Benjamin Netanyahu
ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಣ ಯುದ್ಧದ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬದುಕಿದ್ದಾರಾ? ಸತ್ತಿದ್ದಾರಾ? ಎಂಬ ಚರ್ಚೆಯೊಂದು ಶುರುವಾಗಿದೆ. ಈ ಚರ್ಚಗೆ ಮುಖ್ಯ ಕಾರಣ ಬೆಂಜಮಿನ್ ನೆತನ್ಯಾಹು ಕಳೆದ ಕೆಲ ದಿನಗಳಿಂದ ಎಲ್ಲೂ ಕೂಡ ಕಾಣಿಸಿಕೊಳ್ಳದಿರುವುದು. ಅದರಲ್ಲೂ ಸಾವಿನ ವದಂತಿ ಹಬ್ಬುತ್ತಿದ್ದರೂ ಇಸ್ರೇಲ್ ಪ್ರಧಾನಿ ಯಾವುದೇ ಲೈವ್ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ಇದೀಗ ತನ್ನ ಸಾವಿನ ಸುದ್ದಿಯನ್ನು ತಳ್ಳಿ ಹಾಕಿ ಬೆಂಜಮಿನ್ ನೆತನ್ಯಾಹು ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಮಾರ್ಚ್ 15, 2026 ರಂದು ಕೆಫೆಯೊಂದರಲ್ಲಿ ಕಾಣಿಸಿಕೊಂಡಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಇಸ್ರೇಲ್ ಪ್ರಧಾನಿ, ನಾನು ಇನ್ನೂ ಸತ್ತಿಲ್ಲ. ಕಾಫಿಗಾಗಿ ಸಾಯುತ್ತಿದ್ದೇನೆ ಎಂದು ಹೇಳುವ ಮೂಲಕ ತಮ್ಮ ಸಾವಿನ ಸುದ್ದಿಯನ್ನು ಹರಡುತ್ತಿದ್ದವರಿಗೆ ವ್ಯಂಗ್ಯವಾಗಿ ಉತ್ತರಿಸಿದ್ದಾರೆ.
ಹೊಸ ವಿಡಿಯೋ: ಹಳೆ ಅನುಮಾನ
ಕೆಲ ದಿನಗಳ ಹಿಂದೆ ಇಸ್ರೇಲ್ ಸರ್ಕಾರ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಬೆಂಜಮಿನ್ ನೆತನ್ಯಾಹುಗೆ ಆರು ಬೆರಳುಗಳಿದ್ದವು. ಇದು ಎಐ (AI) ಸೃಷ್ಟಿತ ವೀಡಿಯೊ ಎಂದು ವದಂತಿ ಹಬ್ಬಿತ್ತು. ಇದನ್ನು ಸುಳ್ಳಾಗಿಸಲು ಅವರು ಈ ಹೊಸ ವೀಡಿಯೊದಲ್ಲಿ ತಮ್ಮ ಬೆರಳುಗಳನ್ನು ಎಣಿಸುವಂತೆ ಕ್ಯಾಮೆರಾಮನ್ ಬಳಿ ಕೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಇರಾನ್ ಮತ್ತು ಲೆಬನಾನ್‌ನಲ್ಲಿ ಇಸ್ರೇಲಿ ಪಡೆಗಳ ದಾಳಿ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ, ಸುರಕ್ಷಿತ ಪ್ರದೇಶಗಳ ಬಳಿಯೇ ಇರುವಂತೆ ಬೆಂಜಮಿನ್ ನೆತನ್ಯಾಹು ಜನರಿಗೆ ಈ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.
אומרים שאני מה? צפו >> pic.twitter.com/ijHPkM3ZHZ
— Benjamin Netanyahu – בנימין נתניהו (@netanyahu) March 15, 2026
ಮುಂದುವರಿದ ಡೌಟ್ಗಳು:
ಕಾಫಿ ಕಪ್: ಬೆಂಜಮಿನ್ ನೆತನ್ಯಾಹು ಅವರು ಕಾಫಿ ಕಪ್ ಅನ್ನು ಓರೆ ಮಾಡಿದಾಗಲೂ ಒಳಗಿದ್ದ ಕಾಫಿ ಅಲುಗಾಡುತ್ತಿಲ್ಲ ಅಥವಾ ಚೆಲ್ಲುತ್ತಿಲ್ಲ ಎಂಬುದು ಈ ವಿಡಿಯೋದಲ್ಲಿ ಕಾಣಬಹುದು.
ಖಾಲಿ ಆಗದ ಕಾಫಿ: ಈ ವಿಡಿಯೋದಲ್ಲಿ ಬೆಂಜಮಿನ್ ನೆತನ್ಯಾಹು ಕಾಫಿ ಕುಡಿದರೂ ಕಪ್ನಲ್ಲಿರುವ ಕಾಫಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಅಂದರೆ ಒಂಚೂರು ಕೂಡ ಕಡಿಮೆಯಾಗಿಲ್ಲ ಎಂಬುದನ್ನು ಕಾಣಬಹುದು.
ಎಐ ಪತ್ತೆ (AI Detection): ಕೆಲವು ವರದಿಗಳ ಪ್ರಕಾರ, ಎಐ ಪತ್ತೆ ಹಚ್ಚುವ ಉಪಕರಣಗಳು ಈ ವೀಡಿಯೊ ಕೃತಕವಾಗಿರುವ ಸಾಧ್ಯತೆ ಶೇ. 78.9 ರಿಂದ 80 ರಷ್ಟಿದೆ ಎಂದು ತೋರಿಸಿವೆ.
ದೈಹಿಕ ನೋಟ: 76 ವರ್ಷದ ನೆತನ್ಯಾಹು ಅವರು ಈ ವೀಡಿಯೊದಲ್ಲಿ ತುಂಬಾ ಚಿಕ್ಕ ವಯಸ್ಸಿನವರಂತೆ ಕಾಣುತ್ತಿದ್ದಾರೆ, ಇದು ‘ಬಾಡಿ ಡಬಲ್’ (Body Double) ಅಥವಾ ಎಐ ಕರಾಮತ್ತು ಇರಬಹುದು ಎಂದು ವಿಮರ್ಶಕರು ಅನುಮಾನ ವ್ಯಕ್ತಪಡಿಸಿದ್ದಾರೆ.
I slowed it down so you can see “Benjamin Netanyahu” sip the coffee. Please analyze the before and after @grok and tell us if there is actually less coffee in the cup after he takes “a sip” 👀 pic.twitter.com/h3qusBisQK
— The AI Robot Guy on X (@HousebotGuy) March 15, 2026
ಹೀಗಾಗಿಯೇ ಇದು ಕೂಡ ಎಐ ವಿಡಿಯೋ ಎಂದು ಅನೇಕರು ವಾದಿಸಿದ್ದಾರೆ. ಅಲ್ಲದೆ ಬೆಂಜಮಿನ್ ನೆತನ್ಯಾಹು ಸಾವಿಗೀಡಾಗಿದ್ದಾರೆ ಇಲ್ಲಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾಗಾಗಿ ಅವರು ಲೈವ್ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ಸುದ್ದಿಗಳು ಇದೀಗ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ಬೆಂಜಮಿನ್ ನೆತನ್ಯಾಹುನ ಬೆನ್ನಟ್ಟಿ ಕೊಲ್ಲುತ್ತೇವೆ: ಇರಾನ್ ಶಪಥ
ಒಟ್ಟಿನಲ್ಲಿ ಬೆಂಜಮಿನ್ ನೆತನ್ಯಾಹು ಅವರನ್ನೇ ಗುರಿಯಾಗಿಸಿಕೊಂಡಿರುವ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅವರು ಬದುಕಿದ್ದರೆ, ನಾವು ಹುಡುಕಿ ಕೊಲ್ಲುತ್ತೇವೆ ಎಂದು ಪುನರುಚ್ಚರಿಸಿದ್ದಾರೆ. ಹೀಗಾಗಿ ಈ ಯುದ್ಧವು ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣಗಳಿಲ್ಲ ಎಂದೇ ಹೇಳಬಹುದು.