews Posted on 1 week ago
Yasin Malik Seeks Death Penalty, Announces Divorce From Pak Wife
  • ದೇಶ

ಗಲ್ಲು ಶಿಕ್ಷೆ ನೀಡಿ, ಪತ್ನಿಗೆ ವಿಚ್ಛೇದನ ನೀಡುತ್ತೇನೆ!

Jiokannadanews Posted on 1 week ago

Trending News

ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು 8 ತಿಂಗಳ ಬಳಿಕ ಪತ್ತೆ! Missing Bengaluru Girls Found After 8 Months 1
  • ಕ್ರೈಮ್
  • ರಾಜ್ಯ

ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು 8 ತಿಂಗಳ ಬಳಿಕ ಪತ್ತೆ!

Posted on 1 day ago
ಆಕಾಶದಲ್ಲೇ ಏರ್ ಇಂಡಿಯಾ ವಿಮಾನದ ಹೈಡ್ರಾಲಿಕ್ಸ್ ಫೇಲ್! Air India Mid-Air Terror: 3 Hydraulics Fail 2
  • ದೇಶ

ಆಕಾಶದಲ್ಲೇ ಏರ್ ಇಂಡಿಯಾ ವಿಮಾನದ ಹೈಡ್ರಾಲಿಕ್ಸ್ ಫೇಲ್!

Posted on 5 days ago
ಬಾಸ್ಕೆಟ್‌ಬಾಲ್ ಪಂದ್ಯಾವಳಿ: ಪ್ರಚಂಡ ಪ್ರದರ್ಶನ ನೀಡಿದ ಸೇಂಟ್ ಜೋಸೆಫ್ಸ್ St. Joseph's Madikeri 3
  • ರಾಜ್ಯ

ಬಾಸ್ಕೆಟ್‌ಬಾಲ್ ಪಂದ್ಯಾವಳಿ: ಪ್ರಚಂಡ ಪ್ರದರ್ಶನ ನೀಡಿದ ಸೇಂಟ್ ಜೋಸೆಫ್ಸ್

Posted on 7 days ago
ಪಾಕಿಸ್ತಾನದಲ್ಲಿ 125 ವರ್ಷಗಳ ಹಳೆಯ ಹಿಂದೂ ದೇವಾಲಯ ಧ್ವಂಸ! India Slams Pakistan Over Demolition of 125-Year-Old Hindu Temple 4
  • ದೇಶ

ಪಾಕಿಸ್ತಾನದಲ್ಲಿ 125 ವರ್ಷಗಳ ಹಳೆಯ ಹಿಂದೂ ದೇವಾಲಯ ಧ್ವಂಸ!

Posted on 1 week ago
ಗಲ್ಲು ಶಿಕ್ಷೆ ನೀಡಿ, ಪತ್ನಿಗೆ ವಿಚ್ಛೇದನ ನೀಡುತ್ತೇನೆ! Yasin Malik Seeks Death Penalty, Announces Divorce From Pak Wife 5
  • ದೇಶ

ಗಲ್ಲು ಶಿಕ್ಷೆ ನೀಡಿ, ಪತ್ನಿಗೆ ವಿಚ್ಛೇದನ ನೀಡುತ್ತೇನೆ!

Posted on 1 week ago

You may have missed

Missing Bengaluru Girls Found After 8 Months
  • ಕ್ರೈಮ್
  • ರಾಜ್ಯ

ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು 8 ತಿಂಗಳ ಬಳಿಕ ಪತ್ತೆ!

Jiokannadanews Posted on 1 day ago
Air India Mid-Air Terror: 3 Hydraulics Fail
  • ದೇಶ

ಆಕಾಶದಲ್ಲೇ ಏರ್ ಇಂಡಿಯಾ ವಿಮಾನದ ಹೈಡ್ರಾಲಿಕ್ಸ್ ಫೇಲ್!

Jiokannadanews Posted on 5 days ago
St. Joseph's Madikeri
  • ರಾಜ್ಯ

ಬಾಸ್ಕೆಟ್‌ಬಾಲ್ ಪಂದ್ಯಾವಳಿ: ಪ್ರಚಂಡ ಪ್ರದರ್ಶನ ನೀಡಿದ ಸೇಂಟ್ ಜೋಸೆಫ್ಸ್

Jiokannadanews Posted on 7 days ago
India Slams Pakistan Over Demolition of 125-Year-Old Hindu Temple
  • ದೇಶ

ಪಾಕಿಸ್ತಾನದಲ್ಲಿ 125 ವರ್ಷಗಳ ಹಳೆಯ ಹಿಂದೂ ದೇವಾಲಯ ಧ್ವಂಸ!

Jiokannadanews Posted on 1 week ago

Categories

  • Trending News
  • Uncategorized
  • ಆಟೋಮೊಬೈಲ್
  • ಆರೋಗ್ಯ
  • ಉದ್ಯೋಗ
  • ಕ್ರಿಕೆಟ್
  • ಕ್ರೈಮ್
  • ಟೆಕ್
  • ದೇಶ
  • ರಾಜ್ಯ
  • ಸಿನಿಮಾ
  • Contact Us
  • About Us
  • Disclaimer
  • Terms and Conditions
  • Privacy Policy
Copyright © All rights reserved. | MoreNews by AF themes.