Skip to content

Jio Kannada News

Kannada News

banner-promo-full-green
Primary Menu
  • HOME
  • ಕ್ರಿಕೆಟ್
  • ರಾಜ್ಯ
  • ದೇಶ
  • ಆರೋಗ್ಯ
  • ಸಿನಿಮಾ
  • ಉದ್ಯೋಗ
  • ಕ್ರೈಮ್
  • ಆಟೋಮೊಬೈಲ್
  • ಟೆಕ್
  • Contact Us
Light/Dark Button
Wtach Live
  • Home
  • ದೇಶ
  • ಇಸ್ರೇಲ್ ಪ್ರಧಾನಿ ಬದುಕಿಲ್ವಾ? ಅನುಮಾನ ಹುಟ್ಟುಹಾಕಿದ ಹೊಸ ವಿಡಿಯೋ
  • ದೇಶ

ಇಸ್ರೇಲ್ ಪ್ರಧಾನಿ ಬದುಕಿಲ್ವಾ? ಅನುಮಾನ ಹುಟ್ಟುಹಾಕಿದ ಹೊಸ ವಿಡಿಯೋ

Jiokannadanews Posted on 3 months ago 1 minute read
benjamin netanyahu dead or alive: New Video Viral

Benjamin Netanyahu

ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಣ ಯುದ್ಧದ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬದುಕಿದ್ದಾರಾ? ಸತ್ತಿದ್ದಾರಾ? ಎಂಬ ಚರ್ಚೆಯೊಂದು ಶುರುವಾಗಿದೆ. ಈ ಚರ್ಚಗೆ ಮುಖ್ಯ ಕಾರಣ ಬೆಂಜಮಿನ್ ನೆತನ್ಯಾಹು ಕಳೆದ ಕೆಲ ದಿನಗಳಿಂದ ಎಲ್ಲೂ ಕೂಡ ಕಾಣಿಸಿಕೊಳ್ಳದಿರುವುದು. ಅದರಲ್ಲೂ ಸಾವಿನ ವದಂತಿ ಹಬ್ಬುತ್ತಿದ್ದರೂ ಇಸ್ರೇಲ್ ಪ್ರಧಾನಿ ಯಾವುದೇ ಲೈವ್​ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಇದೀಗ ತನ್ನ ಸಾವಿನ ಸುದ್ದಿಯನ್ನು ತಳ್ಳಿ ಹಾಕಿ ಬೆಂಜಮಿನ್ ನೆತನ್ಯಾಹು ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಮಾರ್ಚ್ 15, 2026 ರಂದು ಕೆಫೆಯೊಂದರಲ್ಲಿ ಕಾಣಿಸಿಕೊಂಡಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ  ಇಸ್ರೇಲ್ ಪ್ರಧಾನಿ, ನಾನು ಇನ್ನೂ ಸತ್ತಿಲ್ಲ. ಕಾಫಿಗಾಗಿ ಸಾಯುತ್ತಿದ್ದೇನೆ ಎಂದು ಹೇಳುವ ಮೂಲಕ ತಮ್ಮ ಸಾವಿನ ಸುದ್ದಿಯನ್ನು ಹರಡುತ್ತಿದ್ದವರಿಗೆ ವ್ಯಂಗ್ಯವಾಗಿ ಉತ್ತರಿಸಿದ್ದಾರೆ.

ಹೊಸ ವಿಡಿಯೋ: ಹಳೆ ಅನುಮಾನ

ಕೆಲ ದಿನಗಳ ಹಿಂದೆ ಇಸ್ರೇಲ್ ಸರ್ಕಾರ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಬೆಂಜಮಿನ್ ನೆತನ್ಯಾಹುಗೆ  ಆರು ಬೆರಳುಗಳಿದ್ದವು. ಇದು  ಎಐ (AI) ಸೃಷ್ಟಿತ ವೀಡಿಯೊ ಎಂದು ವದಂತಿ ಹಬ್ಬಿತ್ತು. ಇದನ್ನು ಸುಳ್ಳಾಗಿಸಲು ಅವರು ಈ ಹೊಸ ವೀಡಿಯೊದಲ್ಲಿ ತಮ್ಮ ಬೆರಳುಗಳನ್ನು ಎಣಿಸುವಂತೆ ಕ್ಯಾಮೆರಾಮನ್ ಬಳಿ ಕೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ  ಇರಾನ್ ಮತ್ತು ಲೆಬನಾನ್‌ನಲ್ಲಿ ಇಸ್ರೇಲಿ ಪಡೆಗಳ ದಾಳಿ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ, ಸುರಕ್ಷಿತ ಪ್ರದೇಶಗಳ ಬಳಿಯೇ ಇರುವಂತೆ ಬೆಂಜಮಿನ್ ನೆತನ್ಯಾಹು ಜನರಿಗೆ ಈ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.

אומרים שאני מה? צפו >> pic.twitter.com/ijHPkM3ZHZ

— Benjamin Netanyahu – בנימין נתניהו (@netanyahu) March 15, 2026

ಮುಂದುವರಿದ ಡೌಟ್​ಗಳು:

ಕಾಫಿ ಕಪ್: ಬೆಂಜಮಿನ್ ನೆತನ್ಯಾಹು ಅವರು ಕಾಫಿ ಕಪ್ ಅನ್ನು ಓರೆ ಮಾಡಿದಾಗಲೂ ಒಳಗಿದ್ದ ಕಾಫಿ ಅಲುಗಾಡುತ್ತಿಲ್ಲ ಅಥವಾ ಚೆಲ್ಲುತ್ತಿಲ್ಲ ಎಂಬುದು ಈ ವಿಡಿಯೋದಲ್ಲಿ ಕಾಣಬಹುದು.

ಖಾಲಿ ಆಗದ ಕಾಫಿ: ಈ ವಿಡಿಯೋದಲ್ಲಿ ಬೆಂಜಮಿನ್ ನೆತನ್ಯಾಹು ಕಾಫಿ ಕುಡಿದರೂ ಕಪ್​ನಲ್ಲಿರುವ ಕಾಫಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಅಂದರೆ ಒಂಚೂರು ಕೂಡ ಕಡಿಮೆಯಾಗಿಲ್ಲ ಎಂಬುದನ್ನು ಕಾಣಬಹುದು.

ಎಐ ಪತ್ತೆ (AI Detection): ಕೆಲವು ವರದಿಗಳ ಪ್ರಕಾರ, ಎಐ ಪತ್ತೆ ಹಚ್ಚುವ ಉಪಕರಣಗಳು ಈ ವೀಡಿಯೊ ಕೃತಕವಾಗಿರುವ ಸಾಧ್ಯತೆ ಶೇ. 78.9 ರಿಂದ 80 ರಷ್ಟಿದೆ ಎಂದು ತೋರಿಸಿವೆ.

ದೈಹಿಕ ನೋಟ: 76 ವರ್ಷದ ನೆತನ್ಯಾಹು ಅವರು ಈ ವೀಡಿಯೊದಲ್ಲಿ ತುಂಬಾ ಚಿಕ್ಕ ವಯಸ್ಸಿನವರಂತೆ ಕಾಣುತ್ತಿದ್ದಾರೆ, ಇದು ‘ಬಾಡಿ ಡಬಲ್’ (Body Double) ಅಥವಾ ಎಐ ಕರಾಮತ್ತು ಇರಬಹುದು ಎಂದು ವಿಮರ್ಶಕರು ಅನುಮಾನ ವ್ಯಕ್ತಪಡಿಸಿದ್ದಾರೆ.

I slowed it down so you can see “Benjamin Netanyahu” sip the coffee. Please analyze the before and after @grok and tell us if there is actually less coffee in the cup after he takes “a sip” 👀 pic.twitter.com/h3qusBisQK

— The AI Robot Guy on X (@HousebotGuy) March 15, 2026

ಹೀಗಾಗಿಯೇ ಇದು ಕೂಡ ಎಐ ವಿಡಿಯೋ ಎಂದು ಅನೇಕರು ವಾದಿಸಿದ್ದಾರೆ. ಅಲ್ಲದೆ ಬೆಂಜಮಿನ್ ನೆತನ್ಯಾಹು ಸಾವಿಗೀಡಾಗಿದ್ದಾರೆ ಇಲ್ಲಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾಗಾಗಿ ಅವರು ಲೈವ್​ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ಸುದ್ದಿಗಳು ಇದೀಗ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: ಬೆಂಜಮಿನ್ ನೆತನ್ಯಾಹುನ ಬೆನ್ನಟ್ಟಿ ಕೊಲ್ಲುತ್ತೇವೆ: ಇರಾನ್ ಶಪಥ

ಒಟ್ಟಿನಲ್ಲಿ ಬೆಂಜಮಿನ್ ನೆತನ್ಯಾಹು ಅವರನ್ನೇ ಗುರಿಯಾಗಿಸಿಕೊಂಡಿರುವ ಇರಾನ್​ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅವರು ಬದುಕಿದ್ದರೆ, ನಾವು ಹುಡುಕಿ ಕೊಲ್ಲುತ್ತೇವೆ ಎಂದು ಪುನರುಚ್ಚರಿಸಿದ್ದಾರೆ. ಹೀಗಾಗಿ ಈ ಯುದ್ಧವು ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣಗಳಿಲ್ಲ ಎಂದೇ ಹೇಳಬಹುದು.

 

About the Author

Jiokannadanews

Administrator

jiokannadanews.com

Visit Website View All Posts
Tags: National News

Post navigation

Previous: ಬೆಂಜಮಿನ್ ನೆತನ್ಯಾಹುನ ಬೆನ್ನಟ್ಟಿ ಕೊಲ್ಲುತ್ತೇವೆ: ಇರಾನ್ ಶಪಥ
Next: ಈ ಸುದ್ದಿ ‘ಮದರ್​ಲ್ಯಾಂಡ್-ಫಾದರ್​ಲ್ಯಾಂಡ್’ ವಿಡಿಯೋ ನಂಬಿದವರಿಗೆ..!

Related Stories

Delimitation
  • ದೇಶ

ಕ್ಷೇತ್ರ ಪುನರ್ ವಿಂಗಡಣೆ ಆಗಲಿದೆಯಾ? ಎಷ್ಟು ಮತ ಬೇಕು?

Jiokannadanews Posted on 2 months ago
What is Delimitation?- explanation in kannada
  • ದೇಶ

ಏನಿದು ಕ್ಷೇತ್ರ ಪುನರ್ ವಿಂಗಡಣೆ?

Jiokannadanews Posted on 2 months ago
subramanian swamy about amit shah 2026
  • ದೇಶ

ಅಮಿತ್ ಶಾ ‘ಗೂಂಡಾ’ ಅಷ್ಟೇ… ಬಿಜೆಪಿ ನಾಯಕನ ವಾಗ್ದಾಳಿ..!

Jiokannadanews Posted on 2 months ago

Trending News

ಸಿಎಂ ಡಿಕೆಶಿ ಜೊತೆ 13 ಶಾಸಕರಿಗೆ ಸಚಿವ ಸ್ಥಾನ! DK Shivakumar Takes Charge: 13 MLAs to Swear In as Ministers 1
  • ರಾಜ್ಯ

ಸಿಎಂ ಡಿಕೆಶಿ ಜೊತೆ 13 ಶಾಸಕರಿಗೆ ಸಚಿವ ಸ್ಥಾನ!

Posted on 6 hours ago
ಬೆಂಗಳೂರಿನಲ್ಲಿ ಘೋರ ದುರಂತ: ಭಾರೀ ಮಳೆಗೆ ಕಾಂಪೌಂಡ್ ಕುಸಿದು 7 ಮಂದಿ ಸಾವು! 1777475804134 2
  • ರಾಜ್ಯ

ಬೆಂಗಳೂರಿನಲ್ಲಿ ಘೋರ ದುರಂತ: ಭಾರೀ ಮಳೆಗೆ ಕಾಂಪೌಂಡ್ ಕುಸಿದು 7 ಮಂದಿ ಸಾವು!

Posted on 1 month ago
IPL 2026: ‘ಸೂರ್ಯವಂಶಿ’ ಎಂಬ ಸುನಾಮಿ vaibhav-sooryavanshi-3 3
  • ಕ್ರಿಕೆಟ್

IPL 2026: ‘ಸೂರ್ಯವಂಶಿ’ ಎಂಬ ಸುನಾಮಿ

Posted on 1 month ago
ನಲಪಾಡ್ ಇಡಿ ದಾಳಿ ಹಿಂದಿದೆ ಪೋರ್ಷೆ ಕಾರಿನ ರಹಸ್ಯ! Porsche Mystery Behind ED Raids on Nalapad! 4
  • ರಾಜ್ಯ

ನಲಪಾಡ್ ಇಡಿ ದಾಳಿ ಹಿಂದಿದೆ ಪೋರ್ಷೆ ಕಾರಿನ ರಹಸ್ಯ!

Posted on 1 month ago
ಕೃಷ್ಣನ ಮುಂದೆ ಚಿಕನ್ ಮಂದಿ: ಹೋಟೆಲ್ ಮಾಲೀಕ ಅರೆಸ್ಟ್ Vishu Poster Row: Restaurant Owner Jailed for Offensive Ad 5
  • ರಾಜ್ಯ

ಕೃಷ್ಣನ ಮುಂದೆ ಚಿಕನ್ ಮಂದಿ: ಹೋಟೆಲ್ ಮಾಲೀಕ ಅರೆಸ್ಟ್

Posted on 2 months ago

You may have missed

DK Shivakumar Takes Charge: 13 MLAs to Swear In as Ministers
  • ರಾಜ್ಯ

ಸಿಎಂ ಡಿಕೆಶಿ ಜೊತೆ 13 ಶಾಸಕರಿಗೆ ಸಚಿವ ಸ್ಥಾನ!

Jiokannadanews Posted on 6 hours ago
1777475804134
  • ರಾಜ್ಯ

ಬೆಂಗಳೂರಿನಲ್ಲಿ ಘೋರ ದುರಂತ: ಭಾರೀ ಮಳೆಗೆ ಕಾಂಪೌಂಡ್ ಕುಸಿದು 7 ಮಂದಿ ಸಾವು!

Jiokannadanews Posted on 1 month ago
vaibhav-sooryavanshi-3
  • ಕ್ರಿಕೆಟ್

IPL 2026: ‘ಸೂರ್ಯವಂಶಿ’ ಎಂಬ ಸುನಾಮಿ

Jiokannadanews Posted on 1 month ago
Porsche Mystery Behind ED Raids on Nalapad!
  • ರಾಜ್ಯ

ನಲಪಾಡ್ ಇಡಿ ದಾಳಿ ಹಿಂದಿದೆ ಪೋರ್ಷೆ ಕಾರಿನ ರಹಸ್ಯ!

Jiokannadanews Posted on 1 month ago

Categories

  • ಆಟೋಮೊಬೈಲ್
  • ಆರೋಗ್ಯ
  • ಉದ್ಯೋಗ
  • ಕ್ರಿಕೆಟ್
  • ಕ್ರೈಮ್
  • ಟೆಕ್
  • ದೇಶ
  • ರಾಜ್ಯ
  • ಸಿನಿಮಾ
  • Contact Us
  • About Us
  • Disclaimer
  • Terms and Conditions
  • Privacy Policy
Copyright © All rights reserved. | MoreNews by AF themes.