Skip to content

Jio Kannada News

Kannada News

banner-promo-full-green
Primary Menu
  • HOME
  • ರಾಜ್ಯ
  • ದೇಶ
  • ಉದ್ಯೋಗ
  • ಕ್ರಿಕೆಟ್
  • ಆರೋಗ್ಯ
  • ಸಿನಿಮಾ
  • ಕ್ರೈಮ್
  • ಆಟೋಮೊಬೈಲ್
  • ಟೆಕ್
  • Contact Us
Light/Dark Button
Wtach Live
  • Home
  • ಕ್ರಿಕೆಟ್
  • IND vs NZ: ಫೈನಲ್ ಪಂದ್ಯ ರದ್ದಾದ್ರೆ ಯಾರು ಚಾಂಪಿಯನ್?
  • ಕ್ರಿಕೆಟ್

IND vs NZ: ಫೈನಲ್ ಪಂದ್ಯ ರದ್ದಾದ್ರೆ ಯಾರು ಚಾಂಪಿಯನ್?

Jiokannadanews Posted on 6 months ago 1 minute read
if india vs new zealand final match cancelled due to rain who will win

IND vs NZ

ಟಿ20 ವಿಶ್ವಕಪ್​ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಮಾರ್ಚ್ 8 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನ ಅಂತಿಮ ಹಣಾಹಣಿಯಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಮೂರನೇ ಬಾರಿ ಟಿ20 ವಿಶ್ವಕಪ್ ಗೆದ್ದ ವಿಶ್ವದ ಮೊದಲ ತಂಡ ಎನಿಸಿಕೊಳ್ಳಲಿದೆ. ಅತ್ತ ನ್ಯೂಝಿಲೆಂಡ್ ತಂಡ ಗೆದ್ದರೆ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಇತಿಹಾಸ ನಿರ್ಮಿಸಲಿದೆ. ಹೀಗಾಗಿ ನಾಳಿನ (ಮಾ.8) ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಒಂದು ವೇಳೆ ಈ ನಿರ್ಣಾಯಕ ಪಂದ್ಯಕ್ಕೆ ಮಳೆ ಅಡಚಣೆಯನ್ನು ಉಂಟು ಮಾಡಿದರೆ, ಅಥವಾ ಕಾರಣಾಂತರಗಳಿಂದ ಮ್ಯಾಚ್​ ರದ್ದಾದರೆ ಯಾರು ಚಾಂಪಿಯನ್ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ…

  • ಮೀಸಲು ದಿನ: ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಫೈನಲ್ ಪಂದ್ಯಕ್ಕೆ ಮಾರ್ಚ್ 9 ರಂದು ಮೀಸಲು ದಿನವನ್ನು ನಿಗದಿಪಡಿಸಲಾಗಿದೆ. ಅಂದರೆ ನಿಗದಿತ ದಿನದಂದು (ಮಾರ್ಚ್ 8) ಪಂದ್ಯ ಪೂರ್ಣಗೊಳ್ಳದಿದ್ದರೆ, ಮರುದಿನ ಪಂದ್ಯ ಮುಂದುವರಿಯುತ್ತದೆ.
  • ಹೆಚ್ಚುವರಿ 90 ನಿಮಿಷಗಳು: ಇನ್ನು ಈ ಪಂದ್ಯವು ಕಾರಣಾಂತರದಿಂದ ವಿಳಂಬವಾದರೆ ಅಥವಾ ಮಳೆ ಅಡಚಣೆ ಉಂಟು ಮಾಡಿದರೆ ಹೆಚ್ಚುವರಿ 90 ನಿಮಿಷಗಳನ್ನು ಬಳಸಲಾಗುತ್ತದೆ. ಅಂದರೆ 11 ಗಂಟೆಗೆ ಮುಗಿಯುವ ಪಂದ್ಯವನ್ನು 12.30 ಗಂಟೆಯವರೆಗೆ ಮುಂದುವರೆಸಲಾಗುತ್ತದೆ.
  • ಕನಿಷ್ಠ ಓವರ್‌ಗಳ ನಿಯಮ: ಒಂದು ವೇಳೆ ಪಂದ್ಯವು ಅರ್ಧದಲ್ಲಿ ಸ್ಥಗಿತಗೊಂಡರೆ ಫಲಿತಾಂಶ ಘೋಷಿಸಲು ಎರಡೂ ತಂಡಗಳು ತಲಾ ಕನಿಷ್ಠ 10 ಓವರ್‌ಗಳನ್ನು ಆಡಿರುವುದು ಕಡ್ಡಾಯ. ಅಂದರೆ ಎರಡೂ ತಂಡಗಳು ಕನಿಷ್ಠ 10 ಓವರ್​ಗಳ ಬ್ಯಾಟಿಂಗ್ ಮಾಡಿದ್ದರೆ ಮಾತ್ರ ಡಕ್​ವರ್ತ್​ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ.
  • ಸೂಪರ್ ಓವರ್: ಒಂದು ವೇಳೆ ಪಂದ್ಯವು ಟೈ ಆದರೆ, ವಿಜೇತರನ್ನು ನಿರ್ಧರಿಸಲು ಸೂಪರ್ ಓವರ್ ನಡೆಸಲಾಗುತ್ತದೆ. ಮೊದಲ ಸೂಪರ್ ಓವರ್ ಕೂಡ ಟೈ ಆದರೆ, ಫಲಿತಾಂಶ ಬರುವವರೆಗೆ ಸತತವಾಗಿ ಸೂಪರ್ ಓವರ್‌ಗಳನ್ನು ನಡೆಸುವ ನಿಯಮವಿದೆ.

ಮೀಸಲು ದಿನದಲ್ಲಿ ಪಂದ್ಯ ನಡೆಯುವುದು ಹೇಗೆ?

ಮಾರ್ಚ್ 8 ರಂದು ಮಳೆ ಬಂದು ಪಂದ್ಯ ಸ್ಥಗಿತಗೊಂಡರೆ ಮರುದಿನ ಪಂದ್ಯವನ್ನು ಆಯೋಜಿಸಲಾಗುತ್ತದೆ. ಆದರೆ ಇಲ್ಲಿ ಮೊದಲ ದಿನ ಪಂದ್ಯ ಎಲ್ಲಿ ನಿಂತಿತ್ತೋ, ಅಲ್ಲಿಂದಲೇ ಮುಂದುವರೆಸಲಾಗುತ್ತದೆ. ಅಂದರೆ ಹೊಸದಾಗಿ ಪಂದ್ಯ ಶುರುವಾಗುವುದಿಲ್ಲ. ಬದಲಿಗೆ ನಿಗದಿತ ದಿನದಂದು ಕೊನೆಗೊಂಡಿದ್ದಲ್ಲಿಂದಲೇ ಮ್ಯಾಚ್ ಮುಂದುವರೆಯಲಿದೆ.

ಇದನ್ನೂ ಓದಿ: IPL 2026: ಐಪಿಎಲ್​ ಆರಂಭಕ್ಕೆ ಡೇಟ್ ಫಿಕ್ಸ್​

ಮೀಸಲು ದಿನ ಕೂಡ ರದ್ದಾದರೆ ಯಾರು ಚಾಂಪಿಯನ್?

ನಿಗದಿತ ದಿನದಂದು ಫೈನಲ್ ಪಂದ್ಯ ನಡೆಯದಿದ್ದರೆ ಮೀಸಲು ದಿನದಲ್ಲಿ ಮ್ಯಾಚ್ ಮುಂದುವರೆಸಲಾಗುತ್ತದೆ. ಇನ್ನು ಮೀಸಲು ದಿನದಂದು ಕೂಡ ಮಳೆ ಬಂದು ಕನಿಷ್ಠ ಓವರ್‌ಗಳ ಆಟ ಸಾಧ್ಯವಾಗದಿದ್ದರೆ, ಭಾರತ ಮತ್ತು ನ್ಯೂಝಿಲೆಂಡ್ ಎರಡೂ ತಂಡಗಳನ್ನು ‘ಜಂಟಿ ವಿಜೇತರು’ ಎಂದು ಘೋಷಿಸಿ ಟ್ರೋಫಿಯನ್ನು ಹಂಚಲಾಗುತ್ತದೆ.

 

About the Author

Jiokannadanews

Administrator

jiokannadanews.com

Visit Website View All Posts
Tags: T20 World Cup

Post navigation

Previous: ಈ ಸಮಸ್ಯೆಗಳಿಗೆ ಇದುವೇ ‘ಮನೆಮದ್ದು’
Next: ಕರ್ನಾಟಕದ್ದು ‘ಹಲಾಲ್’ ಬಜೆಟಾ? ಇಲ್ಲಿದೆ ನಿಜಾಂಶ

Related Stories

India’s squad for Afghanistan T20I series
  • ಕ್ರಿಕೆಟ್

ಭಾರತ ಟಿ20 ತಂಡ ಪ್ರಕಟ

Jiokannadanews Posted on 1 week ago
Did You Know About These 11 Types Of No Balls In Cricket?
  • ಕ್ರಿಕೆಟ್

ಕ್ರಿಕೆಟ್​​ನಲ್ಲಿರುವ 11 ನೋಬಾಲ್​ ಬಗ್ಗೆ ಗೊತ್ತಿದ್ಯಾ?

Jiokannadanews Posted on 2 weeks ago
Aryavir Sehwag - Anvay Dravid
  • ಕ್ರಿಕೆಟ್

ಟೀಮ್ ಇಂಡಿಯಾಗೆ ಸೆಹ್ವಾಗ್, ದ್ರಾವಿಡ್ ಪುತ್ರರ ಎಂಟ್ರಿ

Jiokannadanews Posted on 2 weeks ago

Trending News

ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು 8 ತಿಂಗಳ ಬಳಿಕ ಪತ್ತೆ! Missing Bengaluru Girls Found After 8 Months 1
  • ಕ್ರೈಮ್
  • ರಾಜ್ಯ

ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು 8 ತಿಂಗಳ ಬಳಿಕ ಪತ್ತೆ!

Posted on 2 days ago
ಆಕಾಶದಲ್ಲೇ ಏರ್ ಇಂಡಿಯಾ ವಿಮಾನದ ಹೈಡ್ರಾಲಿಕ್ಸ್ ಫೇಲ್! Air India Mid-Air Terror: 3 Hydraulics Fail 2
  • ದೇಶ

ಆಕಾಶದಲ್ಲೇ ಏರ್ ಇಂಡಿಯಾ ವಿಮಾನದ ಹೈಡ್ರಾಲಿಕ್ಸ್ ಫೇಲ್!

Posted on 6 days ago
ಬಾಸ್ಕೆಟ್‌ಬಾಲ್ ಪಂದ್ಯಾವಳಿ: ಪ್ರಚಂಡ ಪ್ರದರ್ಶನ ನೀಡಿದ ಸೇಂಟ್ ಜೋಸೆಫ್ಸ್ St. Joseph's Madikeri 3
  • ರಾಜ್ಯ

ಬಾಸ್ಕೆಟ್‌ಬಾಲ್ ಪಂದ್ಯಾವಳಿ: ಪ್ರಚಂಡ ಪ್ರದರ್ಶನ ನೀಡಿದ ಸೇಂಟ್ ಜೋಸೆಫ್ಸ್

Posted on 1 week ago
ಪಾಕಿಸ್ತಾನದಲ್ಲಿ 125 ವರ್ಷಗಳ ಹಳೆಯ ಹಿಂದೂ ದೇವಾಲಯ ಧ್ವಂಸ! India Slams Pakistan Over Demolition of 125-Year-Old Hindu Temple 4
  • ದೇಶ

ಪಾಕಿಸ್ತಾನದಲ್ಲಿ 125 ವರ್ಷಗಳ ಹಳೆಯ ಹಿಂದೂ ದೇವಾಲಯ ಧ್ವಂಸ!

Posted on 1 week ago
ಗಲ್ಲು ಶಿಕ್ಷೆ ನೀಡಿ, ಪತ್ನಿಗೆ ವಿಚ್ಛೇದನ ನೀಡುತ್ತೇನೆ! Yasin Malik Seeks Death Penalty, Announces Divorce From Pak Wife 5
  • ದೇಶ

ಗಲ್ಲು ಶಿಕ್ಷೆ ನೀಡಿ, ಪತ್ನಿಗೆ ವಿಚ್ಛೇದನ ನೀಡುತ್ತೇನೆ!

Posted on 1 week ago

You may have missed

Missing Bengaluru Girls Found After 8 Months
  • ಕ್ರೈಮ್
  • ರಾಜ್ಯ

ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು 8 ತಿಂಗಳ ಬಳಿಕ ಪತ್ತೆ!

Jiokannadanews Posted on 2 days ago
Air India Mid-Air Terror: 3 Hydraulics Fail
  • ದೇಶ

ಆಕಾಶದಲ್ಲೇ ಏರ್ ಇಂಡಿಯಾ ವಿಮಾನದ ಹೈಡ್ರಾಲಿಕ್ಸ್ ಫೇಲ್!

Jiokannadanews Posted on 6 days ago
St. Joseph's Madikeri
  • ರಾಜ್ಯ

ಬಾಸ್ಕೆಟ್‌ಬಾಲ್ ಪಂದ್ಯಾವಳಿ: ಪ್ರಚಂಡ ಪ್ರದರ್ಶನ ನೀಡಿದ ಸೇಂಟ್ ಜೋಸೆಫ್ಸ್

Jiokannadanews Posted on 1 week ago
India Slams Pakistan Over Demolition of 125-Year-Old Hindu Temple
  • ದೇಶ

ಪಾಕಿಸ್ತಾನದಲ್ಲಿ 125 ವರ್ಷಗಳ ಹಳೆಯ ಹಿಂದೂ ದೇವಾಲಯ ಧ್ವಂಸ!

Jiokannadanews Posted on 1 week ago

Categories

  • Trending News
  • Uncategorized
  • ಆಟೋಮೊಬೈಲ್
  • ಆರೋಗ್ಯ
  • ಉದ್ಯೋಗ
  • ಕ್ರಿಕೆಟ್
  • ಕ್ರೈಮ್
  • ಟೆಕ್
  • ದೇಶ
  • ರಾಜ್ಯ
  • ಸಿನಿಮಾ
  • Contact Us
  • About Us
  • Disclaimer
  • Terms and Conditions
  • Privacy Policy
Copyright © All rights reserved. | MoreNews by AF themes.